ನಟ ಅರ್ಜುನ್ ಸರ್ಜಾ ಅವರು ನಟಿಸಿದ ಬಹಳಷ್ಟು ಹಾಡುಗಳು ಎವರ್‌ಗ್ರೀನ್. ರೊಮ್ಯಾಂಟಿಕ್ ಸಾಂಗ್, ಡ್ಯುಯೆಟ್‌ಗಳು ಈಗಲೂ ಬಹಳಷ್ಟು ಜನಕ್ಕೆ ಫೇವರೇಟ್. ತಂದೆ ನಟಿಸಿದ ಹಳೆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಐಶ್ವರ್ಯಾ ಅರ್ಜುನ್

ಅರ್ಜುನ್ ಸರ್ಜಾ ಅವರ ತಮಿಳು ಸಿನಿಮಾಗಳು ಸೂಪರ್ ಹಿಟ್. ಅವರು ನಟಿಸಿದ ರೊಮ್ಯಾಂಟಿಕ್ ಸಿನಿಮಾ ಮತ್ತು ಹಾಡುಗಳು ಬಹಳಷ್ಟು ಜನರಿಗೆ ಫೇವರೇಟ್. ಕಾಟ್ರೇ ಎನ್ ವಾಸಲ್ ವಂದಾ ಎಂಬ ಹಾಡು ಈಗಲೂ ಬಹಳಷ್ಟು ಜನರ ನೆಚ್ಚಿನ ಮೆಲೊಡಿ. ಇದಕ್ಕೆ ಹೊರತಾಗಿಲ್ಲ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ.

ಐಶ್ವರ್ಯಾ ಅರ್ಜುನ್ ತಂದೆ ನಟಿಸಿದ ಹಳೆಯ ಸಿನಿಮಾ ರಿಧಂನ ಹಾಡಿನ ಮ್ಯೂಸಿಕ್ ಮೆಲೊಡಿಗೆ ಹೆಜ್ಜೆ ಹಾಕಿದ್ದಾರೆ. ಅತ್ಯಂತ ಸುಂದರವಾಗಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ವಿಡಿಯೋವನ್ನು ಫ್ಯಾನ್ಸ್ ಜೊತೆಗೆ ಶೇರ್ ಮಾಡಿದ್ದಾರೆ ಐಶ್ವರ್ಯಾ.

ಕಿರಿಕ್ ಚೆಲುವೆ ಬಾಲಿವುಡ್ ಎಂಟ್ರಿ: ಸಿದ್ಧಾರ್ಥ್ ಮಲ್ಹೋತ್ರಾಗೆ ರಶ್ಮಿಕಾ ಜೋಡಿ

ವೈಟ್ ಪಲಾಸೋ ಪ್ಯಾಂಟ್ ಧರಿಸಿ, ವೈಟ್‌ ಪ್ರಿಂಟ್‌ ಇರುವ ಯೆಲ್ಲೋ ಕಲರ್ ಟಾಪ್‌ ಧರಿಸಿದ ಐಶ್ವಾರ್ಯಾ ಖುಷಿ ಖುಷಿಯಾಗಿ ತಮ್ಮ ಫೇವರೇಟ್ ಹಾಡಿಗೆ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

View post on Instagram

ಇಂದಿನವರೆಗೂ ನನ್ನ ಫೇವರೇಟ್ ಹಾಡು. ಮಿಷ್ಟರ್ ನವಿನ್ ಅವರ ಈ ವರ್ಷನ್ ಇಷ್ಟವಾಯ್ತು ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ್ದಾರೆ ಐಶ್ವರ್ಯಾ. ಬಹಳಷ್ಟು ಜನ ಫ್ಯಾನ್ಸ್ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಜನ ಹಾರ್ಟ್ ರಿಯಾಕ್ಟ್ ಮಾಡಿದ್ದಾರೆ.