"ಅಮ್ಮ" ಚಿತ್ರದಲ್ಲಿನ ಅನಂತ್ ನಾಗ್ ಮತ್ತು ಲಕ್ಷ್ಮೀ ಅವರ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯರ ನಿರಂತರ ಸಾಂಸಾರಿಕ ಕೆಲಸ ಮತ್ತು ವಿಶ್ರಾಂತಿಯ ಕೊರತೆಯ ಬಗ್ಗೆ ಪ್ರಶ್ನಿಸುವ ಈ ಸಂಭಾಷಣೆ, ಅಂದಿನ ಮತ್ತು ಇಂದಿನ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಕಾಲ ಬದಲಾದರೂ, ಮಹಿಳೆಯರ ಪಾತ್ರದ ಬಗೆಗಿನ ಚಿಂತನೆಗಳು ಇನ್ನೂ ಪ್ರಸ್ತುತ ಎಂಬುದನ್ನು ತೋರಿಸುತ್ತದೆ.

ಹೀಗೊಂದು ಸಿನಿಮಾ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ಆ ಚಿತ್ರದಲ್ಲಿ ಅನಂತ್‌ ನಾಗ್ (Anant Nag) ಹಾಗೂ ಲಕ್ಷ್ಮೀ (Lakshmi) ನಟಿಸಿದ್ದು ಎಂಬುದನ್ನು ಹೇಳಲೇಬೇಕಿಲ್ಲ, ಕಾರಣ ವಿಡಿಯೋದಲ್ಲಿ ಇರೋದೇ ಅವರೇ ಇಬ್ರು. ಆದರೆ ಅದರಲ್ಲಿ ಬರೋ ಡೈಲಾಗ್ ಕೇಳಿದ್ರೆ ಏನ್ ಹೇಳ್ಬೇಕು ಏನ್ ಮಾಡ್ಬೇಕು ಅಂತಾನೇ ಗೊತ್ತಾಗಲ್ಲ! ಕಾರಣ, ಡೈಲಾಗ್‌ನಲ್ಲಿ ಹೇಳ್ತಾ ಇರೋ ವಿಷ್ಯ ಹಾಗಿದೆ. ಎಂಥವ್ರನ್ನಾದ್ರೂ ಯೋಚನೆಗೆ ದೂಡುತ್ತೆ ಅದು.. ಅದು 'ಅಮ್ಮ' ಸಿನಿಮಾದ ಡೈಲಾಗ್.

ಹಾಗಿದ್ರೆ ಅಂಥದ್ದೇನಿದೆ ಅದ್ರಲ್ಲಿ ಅಂತೀರಾ? ನೋಡಿ... 'ಹೆಣ್ಣಿಗೆ ರಿಟೈರ್‌ಮೆಂಟ್ ಯಾಕೆ? ಅಂತಾರೆ ಅನಂತ್‌ ನಾಗ್. ಅದಕ್ಕೆ 'ಯಾಕೆ ನಾವು ಮನುಷ್ಯರಲ್ವಾ?' ಅಂತಾರೆ ಲಕ್ಷ್ಮೀ. 'ಮನುಷ್ಯರಾಗಿದ್ದಕ್ಕೇ ಇಷ್ಟು ವರ್ಷದಿಂದ ಸಂಸಾರ ಮಾಡ್ತಾ ಇದೀನಿ' ಅಂತಾರೆ ಅನಂತ್‌ ನಾಗ್. 'ಓಹೋ, ಸಂಸಾರದಿಂದ ಹೆಣ್ಣಿಗೆ ವಿಶ್ರಾಂತಿ ಬೇಕಾಗಿಲ್ವೇ? ' ಅಂತಾರೆ ಲಕ್ಷ್ಮೀ. 'ಏನ್ ಮಹಾ ಅಂಥ ಕಷ್ಟದ ಕೆಲಸ ಮಾಡ್ತಾ ಇದೀರ ಅಂತ ವಿಶ್ರಾಂತಿ ತಗೋಬೇಕು ಅಂತ ಅರ್ಥ ಆಗ್ತಾ ಇಲ್ಲ' ಅಂತಾರೆ ಅನಂತ್‌ ನಾಗ್!

ಮತ್ತೆ ಮದ್ವೆ ಆಗ್ತಾರೆ ಚಂದನ್ ಶೆಟ್ಟಿ, ಅವ್ರು ಹೊಸ ಪಾರ್ಟನರ್, ಆವತ್ತು ಮದ್ವೆ..!

ಹಾಗಾದ್ರೆ ಹೆಂಗಸರಿಗೆ ಭಾನುವಾರ ರಜಾ ಇಲ್ಲ, ಬಂದ್, ಗಲಾಟೆ ಅಂತ ರಜಾ ಇಲ್ಲ.. ಹಬ್ಬ-ಹರಿದಿನ ಅಂತ ರಜಾ ಇಲ್ಲ.. ಬೋನಸ್ ಇಲ್ಲ, ಪೇಮೆಂಟ್ ಇಲ್ಲ.. ಆದ್ರೆ ಓವರ್ ಟೈಮ್ ಕೆಲಸ ಮಾತ್ರ ಮಾಡ್ತಾನೇ ಇರ್ಬೇಕು.. ಮೈ ಸರಿ ಇಲ್ಲ ಅಂದ್ರೂನೂ, ಮನಸ್ಸು ಸರಿ ಇಲ್ಲ ಅಂದ್ರೂನೂ ಅಡುಗೆ ಮನೆ ಕೆಲಸ ಮಾಡ್ತಾನೇ ಇರ್ಬೇಕು.. ನಾವು ಕೆಲಸ ಮಾಡೋ ಯಂತ್ರಗಳೇನ್ರೀ? ಜೀವನ ಪರ್ಯಂತ ನಿಮ್ ಸೇವೆ ಮಾಡೋಕಾ ನಾವ್ ಹುಟ್ಟಿದ್ದು?

ನಿಮ್ಮ ಕೆಲಸ ಮಾಡೋಕೆ ಅಂತಾನೇ ನಮ್ಮ ಜೀವನಾನ ಮುಡಿಪಾಗಿ ಇಟ್ಟಿದೀವಿ. ಅದನ್ನು ಅರ್ಥ ಮಾಡಿಕೊಳ್ದೇ, ನೀನು ಹೆಣ್ಣು, ನಿನಗ್ಯಾಕೆ ವಿಶ್ರಾಂತಿ ಅಂತ ಇಷ್ಟು ಕೇವಲವಾಗಿ ಕೇಳ್ತಿರೇನ್ರಿ? ನಿಜವಾಗ್ಲೂ ಹೆಂಗಸು ಜಾತಿ ವಿಶ್ರಾಂತಿ ತಗೊಳ್ಳೋಕೆ ಶುರು ಮಾಡಿದ್ರೆ ಗಂಡಸು ಜಾತಿಗೆ ಶಾಂತಿನೇ ಸಿಗೋದಿಲ್ಲ..' ಎಂದು ಹೇಳಿದ್ದಾರೆ ಲಕ್ಷ್ಮೀ. ಅಲ್ಲಿಗೆ ಈ ವಿಡಿಯೋ ಮುಗಿಯುತ್ತೆ.. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವೀ ವಿಡಿಯೋಗಳಿಗೆ ಬಂದಿರುವ ಕಾಮೆಂಟ್ ನೋಡುತ್ತಿದ್ದರೆ ಇಂದು ಜನರು ಹೇಗೆಲ್ಲಾ ಆ ಬಗ್ಗೆ ರಿಯಾಕ್ಟ್ ಮಾಡುತ್ತಿದ್ದಾರೆ ಎಂಬುದು ಅಚ್ಚರಿ ಹುಟ್ಟಿಸುತ್ತದೆ. 

ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?

ಹೌದು, ಅನಂತ್‌ ನಾಗ್ ಹಾಗೂ ಲಕ್ಷ್ಮೀ ಹೇಳುವ ಡೈಲಾಗ್ ಅಂದಿನ ಸಮಾಜವನ್ನು, ಅಂದಿನ ಕಾಲದ ವಿಚಾರಧಾರೆಯನ್ನು ಹೇಳುತ್ತದೆ ಎನ್ನಬಹುದು. ಆದರೆ, ಇಂದು ಕಾಲ ಬದಲಾಗಿದೆ ಎಂಬುದನ್ನು ಕೂಡ ಮರೆಯೋ ಹಾಗಿಲ್ಲ. ಕಾರಣ, ಇಂದಿನ ಭಾರತದ ಕಾನೂನು ಹಾಗೂ ಇಂದುನ ಸಮಾಜದ ರೀತಿನೀತಿ ಅಂದಿನ ಡೈಲಾಗ್‌ಗೆ ಸರಿಹೋಗುವುದಿಲ್ಲ ಅಥವಾ ತದ್ವಿರುದ್ಧ ಎಂದೂ ಕೂಡ ಹೇಳಬಹುದು. ಕಾಮೆಂಟ್ ಸೆಕ್ಷನ್‌ನಲ್ಲಿ ಹಲವರು 'ಇಂದು ಕಾಲ ಹೀಗಿಲ್ಲ, ಉಲ್ಟಾ ಆಗಿದೆ' ಎಂದಿದ್ದಾರೆ. 

ಒಟ್ಟಿನಲ್ಲಿ, ಇಂದು ಸೋಷಿಯಲ್ ಮೀಡಿಯಾಗಳು, ಎಐ ಗಳು ಜನರನ್ನು ಹೆಚ್ಚುಹೆಚ್ಚು ಆಕರ್ಷಿಸುತ್ತಿವೆ. ಅದರಲ್ಲಿ ಬರುವ ಮಾಹಿತಿಗೆ ಜೋತುಬಿದ್ದಿರುವ ಜನರು ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡುವುದರಲ್ಲಿ ಬ್ಯುಸಿ ಆಗಿರುತ್ತಾರೆ. ಅದನ್ನು ನೋಡಿದರೆ ಇಂದಿನ ಜನರ ಮೆಂಟಾಲಿಟಿ ಏನು ಎಂಬುದು ಅರ್ಥವಾಗುತ್ತದೆ. ಸೋಷಿಯಲ್ ಮೀಡಿಯಾ ಇಲ್ಲದೇ ಇಂದು ಜೀವನವೇ ಇಲ್ಲ ಎಂಬಂತಾಗಿದೆ, ಏನಂತೀರಾ?

ಎಷ್ಟೊಂದು ಅರ್ಥಪೂರ್ಣವಾದ ಮಾತು🙏💐💐💃