ಅಪ್ಪು ಹಾಡಿಗೆ ನಾಚುತ್ತಲೇ ಹೆಜ್ಜೆ ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್… ವೀಡಿಯೋ ವೈರಲ್
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ನಟಿ ತಾರಾ ಅನುರಾಧ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ ಜೊತೆ ಅಪ್ಪು ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡೀಯೋ ವೈರಲ್ ಆಗುತ್ತಿದೆ.

ಇತ್ತೀಚೆಗೆ ಚಂದನವನದ ಹಿರಿಯ ನಟಿ ತಾರಾ ಅನುರಾಧ (Thara Anuradha) ತಮ್ಮ ಮನೆಯಲ್ಲಿ ಗೆಟ್ ಟು ಗೆದರ್ ಪಾರ್ಟಿ ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದ ಚಂದನವನ ಹಿರಿಯ ಕಿರಿಯ ತಾರೆಯರು, ಗಣ್ಯರು ಎಲ್ಲರೂ ಭಾಗಿಯಾಗಿ ಸಂಭ್ರಮಿಸಿದ್ದರು. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಮೆರೆದಿದ್ದ ಜನಪ್ರಿಯ ನಟಿಯರನ್ನೆಲ್ಲಾ ಜೊತೆಯಾಗಿ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಗೆಟ್ ಟು ಗೆದರ್ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದೀಗ ವಿಶೇಷವಾದ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar)ಅವರು ಅಪ್ಪು ಹಾಡಿಗೆ ಹೆಜ್ಜೆ ಹಾಕಿದ್ದು, ಸಖತ್ ಕ್ಯೂಟ್ ಆಗಿದ್ದು ವೈರಲ್ ಆಗುತ್ತಿದೆ.
ತಮ್ಮದೇ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ ನಟಿಯರು
ಗುರುಕಿರಣ ಪತ್ನಿ ಪಲ್ಲವಿ ಗುರುಕಿರಣ್ ಕೂಡ ಈ ಗೆಟ್ ಟು ಗೆದರ್ ನಲ್ಲಿ ಭಾಗಿಯಾಗಿದ್ದು, ಇವರು ಅಲ್ಲಿ ನಡೆದ ಡ್ಯಾನ್ಸ್ ವಿಡೀಯೋ ಹಂಚಿಕೊಂಡಿದ್ದಾರೆ. ಮೊದಲಿಗೆ ಸೋನು ಗೌಡ ಮತ್ತು ಕಾರುಣ್ಯ ರಾಮ್ (KArunya Ram) ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಇದಾದ ಬಳಿಕ ಭಾವನಾ ರಾವ್ ಹಾಗೂ ಸುಧಾರಾಣಿ ಪುತ್ರಿ ನಿಧಿ ಜೊತೆಯಾಗಿ ನಧೀಂ ಧೀಂ ತನ ಹಾಡಿಗೆ ಭರತನಾಟ್ಯ ಮಾಡಿದ್ದರು. ಬಳಿಕ ಪ್ರಿಯಾಂಕ ಉಪೇಂದ್ರ ಡ್ಯಾನ್ಸ್ ಮಾಡಿದ್ರೆ, ಇದಾದ ನಂತರ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಹಾಗೂ ತಾರಾ ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು ಎಂದು ಮುದ್ದಾಗಿ ನೃತ್ಯ ಮಾಡಿದ್ದಾರೆ. ಈ ವಯಸ್ಸಲ್ಲೂ ಭಾರತಿಯವರ ಎನರ್ಜಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಬಳಿಕ ಹಿರಿಯ ನಟಿ ಹೇಮಾ ಚೌಧರಿ ಕೂಡ ತಮ್ಮ ನನ್ನ ನೋಡಿ ಓಡ ಬೇಡ ನಿಲ್ಲಯ್ಯ ಹಾಡಿಗೆ ತಾರಾ ಜೊತೆ ಹೆಜ್ಜೆ ಹಾಕಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ಡ್ಯಾನ್ಸ್
ಈ ಕಾರ್ಯಕ್ರಮದಲ್ಲಿ ನಿನ್ನಿಂದಲೇ ನಿನ್ನಿಂದಲೇ ಹಾಡು ಕೂಡ ಪ್ಲೇ ಆಗಿದೆ. ಈ ಹಾಡಿನಲ್ಲಿ ಪುನೀತ್ ರಾಜಕುಮಾರ್ ಜೊತೆ ಪೂಜಾ ಗಾಂಧಿ (Pooja Gandhi) ನಟಿಸಿದ್ದರು. ಹಾಗಾಗಿ ಪೂಜಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ನಟಿ ತಾರಾ, ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕರೆದು ಡ್ಯಾನ್ಸ್ ಮಾಡುವಂತೆ ತಿಳಿಸಿದ್ದಾರೆ. ಅಶ್ವಿನಿಯವರು ನಾಚುತ್ತಲೇ ಇಲ್ಲ, ಇಲ್ಲ ಎಂದಿದ್ದಾರೆ. ಕೊನೆಗೆ ಪೂಜಾ ಗಾಂಧಿ ಅಶ್ವಿನಿಯವರ ಕೈಯನ್ನು ಹಿಡಿದು, ತಾವೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಕ್ಯೂಟ್ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದೆ.
ಹಿರಿಯ ನಟಿಯ ನೃತ್ಯಕ್ಕೆ ಸೋತ ಫ್ಯಾನ್ಸ್
ಇನ್ನು ಮಾಳವಿಕಾ ಅವಿನಾಶ್, ಜಯಮಾಲ, ಮಾಲಾಶ್ರೀ, ಶ್ರುತಿ, ಸುಧಾರಾಣಿ, ಅನುಪ್ರಭಾಕರ್ ಎಲ್ಲರೂ ಕೂಡ ತಮ್ಮ ತಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿ ರಂಜಿಸಿದ್ದಾರೆ. ಮಾಲಾಶ್ರೀಯವರ (Malashree) ಜಟಕಾ ಕುದುರೆ ಹತ್ತಿ ಹಾಡಿಗೆ ಎಲ್ಲಾ ನಟಿಯರು ಜೋಶಲ್ಲಿ ಹೆಜ್ಜೆ ಹಾಕಿದ್ರೆ, ಸುಧಾರಾಣಿಯವರ (Sudharani) ಇವ ಯಾವ ಸೀಮೆ ಗಂಡು ಕಾಣಮ್ಮೊ ಹಾಡಿಗೆ ನಟಿ ತಾರಾ ಜೊತೆಗೆ ಮುದ್ದಾಗಿ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದ್ದಾರೆ. ನಟಿ ಶ್ರುತಿ ನವಿಲೇನೋ ಕುಣೀಬೇಕು ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.