ತಾತನ ಹುಟ್ಟುಹಬ್ಬದಲ್ಲಿ ಭಾಗಿಯಾದ ಐರಾ ಹಾಗೂ ಯಥರ್ವ್‌. ಕೇಕ್‌ ಮೇಲೆ ಇಬ್ಬರ ಕಣ್ಣು.... 

ಸ್ಯಾಂಡಲ್‌ವುಡ್‌ ಸ್ಟಾರ್ ಕಿಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಯಶ್ ಮಕ್ಕಳು ಐರಾ ಹಾಗೂ ಯಥರ್ವ್‌ ತಾತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ರಾಧಿಕಾ ಮನೆಯಲ್ಲಿ ಕೇಕ್‌ ತಯಾರಿಸುವ ಕಾರಣ ಅಭಿಮಾನಿಗಳು ಕೇಕ್‌ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿದ್ದಾರೆ. 

ಯಶ್‌ ಪರ್ಫೆಕ್ಟ್‌ ಆಗಲು ಕಾರಣ ಗೊತ್ತಾ? ರಾಧಿಕಾ ಹೇಳ್ತಿದ್ದಾರೆ ಕೇಳಿ 

ರಾಧಿಕಾಗಿಂತಲೂ ಮೊಮ್ಮಕ್ಕಳು ತಾತನಿಗೆ ಹೊಂದಿಕೊಂಡಿದ್ದಾರೆ ಎಂದರೆ ತಪ್ಪಾಗದು. ಇದುವರೆಗೂ ರಾಧಿಕಾ ಶೇರ್ ಮಾಡಿರುವ ನಾಮಕರಣ ಹಾಗೂ ಹುಟ್ಟುಹಬ್ಬದ ವಿಡಿಯೋಗಳಲ್ಲಿ ಐರಾ ಹಾಗೂ ಯಥರ್ವ್‌ ತಾತ-ಅಜ್ಜಿ ಜೊತೆಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಪಂಡಿತ್ ಕೇಕ್ ಕಟ್ ಮಾಡುವ ಯಥರ್ವ್‌ ತಾತನ ತೊಡೆಯ ಮೇಳೆ ಕುಳಿತುಕೊಂಡಿದ್ದಾನೆ, ಐರಾ ಕ್ರಿಸ್ಮಸ್‌ ಹಬ್ಬದ ದಿನ ಧರಿಸಿದ್ದ ಫ್ರಾಕ್‌ ತೊಟ್ಟು ನಿಂತಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಾಧಿಕಾ ಪಂಡಿತ್ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡು ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‌ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.