ಪುನೀತ್ ರಾಜ್‌ಕುಮಾರ್ ಜೊತೆ 'ವೀರ ಕನ್ನಡಿಗ', ಶಿವರಾಜ್‌ಕುಮಾರ್ ಜೊತೆ 'ಗಂಡುಗಲಿ ಕುಮಾರರಾಮ', 'ಹುಡುಗ ಹುಡುಗಿ' ಸೇರಿದಂತೆ ಅನೇಕ ಕನ್ನಡ ಸಿನಿಮಾ ಹಾಗೂ ಹಿಂದಿ ಕಿರುತೆರೆ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಟಿ ಅನಿತಾ ಹಸ್ಸನಂದಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ಸೆರೆ ಹಿಡಿದ ಫೋಟೋಗಳನ್ನು ಸ್ಟೋರಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಅನಿತಾ ಹಾಗೂ ರೋಹಿತ್‌ ರೆಡ್ಡಿಗೆ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. 'ಹಾಗಯೇ ನಾವು ಈಗ ಮೂವರು. Blessed with the best. ನಮಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾವು ಈಗ ನ್ಯೂ ಮಮ್ಮಿ ಡ್ಯಾಡಿ' ಎಂದು ಅನಿತಾ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಮೂವರೇ ಇದ್ದರೂ ಮಗುವಿನ ಮುಖ ಈಗಲೇ ತೋರಿಸಬಾರದು ಎನ್ನುವ ಸಲುವಾಗಿ ಮುಖದ ಮೇಲೆ ಎಮೋಜಿ ಹಾಕಿದ್ದಾರೆ.

ಅನಿತಾಗೆ ಹೆರಿಗೆ ಆಗುವ ಸಮಯದಲ್ಲಿ ರೋಹಿತ್ ಆಪರೇಷನ್ ವಾರ್ಡ್‌ನಲ್ಲಿಯೇ ಇದ್ದರು. ಮಗು ಹೊರ ಬಂದ ತಕ್ಷಣ ರೋಹಿತ್ ಮುಖದಲ್ಲಿ ಮಂದಹಾಸ ಹಾಗೂ ಕಣ್ಣೀರು ಕಾಣಬಹುದು.  ಆಸ್ಪತ್ರೆ ಸಿಬ್ಬಂದಿ ಈ ವಿಡಿಯೋ ಸೆರೆ ಹಿಡಿದಿದ್ದಾರೆ. ರೋಹಿತ್ ಶೇರ್ ಮಾಡಿಕೊಂಡು 'ಕಾಪಿ ಪೇಸ್ಟ್‌' ಎಂದು ಬರೆದುಕೊಂಡಿದ್ದಾರೆ.

ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಳ್ಳುತ್ತಿರುವ ಅನಿತಾ- ರೋಹಿತ್!

ನಿರ್ಮಾಪಕಿ ಏಕ್ತಾ ಕಪೂರ್‌ಗೆ ಅನಿತಾ ಕುಟುಂಬ ಪರಿಚಯ. ಈ ಹಿಂದೆ ಅನಿತಾಗೆ ಬೇಬಿ ಶವರ್ ಕೂಡ ಆಯೋಜಿಸಿದ್ದರು. ಗಂಡು ಮಗು ಆಗಮನದ ವಿಚಾರ ತಿಳಿಯುತ್ತಿದ್ದಂತೆ, ಏಕ್ತಾ ಕಪೂರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.