ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಯಾಕಿನ್ನೂ ಪ್ರೀತಿಸ್ತಾರೆ, ಗೌರವಿಸ್ತಾರೆ ಎಂದು ನಟ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದ ಅನುಪಮ್ ಖೇರ್ ಇದೀಗ ಸೌತ್ ಕಡೆಯೂ ಮುಖ ಮಾಡಿದ್ದಾರೆ. ಕಳೆದ ವರ್ಷ ತಮಿಳು ಸಿನಿಮಾದಲ್ಲಿ ನಟಿಸಿದ್ದ ಅನುಪಮ್ ಖೇರ್ ಇದೀಗ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಘೋಷ್ಟ್ ಸಿನಿಮಾ ವಿಚಾರವಾಗಿ ಇತ್ತೀಚಿಗಷ್ಟೆ ಅನುಪಮ್ ಖೇರ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. ಶಿವರಾಜ್ ಕುಮಾರ್ ಜೊತೆಗಿನ ಒಂದಿಷ್ಟು ಫೋಟೋಗಳು, ವಿಡಿಯೋಗಳು ವೈರಲ್ ಆಗಿತ್ತು. ಅದೇ ವೇಳೆ ಕನ್ನಡ ಸಿನಿಮಾರಂಗ ಮತ್ತು ಡಾ.ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾರಂಗಕ್ಕೆ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನೀಡಿದ ಕೊಡುಗೆ ಬಗ್ಗೆ ಮಾತನಾಡಿದ್ದಾರೆ. ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನುಪಮ್ ಖೇರ್, ಡಾ.ರಾಜ್ ಕುಮಾರ್ ಇಲ್ಲದೇ ಕನ್ನಡ ಸಿನಿಮಾರಂಗ ಅಪೂರ್ಣ ಆಗಿದಿಯಾ ಎಂದು ಕೇಳಿದ ಪ್ರಶ್ನೆಗೆ, 'ಇದು ಅಪೂರ್ಣ ಎನ್ನುವ ಭಾವನೆಯಲ್ಲ. ಭಾವನೆಗಳು ಯಾವಾಗಲು ಇರುತ್ತದೆ. ಸಂದರ್ಶದ ನಂತರ ನೀವು ರಾಜ್ ಕುಮಾರ್ ಬಳಿಯೇ ಹಿಂತಿರುಗಿದ್ದೀರಿ ಎಂದರೆ ನೀವು ಅವರನ್ನು ಮರೆತಿಲ್ಲ ಎಂಬುದಕ್ಕೆ ಕಾರಣ. ಡಾ.ರಾಜ್‌ಕುಮಾರ್ ಅಭಿನಯ ಸದಾ ಉಳಿಯುತ್ತದೆ. ಅವರ ಡೈಲಾಗ್‌ಗಳು ಸದಾ ಇರುತ್ತವೆ. ಅದೇ ರೀತಿ ಲತಾ ಮಂಗೇಶ್ಕರ್, ಕಿಶೋರ್ ಕುಮಾರ್ ಮತ್ತು ದಿಲೀಪ್ ಕುಮಾರ್ ಅವರ ಅಭಿನಯ ಯಾವಾಗಲೂ ಇರುತ್ತದೆ. ಕಲೆಯ ಉತ್ತಮ ಭಾಗವೆಂದರೆ ಅದು ಜೀವಿಸುತ್ತದೆ (ಶಾಶ್ವತವಾಗಿ) ಅದು ಕಲೆಯ ಸೌಂದರ್ಯ' ಎಂದು ಹೇಳಿದ್ದಾರೆ.
ನನ್ನ ಪಾತ್ರದ ಹೆಸರೇ ಘೋಸ್ಟ್: ಶಿವರಾಜ್‌ಕುಮಾರ್
ಇದೇ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆಯೂ ಅನುಪಮ್ ಖೇರ್ ಮಾತನಾಡಿದ್ದಾರೆ. 'ನಾನು ಆ ಬಗ್ಗೆ ತುಂಬಾ ದುಃಖಿತನಾಗಿದ್ದೆ ಮತ್ತು ತುಂಬಾ ಅಸಮಾಧಾನಗೊಂಡಿದ್ದೇನೆ. ನಾನು ಅವನನ್ನು ಎಂದಿಗೂ ಭೇಟಿಯಾಗಲಿಲ್ಲ ಆದರೆ ಅವರು ಎಂಥ ವ್ಯಕ್ತಿ ಎಂದು ನನಗೆ ತಿಳಿದಿತ್ತು. ಶಿವರಾಜ್‌ಕುಮಾರ್ ಅವರಿಗೆ ನನ್ನ ಸಂತಾಪ ಸೂಚಿಸಿದ್ದೇನೆ. ಪುನೀತ್ ಒಳ್ಳೆಯ ವ್ಯಕ್ತಿಯಾಗಿದ್ದರು ಮತ್ತು ಅವರು ಸಾಮಾಜಿಕ ಕೆಲಸಗಳಿಗೆ ಹೆಸರುವಾಸಿಯಾಗಿದ್ದರು. ಅವರ ಅಭಿಮಾನಿಗಳ ಬಗ್ಗೆ ನನಗೆ ವಿಷಾದವಿದೆ ಆದರೆ ಜೀವನ ಹೀಗೆಯೇ. ನಾನು ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್‌ನನ್ನು ಕಳೆದುಕೊಂಡೆ, ಅವನು 48 ವರ್ಷಗಳಿಂದ ನನ್ನ ಸ್ನೇಹಿತ. ಆದರೆ ಜೀವನ ಮುಂದುವರಿಯಬೇಕು' ಎಂದು ಹೇಳಿದರು.
ಶಿವರಾಜ್ ಕುಮಾರ್ ಸಿನಿಮಾಗೆ ನಾಯಕಿಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭಾ
ಶಿವರಾಜ್ ಕುಮಾರ್ ಮತ್ತು ಅನುಪಮ್ ಖೇರ್ ಕಾಂಬಿನೇಷನ್‌ನ ಘೋಸ್ಟ್ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ. ಇಬ್ಬರೂ ಸ್ಟಾರ್ ಕಲಾವಿದರೂ ಇರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟಾಗಿದೆ. ಸಿನಿಮಾದ ಬಗ್ಗೆ ನಟ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಫೋಟೋಗಳನ್ನು ಶೇರ್ ಮಾಡಿದ್ದರು. ಶ್ರೀನಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅನುಪಮ್ ಖೇರ್, 'ನನ್ನ ಅಭಿನಯದ 535ನೇ ಚಿತ್ರ ಶ್ರೀನಿ ನಿರ್ದೇಶನದ ಘೋಸ್ಟ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರೊಂದಿಗೆ , ಸಂದೇಶ್ ಪ್ರೋಡ್ಯೂಕ್ಷನ್ಸ್ ಅವರ ನಿರ್ಮಾಣದಲ್ಲಿ. ನಿಮ್ಮೆಲ್ಲರ ಪ್ರೀತಿ ಹಾಗು ಹಾರೈಕೆ ಇರಲಿ' ಎಂದು ಕನ್ನಡದಲ್ಲಿ ಹೇಳಿದ್ದಾರೆ.
