ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಆಘಾತ. 78 ವರ್ಷದ ತಂದೆ ಆರೋಗ್ಯವಾಗಿದ್ದರು. ಆದರೆ, ದಿಢೀರ್ ಕೊನೆಯುಸಿರೆಲೆದಿದ್ದು ಎಲ್ಲರಿಗೂ ದೊಡ್ಡ ಆಘಾತವಾಗಿದೆ. 

ರಾಜ್‌ಕುಮಾರ್ ಕುಟುಂಬದ ಕಿರಿ ಸೊಸೆ, ಪುನೀತ್ ರಾಜ್‌ಕುಮಾರ್ ಪತ್ನಿ, ಪಿಆರ್‌ಕೆ ಸಂಸ್ಥೆಯ ಒಡತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಅಘಾತ ಎದುರಾಗಿದೆ. ಆರೋಗ್ಯವಾಗಿಯೇ ಸ್ನೇಹಿತರ ಜೊತೆ ವಾಕಿಂಗ್ ಮಾಡುತ್ತಿದ್ದ ತಂದೆ ರೇವನಾಥ್ ಕೊನೆ ಉಸಿರೆಳೆದಿದ್ದಾರೆ.

ಅಪ್ಪು ನಿಧನದ ನೋವು ಮರೆಯಾಗೋ ಮುನ್ನವೇ ಅಶ್ವಿನಿ ಅವರಿಗೆ ಮತ್ತೊಂದು ಶಾಕ್ ಇದು. ಅಶ್ವಿನಿ ಅವರ ತಂದೆ ರೇವನಾಥ್‌ ಮನೆಯವರು ಮತ್ತು ಸ್ನೇಹಿತರ ಜೊತೆ ವಾಕಿಂಗ್ ಮಾಡುತ್ತಾ ಓಡಾಡಿಕೊಂಡಿದ್ರು. ಆದರೆ ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ರೇವನಾಥ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 

ರೇವನಾಥ್‌ ಅವರು ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದಾರೆ. ಹಿರಿಯ ರಾಜಕಾರಣಿ ಡಿಬಿ ಚಂದ್ರೇಗೌಡ ಅವರ ಹತ್ತಿರದ ಸಂಬಂಧಿ. ರೇವನಾಥ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭಾಗಮನೆಯವರು.

ಅಳಿಯಾ ಪುನೀತ್ ರಾಜ್‌ಕುಮಾರ್‌ನಂತೆ ಸಾವಿನಲ್ಲೂ ಸಾರ್ಥಕಥೆ ಮೆರೆದಿದ್ದಾರೆ ಅಶ್ವಿನಿ ತಂದೆ ರೇವನಾಥ್. ಹೃದಯಾಘಾತದಿಂದ ಮೃತಪಟ್ಟಿರುವ ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ರಾಜ್‌ಕುಮಾರ್ ಐ ಬ್ಯಾಂಕ್‌ ಸಿಬ್ಬಂದಿ ಅಗಮಿಸಿ, ಕಣ್ಣು ತೆಗೆದುಕೊಳ್ಳುತ್ತಿದ್ದಾರೆ. ಇದಾದ ನಂತರ ಆರ್‌ಟಿ ನಗರದ ನಿವಾಸ ಅಥವಾ ಚಿಕ್ಕಮಗಳೂರಿಗೆ ಮೃತದೇಹವನ್ನು ರವಾನ ಮಾಡುವ ಸಾಧ್ಯತೆ ಇದೆ. ನಟ ಶ್ರೀಮುರಳಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 

RIP Kalatapasvi Rajesh: ಸ್ಯಾಂಡಲ್‌ವುಡ್ ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ವಿಧಿವಶ!

ಅಳಿಯ ಪುನೀತ್ ರಾಜ್‌ಕುಮಾರ್ ಅಗಲಿದ ಸಮಯದಲ್ಲಿ ಮಗಳಿಗೆ ಬೆನ್ನೆಲುಬಾಗಿ ನಿಂತುಕೊಂಡಿದ್ದರು ರೇವನಾಥ್. ರೇವನಾಥ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ ಹಾಗೇ ಅಶ್ವಿನಿ ಅವರಿಗೆ ಹಾಗೂ ಕುಟುಂಬದ ಇತರೆ ಸದಸ್ಯರ ನೋವು ತಡೆದುಕೊಳ್ಳಲು ಆ ದೇವರು ಶಕ್ತಿ ನೀಡಲಿ.

ಅಕ್ಟೋಬರ್ 2021ರಲ್ಲಿ ಹೃದಯಾಘಾತದಿಂದ ನಟ ಪುನೀತ್ ರಾಜ್‌ಕುಮಾರ್ ಇಹ ಲೋಕ ತ್ಯಜಿಸಿದ್ದರು. ಅಂದಿನಿಂದ ಅಪ್ಪು ಅವರ ಸಂಪೂರ್ಣ ಉದ್ಯಮ, ನಿರ್ಮಾಣ ಸಂಸ್ಥೆ, ಸಮಾಜ ಸೇವೆ, ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡರು. ಪಿಆರ್‌ಕೆ ಸಂಸ್ಥೆ ಸಂಪೂರ್ಣ ಕಾರ್ಯ ನೋಡಿಕೊಳ್ಳುತ್ತಿರುವ ಅಶ್ವಿನಿ ಒನ್‌ ಕಟ್ ಟು ಕಟ್‌ ಸಿನಿಮಾ ಕೂಡ ಬಿಡುಗಡೆ ಮಾಡಿದ್ದರು. ಆನಂತರ ಪ್ಯಾಮಿಲಿ ಫ್ಯಾಕ್ ಸಿನಿಮಾ ಕೂಡ ಬಿಡುಗಡೆಯಾಗಿದೆ. ಈ ಎರಡು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಅಮೇಜಾನ್ ಪ್ರೈಮ್‌ನಲ್ಲಿ ಕನ್ನಡ ವೀಕ್ಷಕರನ್ನು ಸೆಳೆಯುತ್ತಿದೆ.

ಅಪ್ಪ ಕೊನೆಯ ಬಾರಿ ನಟಿಸಿರುವ ಜೀಮ್ಸ್‌ ಮತ್ತು ಗಂಧದಗುಡಿ ಸಿನಿಮಾದ ಕೆಲಸಗಳನ್ನು ಅಶ್ವಿನಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಡಾ.ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಪುನೀತ್‌ ಕನಸಿನ ಕೂಸು ಗಂಧದ ಗುಡಿ ಟೀಸರ್ ಬಿಡುಗಡೆ ಮಾಡಿದ್ದರು. ಕರ್ನಾಟಕದ ಕಾಡುಗಳನ್ನು ಅಪ್ಪು ಎಷ್ಟು ಅದ್ಭುತವಾಗಿ ತೋರಿಸಿದ್ದಾರೆ. ಅದನ್ನು ಎಲ್ಲರೂ ದೊಡ್ಡ ಪರದೆ ಮೇಲೆ ನೋಡಬೇಕೆಂಬ ಪುನೀತ್ ರಾಜ್‌ಕುಮಾರ್ ಕನಸನ್ನು ಎಂದು ಅಶ್ವಿನಿ ಅವರು ಸಾಕಾರಗೊಳಿಸಲು ನಿರ್ಧರಿಸಿದ್ದಾರೆ.

ಇನ್ನು ಡ್ಯೂಯಟ್ ಹಾಡೊಂದನ್ನು ಬಿಟ್ಟು, ಅಪ್ಪು ಜೇಮ್ಸ್‌ ಚಿತ್ರೀಕರಣವನ್ನೂ ಸಂಪೂರ್ಣವಾಗಿ ಮುಗಿಸಿದ್ದರು. ಹೀಗಾಗಿ ಅಪ್ಪುಗೆ ಧ್ವನಿಯಾಗಿ ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ನಿಂತಿದ್ದಾರೆ. ಅಪ್ಪು ತುಂಬಾ ಇಷ್ಟ ಪಟ್ಟು ಮಾಡಿರುವ ಸಿನಿಮಾ ಜೇಮ್ಸ್ ಆಗಿರುವ ಕಾರಣ ಚಿತ್ರದ ಫೈಟ್‌ ಮತ್ತು ಡಿಫರೆಂಟ್‌ ಲುಕ್‌ ವಿಡಿಯೋಗಳು ಪುನೀತ್‌ ರಾಜ್‌ಕುಮಾರ್ ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದರಂತೆ. ಅಪ್ಪು ಜೇಮ್ಸ್‌ ಲುಕ್‌ನ ಫೈನಲೈಸ್‌ ಮಾಡಿದ್ದು ಕೂಡ ಅಶ್ವಿನಿ ಅವರೇ ಎನ್ನಲಾಗಿದೆ.

"