ಕೊರೋನಾ ವೈರಸ್ ಲಾಕ್‌ಡೌನ್‌ನಲ್ಲಿ ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ಮಕ್ಕಳ ವಿಡಿಯೋ ಹಾಗೂ ಫೋಟೋ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಆದರೆ ಅಭಿಮಾನಿಗಳು ಮೆಸೇಜ್ ಮಾಡಿ ಮಕ್ಕಳನ್ನು ನೋಡಬೇಕು ಎಂದು ಕೇಳುತ್ತಿದ್ದ ಕಾರಣ, ರಾಧಿಕಾ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. 

ಎರಡು ಜುಟ್ಟು, ಕಲರ್‌ಫುಲ್ ಕೂಲಿಂಗ್ ಗ್ಲಾಸ್‌; ಐರಾ ಯಶ್‌ ಸಮ್ಮರ್ ಲುಕ್ ವೈರಲ್! 

ಐರಾ ಪುಟ್ಟ ಮಗುವಿದ್ದಾಗ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯುತ್ತಿದ್ದ ವಿಡಿಯೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಐರಾ ತನ್ನ ನೆರಳು ನೋಡಿ ಹಾಯ್ ಹಾಯ್ ಎಂದು ಮಾತನಾಡಿಸಿ, ಸಂತೋಷ ಪಟ್ಟಿದ್ದಾಳೆ. 'ಐರಾ ನಡೆಯುವುದಕ್ಕೆ ಶುರು ಮಾಡಿದಾಗ ಸೆರೆ ಹಿಡಿದ ವಿಡಿಯೋ ಇದು. ನಡೆಯುವಾಗ ಆಕೆಯ ಹೊಸ ಗೆಳತಿಯ ನೆರಳು ಸಿಕ್ಕಳು. ಮಕ್ಕಳ ಬಗ್ಗೆ ಅದ್ಭುತ ಸಂಗತಿಯೆಂದರೆ ಅವರು ಎಲ್ಲರ ಬಗ್ಗೆಯೂ ಒಂದೇ ರೀತಿಯ ಮುಗ್ಧ ಭಾವನೆ ಹೊಂದಿರುತ್ತಾರೆ. ಮಕ್ಕಳು ಯಾರನ್ನೂ ಜಡ್ಜ್ ಮಾಡುವುದಿಲ್ಲ,' ಎಂದು ರಾಧಿಕಾ ಬರೆದುಕೊಂಡಿದ್ದಾರೆ. 

ರಾಧಿಕಾ ಇಬ್ಬರು ಮಕ್ಕಳ ಪಕ್ಕ ಕುಳಿತು ಸಮುದ್ರ ನೋಡುತ್ತಿರುವ ಫೋಟೋ ಅಪ್ಲೋಡ್ ಮಾಡಿ, 'ಇದು ತುಂಬಾನೇ ಕಷ್ಟವಾದ ಸಮಯ. ನೋವು, ಸಂಕಟ, ಒಬ್ಬರನ್ನು ಕಳೆದುಕೊಳ್ಳುವ ಸಂಕಟ ಎಲ್ಲರಿಗೂ ಎಲ್ಲವೂ ಗೊತ್ತು ಮಾಡಿದೆ ಈ ಪರಿಸ್ಥಿತಿ. ಮುಂದೇನು ಎಂದು ತಿಳಿಯದೇ ನಾವೆಲ್ಲರೂ ಮಾನಸಿಕ ಸಂಕಟದಲ್ಲಿ ಸಿಲುಕಿರುವೆವು.  ಆದರೆ ನೀವೆಲ್ಲರೂ ನಿಮಗೆ ನೀವು ಒಂದು ಕಿವಿ ಮಾತು ಹೇಳಿಕೊಳ್ಳಬೇಕು.  ಎಷ್ಟು ಕೆಟ್ಟ ಪರಿಸ್ಥಿತಿ ಎದುರಾದರೂ ನಾನು ಧೈರ್ಯ ಹಾಗೂ ನಂಬಿಕೆ ಕಳೆದುಕೊಳ್ಳುವುದಿಲ್ಲ ಎಂದು. ಎಲ್ಲರೂ ಒಟ್ಟಾಗಿ ನಿಂತು ಎದುರಿಸೋಣ. ನನ್ನ ಹಿತೈಷಿ ಹಾಗೂ ಫ್ಯಾನ್‌ಗಳಿಗೆ ಕ್ಷಮೆ ಕೇಳುವೆ, ಯಾರ ಸಂಪರ್ಕದಲ್ಲಿಯೂ ಇರಲಿಲ್ಲ ಹಾಗೂ ಏನೂ ಪೋಸ್ಟ್ ಮಾಡುತ್ತಿರಲಿಲ್ಲ. ಇನ್ನು ಮುಂದೆ ಪಾಸಿಟಿವ್ ವಿಚಾರಗಳನ್ನು ಹಂಚಿಕೊಳ್ಳುವೆ. ನಿಮ್ಮ ಮುಖದಲ್ಲಿ ನಗು ತರಿಸುವೆ,' ಎಂದು ರಾಧಿಕಾ ಬರೆದಿದ್ದಾರೆ.