ಅಮ್ಮೋರು ಗಂಡನಾ ನೀವು ಎಂದು ಪತಿಗೆ ಪ್ರಶ್ನೆ ಮಾಡಿದಕ್ಕೆ ಕಿಡಿಕಾರಿದ ನಟಿ ಸೌಂದರ್ಯ; ವಿಡಿಯೋ ವೈರಲ್!
ವೈರಲ್ ಆಯ್ತು ನಟಿ ಸೌಂದರ್ಯ ಅಡುಗೆ ಮತ್ತು ಪತಿ ಬಗ್ಗೆ ಮಾತನಾಡಿರುವ ವಿಡಿಯೋ. ಅಮ್ಮೋರು ಗಂಡ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ಕೊಟ್ಟ ನಟಿ....
ಬಹುಭಾಷಾ ನಟಿ ಸೌಂದರ್ಯ ನಮ್ಮನ್ನು ಅಗಲಿ ಸುಮಾರು 19 ವರ್ಷ ಕಳೆದರೂ ಆಕೆ ಸಿನಿಮಾಗಳು, ಹಾಡುಗಳು ಮತ್ತು ಸಂದರ್ಶನಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಸೌಂದರ್ಯ ಇಷ್ಟ ಕಷ್ಟಗಳು, ಮದುವೆ, ಸಂಸಾರ ಮತ್ತು ಫ್ಯಾಮಿಲಿ ಬಗ್ಗೆ ಅಭಿಮಾನಿಗಳಿಗೆ ಸದಾ ಕ್ಯೂರಿಯಾಸಿಟಿ ಹೆಚ್ಚಿತ್ತು. ನಟಿ ಸಣ್ಣ ಸಂದರ್ಶನ ಇದ್ದರೂ ಮತ್ತೆ ಮತ್ತೆ ನೋಡುತ್ತಿದ್ದರು. ಹೀಗೆ 2003ರಲ್ಲಿ ನಡೆದ ಸಂದರ್ಶನ ವಿಡಿಯೋದಲ್ಲಿ ಹೇಳಿದ ಮಾತುಗಳು ಮತ್ತೊಮ್ಮೆ ವೈರಲ್ ಆಗುತ್ತಿದೆ.
ಅದೆಷ್ಟೋ ವರ್ಷಗಳ ಹಿಂದೆ ನಡೆದ ಸಂದರ್ಶನದಲ್ಲಿ ನಟಿ ಸೌಂದರ್ಯ ಅವರಿಗೆ ಅಡುಗೆ ಮಾಡಲು ಬರುತ್ತಾ ಎಂದು ನಿರೂಪಕಿ ಪ್ರಶ್ನೆ ಮಾಡುತ್ತಾರೆ ಆಗ ಅಯ್ಯೋ!! ಎಂದು ನಗುವ ನಟಿ 'ಎಕ್ಸ್ಪರಿಮೆಂಟ್ ಮಾಡಲು ನಾನು ಸದಾ ಮುಂದೆ ಇರುತ್ತೀನಿ ಆದರೆ ಅಡುಗೆ ಮನೆಗೆ ಹೋಗುವುದು ತುಂಬಾನೇ ಕಡಿಮೆ. ನಮ್ಮ ಅತ್ತಿಗೆ ಬುಕ್ ನೋಡಿಕೊಂಡು ಎಕ್ಸ್ಪರಿಮೆಂಟ್ ಮಾಡಲು ಶುರು ಮಾಡುತ್ತಾರೆ ಆ ಎಕ್ಸ್ಪರಿಮೆಂಟ್‌ಗಳನ್ನು ತಿನ್ನುವುದು ನಾನು. ನಾನು ಏನಾದರೂ ನೋಡಿದಾಗ ಎಕ್ಸ್ಪರಿಮೆಂಟ್ ಮಾಡಲು ಅಡುಗೆ ಮನೆಗೆ ಹೋಗಿದ್ದೀನಿ ಆಗ 99% ಫೇಲ್ ಆಗಿದೆ. ಹೀಗಾಗಿ ಅಡುಗೆ ಅಂದ್ರೆ ದೂರ' ಎಂದು ಸೌಂದರ್ಯ ಹೇಳುತ್ತಾರೆ. ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿರುವ ಪತಿ 'ಮುಂಚಿತವಾಗಿ ನಾವು ಫ್ಯಾಮಿಲಿ ಡಾಕ್ಟರ್‌ಗೆ ಕರೆ ಮಾಡಿ ತಿಳಿಸಿರುತ್ತೀವಿ' ಎಂದು ಹಾಸ್ಯ ಮಾಡುತ್ತಾರೆ. 'ಅಷ್ಟೋಂದು ಕೆಟ್ಟದಾಗಿ ಮಾಡುವುದಿಲ್ಲ ನಿಜ ಹೇಳಬೇಕು ಅಂದ್ರೆ ಅಡುಗೆ ಏನೂ ಬರಲ್ಲ' ಎಂದು ಹೇಳಿ ಸೌಂದರ್ಯ ನಗುತ್ತಿದ್ದರು.
Soundarya Death Anniversary: ಬಾಡಿ ಇತ್ತು, ರುಂಡವೇ ಇರಲಿಲ್ಲ... ಆ ದಿನ ನೆನೆದು ನಟಿ ಪ್ರೇಮಾ ಕಣ್ಣೀರು
2003ರಲ್ಲಿ ನಟಿ ಸೌಂದರ್ಯ ಮತ್ತು ಸಾಫ್‌ವೇರ್ ಇಂಜಿನಿರ್ ರಾಘು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ವಿಧಿಯಾಟ 2004ರಲ್ಲಿ ವಿಮಾನ ಅಪಘಾತದಲ್ಲಿ ಸೌಂದರ್ಯ ಇಹಲೋಕ ತ್ಯಜಿಸಿದ್ದರು. ಮದುವೆಯಾದ ಒಂದು ವರ್ಷದಲ್ಲಿ ದಂಪತಿಗಳು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು.
ಮದುವೆ ಟ್ರಿಪ್:
ಮದುವೆ ನಂತರ ಟ್ರಿಪ್ ಎಲ್ಲಿ ಪ್ಲ್ಯಾನ್ ಮಾಡುತ್ತಿದ್ದೀರಿ ಎಂದು ಕೇಳಿದಾಗ ' ಬೆಂಗಳೂರು ತುಂಬಾನೇ ಬ್ಯೂಟಿಫುಲ್ ಸಿಟಿ ಹೀಗಾಗಿ ಎಲ್ಲೂ ಹೊರಗಡೆ ಹೋಗಬೇಕು ಅನಿಸಲಿಲ್ಲ. ಮದುವೆಯಾದ ವರ್ಷದಲ್ಲಿ ಎಲ್ಲಿಗಾದರೂ ಪ್ಲ್ಯಾನ್ ಮಾಡಬೇಕು' ಎನ್ನುತ್ತಾರೆ ನಟಿ. ಆಗ ಪಕ್ಕದಲ್ಲಿದ್ದ ಪತಿ ಲೇಟ್ ಆದ್ರೂ ತೊಂದರೆ ಇಲ್ಲಿ ಎಂಜಾಯ್ ಮಾಡುತ್ತೀವಿ' ಅಂದರು.
ಮನೆ ಬೆಸ್ಟ್ ಜಾಗ:
'ಶೂಟಿಂಗ್ ಅಂತ ಹೊರಗಡೆ ಹೆಚ್ಚಿನ ಸಮಯ ಇರುವ ಕಾರಣ ಒಂದು ದಿನ ರಜೆ ಸಿಕ್ಕರೂ ಮನೆಗೆ ಓಡಿ ಬರುತ್ತೀನಿ ಜಾಸ್ತಿ ಮನೆಯಲ್ಲಿ ಇರುವುದಕ್ಕೆ ಇಷ್ಟ ಪಡುತ್ತೀನಿ ನಾನು ಹೋಮ್ ಬರ್ಡ್...ಸದಾ ಬೇರೆ ಬೇರೆ ಪಾತ್ರಗಳನ್ನು ಮಾಡಿ ನಮ್ಮ ಮನೆಗೆ ಬಂದರೆ ನಾನು ನಾನಾಗಿ ಇರಬಹುದು ಅಂತ ಮನೆ ಇಷ್ಟ ಪಡುವೆ' ಎಂದು ಹೇಳಿದ್ದಾರೆ.
ಅಮ್ಮನವರ ಗಂಡ:
ನೀವು ಅಮ್ಮನವರ ಗಂಡನಾ ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ ' ಒಂದು ಒಳ್ಳೆ ಕಾರಣಕ್ಕೆ ಅಮ್ಮನೋರು ಗಂಡ ಆಗುವುದರಲ್ಲಿ ತಪ್ಪಿಲ್ಲ' ಎಂದು ಪತಿ ಹೇಳಿದ ತಕ್ಷಣ 'ನನ್ನ ಪ್ರಕಾರ ಹುಡುಗಿ ಮದುವೆ ಆದ ಮೇಲೆ ಗಂಡನಿಗೆ ತಾಯಿಯಾಗಿರಬೇಕು ಫ್ರೆಂಡ್ ಆಗಿರಬೇಕು ಫಿಲಾಸಫರ್ ಆಗಿರಬೇಕು ಗೈಡ್ ಆಗಿರಬೇಕು ಅಂತ ನಮ್ಮ ಮಂತ್ರಗಳು ಅದನೇ ಹೇಳುತ್ತೆ ಹೀಗಾಗಿ ಒಂದು ಹೆಣ್ಣು ಗಂಡನಿಗೆ ತಾಯಿ ಸ್ಥಾನದಲ್ಲಿ ಇರುತ್ತಾರೆ ಅದನ್ನು ನೋಡಿ ಅಮ್ಮೋರ ಗಂಡ ಅಂದ್ರೆ ತಪ್ಪಾಗುತ್ತದೆ ಎಂದು ಮಾತನಾಡಿದ್ದಾರೆ.