ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಈ ನಟ ನಟನೆಗೆ ಫಿಲ್ಮ್‌ಫೇರ್ ಅವಾರ್ಡ್ ಕೂಡ ಪಡೆದಿದ್ದಾರೆ. 52 ವರ್ಷದ ಬಾಲಿವುಡ್ ಮ್ಯಾನ್ ಕನ್ನಡದಲ್ಲಿ ನಟಿಸುತ್ತಿರುವ ಸುದ್ದಿ ಸಹಜವಾಗಿಯೇ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಾರಣ, ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು... 

ಬಾಲಿವುಡ್ ನಟ ಹಾಗೂ ನಿರ್ದೇಶಕರಾದ ಅನುರಾಗ್ ಕಶ್ಯಪ್ (Anurag Kashyap) ಅವರು ಕನ್ನಡದ ಕಡೆ ಮುಖ ಮಾಡಿದ್ದಾರೆ. ಸುಜಯ್ ಶಾಸ್ತ್ರಿ (Sujay Shastri) ನಿರ್ದೇಶನದ 8 ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅವರು ನಟನೆ ಮಾಡಲಿದ್ದಾರೆ. ಈ ಮೂಲಕ ಅವರು ಮೊಟ್ಟಮೊದಲ ಬಾರಿಗೆ ಕನ್ನಡದ ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರೆ. ಅನುರಾಗ್ ಕಶ್ಯಪ್ ಅನ್ನೋದು ಬಾಲಿವುಡ್‌ನಲ್ಲಿ ಬಿಗ್ ನೇಮ್. ಕನ್ನಡ ಸಿನಿಮಾರಂಗ ಈಗ ಪ್ರಕಾಶಿಸುತ್ತಿದೆ ಅನ್ನೋದಕ್ಕೆ ಇದೂ ಕೂಡ ಒಂದು ಉದಾಹರಣೆ ಎನ್ನಬಹುದು!

ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅನುರಾಗ್ ಕಶ್ಯಪ್ ಅವರು ನಟನೆಗೆ ಫಿಲ್ಮ್‌ಫೇರ್ ಅವಾರ್ಡ್ ಕೂಡ ಪಡೆದಿದ್ದಾರೆ. 52 ವರ್ಷದ ಬಾಲಿವುಡ್ ಮ್ಯಾನ್ ಅನುರಾಗ್ ಕಶ್ಯಪ್ ಅವರು ಕನ್ನಡದಲ್ಲಿ ನಟಿಸುತ್ತಿರುವ ಸುದ್ದಿ ಸಹಜವಾಗಿಯೇ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಾರಣ, ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಅವರಿಗೆ ಅದು ಒಂಥರಾ ಕಡಿಮೆ ಗ್ರೇಡ್ ಅನ್ನೋ ಕಾಲವಿತ್ತು. 

ನರಸಿಂಹರಾಜು ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..! ಅಣ್ಣಾವ್ರಿಗೂ ಇರ್ಲಿಲ್ಲ ಅಷ್ಟು ದುಬಾರಿ ರೇಟ್!

ಆದರೆ, ಇಂದು ಕನ್ನಡ ಸಿನಿಮಾಗಳು ತುಂಬಾ ಹೆಸರು ಮಾಡುತ್ತಿವೆ. ಜೊತೆಗೆ, ಕನ್ನಡ ಹಾಗೂ ತೆಲುಗು ಸಿನಿಮಾಗಳು ಭಾರತದಲ್ಲಿ ಅತ್ಯಂತ ಹೆಚ್ಚು ಸೌಂಡ್ ಹಾಗೂ ಕಲೆಕ್ಷನ್ ಮಾಡುವ ಸಿನಿಮಾಗಳು ಎಂಬ ಖ್ಯಾತಿ ಪಡೆದಿವೆ. ಕೆಜಿಎಫ್ ಬಳಿಕ ಕನ್ನಡ ಚಿತ್ರರಂಗವನ್ನು ಭಾರತ ಹಾಗಿರಲಿ, ವಿಶ್ವವೇ ಕೊಂಡಾಡುತ್ತಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ತೆಲುಗು ಸಿನಿಮಾಗಳಿಗೆ ಕೂಡ ಪೈಪೋಟಿ ನೀಡಿ ಗೆದ್ದು ಬೀಗಿವೆ. ಹೀಗಾಗಿ ಇನ್ಮುಂದೆ ಬಾಲಿವುಡ್ ಸ್ಟಾರ್ ನಟರೂ ಕೂಡ ಕನ್ನಡದಲ್ಲಿ ನಟಿಸಿದರೆ ಅಚ್ಚರಿಯೇನೂ ಇಲ್ಲ. 

ಈ ಮೊದಲು ಕೂಡ ಕನ್ನಡದಲ್ಲಿ ಜಾಕಿ ಶ್ರಾಫ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ರವೀನಾ ಟಂಡನ್ ಸೇರಿದಂತೆ ಹಲವರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಒನ್ನೊಬ್ಬರು ನಟರ ಸರದಿ.. ಅದು ಅನುರಾಗ್ ಕಶ್ಯಪ್. ಸದ್ಯ ಅವರು ಕನ್ನಡದಲ್ಲಿ ಮೊಟ್ಟಮೊದಲ ಪಾತ್ರ ಮಾಡುತ್ತಿದ್ದಾರೆ. ಬಳಿಕ ಇಲ್ಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾರೋ ಅಥವಾ ಹೀಗೆ ಬಂದು ಹಾಗೆ ಮಾಯವಾಗುತ್ತಾರೋ ಎಂಬುದನ್ನು ಕಾದು ನೋಡಬೇಕು. 

ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು? ಯಾವ ಜಿಲ್ಲೆ? ಉತ್ತರಕ್ಕೆ ಇಲ್ನೋಡಿ..!

View post on Instagram