ಸೋಷಿಯಲ್ ಮೀಡಿಯಾದಲ್ಲಿ ಒಂದು ಸಲ ಟ್ರೆಂಡ್ ಆದ್ರೆ ಸಾಕು, ಟ್ರೋಲಿಗರು ಅದನ್ನು ಸೂಪರ್ ಟ್ರೆಂಡಿಂಗ್ ಮಾಡುತ್ತಾರೆ. ಇದೇನಪ್ಪಾ ಎಲ್ಲಿ ನೋಡಿದರೂ ಬಾ ಗುರು, ಬಾ ಗುರು ಅಂತಿದ್ದಾರೆ ಜನರು. ಯಾರಿಗೆ ಹೇಳ್ತಿದ್ದಾರೆ? ಇದ್ಯಾವ ನಮೂನಿ ಸ್ಟೈಲ್ ಅಂತ ಕನ್ಫ್ಯೂಸ್ ಆಗಬೇಡಿ. ಯಾಕಂದ್ರೆ ಇಲ್ಲಿ ಅದಕ್ಕೆ ಕ್ಲಾರಿಟಿ ಸಿಕ್ಕಿದೆ...

'ಮಾಣಿಕ್ಯ' ನಟಿ ಖಾತೆಯಿಂದ ಅಶ್ಲೀಲ ಸಂದೇಶ; ನೆಟ್ಟಿಗರ ಆಕ್ರೋಶ? 

ಬೆಂಗಳೂರಿನ ಬಹುತೇಕ ಭಾಗದಲ್ಲಿ 'ಬಾ ಗುರು' ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಉದಾಹರಣೆಗೆ ಬಾ ಗುರು, ಟೀ ಕುಡಿಯೋಣ, ಏನೂ ಅಗೋಲ್ಲ ಬಾ ಗುರು, ಅಲ್ಲಿ ಹೋಗೋಣ ಅನ್ನುವ ರೀತಿಯಲ್ಲಿ.... ಈ ಪದವನ್ನು ಬಳಸುತ್ತಲೇ ಇರುತ್ತಾರೆ. ಟ್ರೋಲ್ ಪೇಜ್‌ಗಳಲ್ಲಿ ಇದು ವೈರಲ್ ಆಗುತ್ತಿದ್ದಂತೆ, ಎಲ್ಲವಕ್ಕೂ ಬಾ ಗುರು ಅಂತ ಹೇಳುವುದನ್ನೂ ಮತ್ತಷ್ಟೂ ಜಾಸ್ತಿ ಮಾಡಿದ್ದಾರೆ ಮಂದಿ. ಆದರಿದು ಕೇವಲ ತಮಾಷೆಗಾಗಿ ಮಾತ್ರ...

 

ಇದೀಗ 'ಬಾ ಗುರು' ಅನ್ನುವುದನ್ನು ನಟ ಗಣೇಶ್‌ ಸಿನಿಮಾಗಳಿಗೆ ಹೇಳಲು ಶುರುವಿಟ್ಟುಕೊಂಡಿದ್ದಾರೆ. ಗಣೇಶ್ ಮಾಡಿರುವ ಬಹುತೇಕ ಸಿನಿಮಾಗಳಲ್ಲಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡುವುದೇ ಹೆಚ್ಚು. 'ಮುಂಗಾರು ಮಳೆ', 'ಅರಮನೆ', 'ಚೆಲುವಿವ ಚಿತ್ತಾರ', 'ಮುಗುಳು ನಗೆ' ಹಾಗೂ '99' ಸಿನಿಮಾ ಫೋಟೋಗಳನ್ನು ಒಟ್ಟಾಗಿ ಸೇರಿಸಿ 'ಬಾ ಗುರು, ತ್ಯಾಗ ಮಾಡು' ಎಂದು ಬರೆದು ಫೋಟೋ ವೈರಲ್ ಮಾಡುತ್ತಿದ್ದಾರೆ. 

ನಿವೇದಿತಾ ಸಖತ್ ಡ್ಯಾನ್ಸ್ ಮಾಡಿದ್ರೆ ಹಿಂಗ್ ಹೇಳೋದಾ ಫ್ಯಾನ್ಸ್?

ಇದಕ್ಕೆ ನೆಟ್ಟಿಗರು ಸಿಂಗಲ್ ಹುಡುಗರ ಹಣೆ ಬರಹವೇ ಇಷ್ಟು, ಲೈಫ್‌ ಇಷ್ಟೇನೆ ಎಂದರೆ, ಇನ್ನು ಕೆಲವರು ಚಿತ್ರರಂಗದ ತ್ಯಾಗರಾಜ ಸ್ಟಾರ್ ಗಣೇಶ್‌ ಎಂದು ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಟ್ರೋಲ್‌ ಪೇಜ್‌ಗಳು ಇವನ್ನೆಲ್ಲಾ ತಮಾಷೆಗಾಗಿ ಮಾಡೋದು. ಬಾ ಗುರು, ನೀನೂ ನೋಡಿ ಎಂಜಾಯ್ ಮಾಡು.