ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಆಶಿತಾ ಚಂದ್ರಪ್ಪ ಪುನೀತ್ ರಾಜ್‌ಕುಮಾರ್ ದಂಪತಿ ಜೊತೆಗಿರುವ ಫೋಟೋ ಹಂಚಿಕೊಂಡು, ಭಾವುಕರಾಗಿದ್ದಾರೆ.  

ಮಾರ್ಚ್‌ 31ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ನಟಿ ಆಶಿತಾ ಚಂದ್ರಪ್ಪ ಮತ್ತು ರೋಹನ್. ಕಿರುತೆರೆ ಹಾಗೂ ಬೆಳ್ಳಿತೆರೆಯ ಜನಪ್ರಿಯ ನಟಿ ಆಶಿತಾ ಅವರಿಗೆ ಪುನೀತ್ ರಾಜ್‌ಕುಮಾರ್ ಕುಟುಂಬದ ಜೊತೆ ಒಳ್ಳೆಯ ಒಡನಾಟವಿದೆ. ಪುನೀತ್‌ ಹಾಗೂ ಪತ್ನಿ ಅಶ್ವಿನಿ ಮದುವೆಯಲ್ಲಿ ಪಾಲ್ಗೊಂಡಿದ್ದ ಫೋಟೋ ಹಂಚಿಕೊಂಡಿದ್ದಾರೆ ಆಶಿತಾ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಆಶಿತಾ ಚಂದ್ರಪ್ಪ! 

ಆಶಿತಾ ಭಾವುಕ ಮಾತುಗಳು:
'ಕೆಲವರಿಂದ ನಾವು ಏನನ್ನೂ ಬಯಸುವುದಿಲ್ಲ. ಆದರೆ ಅವರು ನಮ್ಮ ಜೀವನದ ಮುಖ್ಯವಾದ ಕ್ಷಣಗಳನ್ನು ಅಮೋಘವಾಗಿಸುತ್ತಾರೆ.ಇನ್ನು ತುಂಬಾ ಬೇಕಾದವರು ಬಂದೇ ಬರುತ್ತಾರೆ ಎಂದುಕೊಂಡರೆ ಬರಲಿಲ್ಲ, ನನ್ನ ತಂದೆ ಹಾಗೂ ನನಗೆ ಕೊರೋನಾ ಪಾಸಿಟಿವ್ ಬಂದಿದ್ದ ಕಾರಣ ಮದುವೆ ಕ್ಯಾನ್ಸಲ್ ಮಾಡಿ ಮುಂದೂಡಲಾಗಿತ್ತು. ಆ ನೆಪ ಕೊಟ್ಟು ಮದುವೆಗೆ ಬರಲೇ ಇಲ್ಲ. ಆದರೆ ನಾನು ಈ ವ್ಯಕ್ತಿ ಬಗ್ಗೆ ಹೇಳಲೇ ಬೇಕು. ಏಕೆಂದರೆ ಇವರ ಶೆಡ್ಯೂಲ್ ಫುಲ್ ಪ್ಯಾಕ್ ಆಗಿತ್ತು, ಯುವರತ್ನ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದರು. ಆದರೂ ಸಮಯ ಮಾಡಿಕೊಂಡು, ನನ್ನಗೆ ರೋಹನ್‌ಗೆ ಆಶೀರ್ವಾದ ಮಾಡಿದರು. ನಮಗೆ ಯಾರು ಮುಖ್ಯ ಪ್ರಯಾರಿಟಿ ಲಿಸ್ಟ್‌ ಬಗ್ಗೆ ಜೀವನ ತಿಳಿಸಿಕೊಡುತ್ತದೆ. ಅಪ್ಪು ಹಾಗೂ ಅಶ್ವಿನಿ ಅಕ್ಕ ನಿಮ್ಮಿಬ್ಬರಿಗೂ ಸರ್ಪ್ರೈಸ್‌ ನೀಡಿದ್ದಾರೆ. ನಿಜಕ್ಕೂ ನಾನು ಮರೆಯುವುದಿಲ್ಲ. ತಂದೆಗೆ ನನಗೆ ತುಂಬಾನೇ ಖುಷಿ ಆಯ್ತು,' ಎಂದು ಆಶಿತಾ ಬರೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿ ಆಶಿತಾ ಈಗ ಬ್ಯುಸಿನೆಸ್‌ ಐಕಾನ್ ; ಆನ್‌ಲೈನಲ್ಲಿ ಸಿಗುತ್ತೆ ಟ್ರೆಂಡಿ ಬಟ್ಟೆಗಳು

ಬೆಂಗಳೂರಿನ ಅಂಗನಾ ಕೋರ್ಟ್‌ಯಾರ್ಡ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಆಶಿತಾ ಹಾಗೂ ರೋಹನ್ ವೈವಾಹಿ ಜೀವನಕ್ಕೆ ಕಾಲಿಟ್ಟರು. ಮತ್ತೊಂದು ವಿಶೇಷತೆ ಏನೆಂದರೆ ಆಶಿತಾ ಮದುವೆ ಸೀರೆಗೆ ಧರಿಸಿದ ಬ್ಲೌಸ್ ಅನ್ನು ತಾವೇ ಡಿಸೈನ್ ಮಾಡಿಕೊಂಡಿದ್ದರು.

View post on Instagram