Asianet Suvarna News Asianet Suvarna News

ಬೆಳ್ಳುಳ್ಳಿ ಕಬಾಬ್‌ ಚಂದ್ರು ಯಾರು? ನಟಿ ಮಾಲಾಶ್ರೀ ಮೇಕಪ್ ಮ್ಯಾನ್ ಅಗಿದ್ದು ನಿಜನಾ

ನಿಮ್ಮನೆ ಚಂದ್ರು ಅಭಿಮಾನಿಗಳಿಗೆ ಗುಡ್ ನ್ಯೂಸ್. ಅಡುಗೆ ಮನೆ ಸೇರುವ ಮುನ್ನ ಚಂದ್ರು ಏನ್ ಮಾಡ್ತಿದ್ರು?

Belluli Kabab Nimmane Chandru was said to be Malashree makeup artist vcs
Author
First Published Feb 8, 2024, 3:18 PM IST

ಸಾಮಾಜಿಕ ಜಾಲತಾಣದಲ್ಲಿ ಯಾವಾಗ ನೋಡಿದರೂ ಕಾಣಿಸುವುದು ನಿಮ್ಮನೆ ಚಂದ್ರು ಬೆಳ್ಳುಳ್ಳಿ ಕಬಾಬ್ ವಿಡಿಯೋ. ವೆರೈಟಿ ವೆರೈಟಿ ಸಾಂಬರ್, ರಸಂ, ಚಾಪ್ಸ್‌ ಮತ್ತು ಡ್ರೈ ಐಟಂ ಮಾಡುವುದರಲ್ಲಿ ಚಂದ್ರು ಸಖತ್ ಫೇಮಸ್‌. ಇತ್ತೀಚಿಗೆ ಚಂದ್ರು ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಚಂದ್ರು ರೆಸಿಪಿ ಟ್ರೈ ಮಾಡಿ ಕರೆ ಮಾಡುತ್ತಿದ್ದಾರೆ. ಅಷ್ಟೇ ಸಾಲದು ಅಂತ ಅವರ ಹೋಟೆಲ್‌ಗೆ ಭೇಟಿ ನೀಡಿ ಸೆಲ್ಫಿ ತಗೋಳದು ಏನು ಎಲ್ಲಾ ಚಿಕನ್ ಮಟನ್ ಐಟಂ ಟ್ರೈ ಮಾಡೋದು ಏನು. ಜನನೋ ಜನ.

ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ವೈರಲ್ ಆಗುತ್ತಿದೆ. ಏನೆಂದರೆ ನಿಮ್ಮನೆ ಚಂದ್ರು ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಅಂತ. ಕನಸಿನ ರಾಣಿ ನಟಿ ಮಾಲಾಶ್ರೀಗೆ ಮೇಕಪ್ ಮ್ಯಾನ್ ಆಗಿದ್ದರು ಎನ್ನಲಾಗಿ. ಇದನ್ನು ಎಲ್ಲೂ ಸಾಕ್ಷಿ ಇಲ್ಲ ಆದರೆ ಟ್ರೋಲ್‌ ವೈರಲ್‌ ಆಗುತ್ತಿದೆ. ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆ ಮತ್ತು ಶಿವಾನಂದ ಸರ್ಕಲ್ ಬಳಿ ಇರುವ ಹೋಟೆಲ್‌ನಲ್ಲಿ ಚಂದ್ರು ಕನ್ನಡ ಚಿತ್ರರಂಗ ದಿಗ್ಗಜ ನಟರ ಜೊತೆ ಸೆರೆ ಹಿಡಿದಿರುವ ಫೋಟೋಗಳನ್ನು ನೋಡಬಹುದು. ಬಹಳ ವರ್ಷಗಳ ಹಿಂದೆ ನಟ-ನಟಿಯರು ಚಂದ್ರು ಹೋಟೆಲ್‌ಗೆ ಬಂದು ಅಡುಗೆ ಮಾಡಿ ರುಚಿ ನೋಡಿ ಸೂಪರ್ ಎಂದಿದ್ದಾರೆ. 

ಲಕ್ನೋದ ಪ್ರಸಿದ್ಧ ತುಂಡೆ ಕಬಾಬ್ ಪರಿಚಯಿಸಿದ Dr. Bro, ಬಾಲಿವುಡ್ ಸ್ಟಾರ್ಸ್ಗೆ ಇಷ್ಟವಿದು, ಏನಿದರ ಸ್ಪೆಷಲ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಸಮಯದಲ್ಲಿ ಒಂದು ಆಡಿಯೋ ವೈರಲ್ ಆಯ್ತು. ಪುನೀತ್ ಹೀಗೆ ಒಂದು ಊರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿರುತ್ತಾರೆ ಅಲ್ಲಿ ಮಟನ್ ಸಾರು ಅಡುವೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಎಷ್ಟು ಜನರಿಗೆ ಎಷ್ಟು ಮಟನ್ ತರಬೇಕು ಯಾರ ರೀತಿ ಮಾಡಬೇಕು ಎಂದು ಚಂದ್ರು ಫೋನ್ ಮಾಡಿ ಕೇಳುತ್ತಾರೆ. ಬಾಸ್ ಬಾಸ್ ಎಂದು ಚಂದ್ರು ಮಾತನಾಡುತ್ತಾರೆ. ಯಾರು ಇದು ಚಂದ್ರು? ಪುನೀತ್ ರಾಜ್‌ಕುಮಾರ್ ಫೋನ್ ಮಾಡಿ ಕೇಳ್ತಿದ್ದಾರೆ ಅಂತ ಜನ ಹುಡುಕಲು ಶುರು ಮಾಡುತ್ತಾರೆ. ಯಾರೇ ತಮ್ಮ ಹೋಟೆಲ್‌ಗೆ ಭೇಟಿ ನೀಡಿದರೂ ಚಂದ್ರು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. 

Follow Us:
Download App:
  • android
  • ios