ನಟ ಕಿಶೋರ್ ಟ್ವಟರ್ ಖಾತೆ ಹ್ಯಾಕ್. ದೈವದ ಕುರಿತ ಪೋಸ್ಟ್‌ನಿಂದ ಕಿಶೋರ್ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಸುಳ್ಳು.... 

ಕನ್ನಡ ಚಿತ್ರರಂಗದ ವರ್ಸಟೈಲ್ ನಟ ಕಿಶೋರ್ ಕುಮಾರ್ ಕಾಂತಾರ ಚಿತ್ರದ ಬಗ್ಗೆ ಹಾಗೂ ಮೂಡ ನಂಬಿಕೆ ಬಗ್ಗೆ ಬರೆದುಕೊಂಡ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಕಿಶೋರ್‌ ಪೋಸ್ಟ್‌ನಿಂದ ಪರ-ವಿರೋಧ ಚರ್ಚೆ ಕೂಡ ಆಗಿತ್ತು ಇದರ ಬೆನ್ನಲ್ಲೇ ಕಿಶೋರ್ ಟ್ವಿಟರ್ ಖಾತೆ ಸಸ್ಪೆಂಡ್ ಮಾಡಲಾಗಿದೆ ಎನ್ನುವ ಮಾತುಗಳಿತ್ತು. ಸಾವಿರಾರೂ ಜನರಿಗೆ ಒಂದೊಂದು ರೀತಿ ಕಥೆ ಹೇಳುತ್ತಿರುವ ಕಾರಣ ಬೇಸರಗೊಂಡು ಸ್ವತಃ ಕಿಶೋರ್ ಫೇಸ್‌ಬುಕ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

ಕಿಶೋರ್ ಪೋಸ್ಟ್‌:

'ಅನವಶ್ಯಕ ಉಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ. ನನ್ನ ಟ್ವಿಟರ್ ಅಕೌಂಡ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖುರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದು ಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು' ಎಂದು ಕಿಶೋರ್ ಬರೆದುಕೊಂಡಿದ್ದಾರೆ.

ಕಾಂತಾರ ಸಿನಿಮಾದಲ್ಲಿ ಕಿಶೋರ್ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಶೋರ್ ನಟನೆ ಹೇಗಿದೆ ಅಂದ್ರೆ ಎಂಥವರಿಗೂ ಸಿಟ್ಟು ಬರಿಸುತ್ತದೆ ಆನಂತರ ನಟನೆ ಮೆಚ್ಚಿಕೊಳ್ಳಬೇಕು ಅನಿಸುತ್ತದೆ. ಹೀಗಿರುವಾಗ ಯಾಕೆ ಕಾಂತಾರ ವಿರುದ್ಧ ಅಥವಾ ದೈವದ ಬಗ್ಗೆ ಕಿಶೋರ್ ಮಾತನಾಡುತ್ತಾರೆಂದು ಅಭಿಮಾನಿಗಳು ನಟನ ಪರ ಬ್ಯಾಕ್ ಬೀಸಿದ್ದಾರೆ. 'ಏನೇ ಆಗಲಿ ನಿಮ್ಮ ಜನಪರ ಕಾಳಜಿ ಹೀಗೆ ಮುಂದುವರೆಯಲಿ, ಸತ್ಯದ ದಾರಿಯಲ್ಲಿ ಕಷ್ಟಗಳೇ ಹೆಚ್ಚು. ನಿಮ್ಮ ಸತ್ಯದ ಪರ ಹೋರಾಟದಲ್ಲಿ ನಿಮ್ಮ ಜೊತೆ ತುಂಬಾ ಜನ ಇರುತ್ತಾರೆ ಇದು ನನ್ನ ನಂಬಿಕೆ, ಸಾಧ್ಯವಾದರೆ ನಿಮ್ಮ ಟ್ವಿಟರ್‌ ಪುಟಕ್ಕೆ ಅಧಿಕೃತ ಚಿನ್ನೆ ಪಡೆದರೆ ಒಳ್ಳೇದು. ನೀವು ಹಂಚುವ ವಿಚಾರಗಳು ಹಂಚಲು ಸಹಾಯವಾಗುತ್ತದೆ' ಎಂದು ನೆಟ್ಟಿಗರು ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. 

ದೈವದ ಬಗ್ಗೆ ಏನಿದು ಪೋಸ್ಟ್:

'ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?? 
ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು. 

ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. 
ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? 
ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. 

ದೈವ, ದೆವ್ವ ನಮ್ಮ ನಂಬಿಕೆಯಷ್ಟೇ, ಅವಮಾನಿಸುವ ಅವಶ್ಯಕತೆ ಇಲ್ಲ; ಕಾಂತಾರ ವೈರಲ್ ವಿಡಿಯೋಗೆ ಕಿಶೋರ್ ರಿಯಾಕ್ಷನ್

ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ.

ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ.'

ಈ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳ ಕಾಮೆಂಟ್‌ ಕೂಡ ವೈರಲ್ ಆಗಿದೆ. 'ಸರ್ ನಿಮ್ಮ ಅಭಿಪ್ರಾಯ ಸರಿಯಾಗಿದೆ.‌ದೈವ ಇದೆ ಅಂದರೆ ಇದೆ ಇಲ್ಲ ಅಂದರೆ ಇಲ್ಲ ಯಾವುದೆ ಚಲನಚಿತ್ರಗಳು ಮೌಡ್ಯಗಳಿಂದ ಹೊರತರುವಂತಹದ್ದಾಗಿರ ಬೇಕೆ ‌ವಿನಹ ಮೌಡ್ಯದಲ್ಲಿಡ ಬಾರದು. ಕಾಂತರ ಮೂವಿನಲ್ಲಿ ನಿಮ್ಮ ನಟನೆ ಸೂಪರ್.ಎಲ್ಲೋ ಒಂದು ಕಡೆ ಆ ಚಿತ್ರದ ನಾಯಕ ನೀವೆ ಎಂಬ ರೀತಿಯಲ್ಲಿ ಚಿತ್ರ ಕೊನೆಯಾಗುತ್ತದೆ. ಅಂದರೆ ನಂಬಿಕೆಗಳು ಏನೇ ಇದ್ದರು ವಾಸ್ತವದಲ್ಲಿರ ಬೇಕು ಎಂಬಂತೆ. ಆ ಪಾತ್ರ ವಾಸ್ತವದಲ್ಲಿ ಕೊನೆಯಾಗುತ್ತದೆ.' ಎಂದು ಕಾಮೆಂಟ್‌ನಲ್ಲಿ ಬರೆದಿದ್ದರು.