BIFFES: ಸುತ್ತೂರು ಮಠದ ಇತಿಹಾಸ ಕುರಿತು ಅನಿಮೇಷನ್ ಸಿನಿಮಾ

ಮೈಸೂರಿನ ಸುತ್ತೂರು ಶ್ರೀಮಠದ ಸಾವಿರ ವರ್ಷಗಳ ಇತಿಹಾಸ ಕಟ್ಟಿಕೊಟ್ಟಿರುವ ‘ಸುತ್ತೂರು ಮಠ ಗುರು ಪರಂಪರೆ’ ಅನಿಮೇಷನ್‌ ಚಿತ್ರವನ್ನು ಸುತ್ತೂರು ಮಠದ ಶಿವಮೂರ್ತಿ ದೇಶೀಕೇಂದ್ರ ಸ್ವಾಮೀಜಿ ಮತ್ತು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವೀಕ್ಷಿಸಿದರು.

Animated Cinema on the History of Suttur Mutt gvd

ಬೆಂಗಳೂರು (ಮಾ.10): ಮೈಸೂರಿನ ಸುತ್ತೂರು ಶ್ರೀಮಠದ ಸಾವಿರ ವರ್ಷಗಳ ಇತಿಹಾಸ ಕಟ್ಟಿಕೊಟ್ಟಿರುವ ‘ಸುತ್ತೂರು ಮಠ ಗುರು ಪರಂಪರೆ’ (Suttur Muta Guru Para, mpare) ಅನಿಮೇಷನ್‌ ಚಿತ್ರವನ್ನು ಸುತ್ತೂರು ಮಠದ ಶಿವಮೂರ್ತಿ ದೇಶೀಕೇಂದ್ರ ಸ್ವಾಮೀಜಿ ಮತ್ತು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವೀಕ್ಷಿಸಿದರು. ಅಮೆರಿಕ, ಜಪಾನ್‌, ಇಟಲಿಯಲ್ಲಿ ಪ್ರದರ್ಶನಗೊಂಡು ಹಲವು ಬಹುಮಾನಗಳಿಗೆ ಪಾತ್ರವಾಗಿರುವ ಈ ವಿಶಿಷ್ಟಅನಿಮೇಷನ್‌ ಚಿತ್ರ ಇತ್ತೀಚೆಗೆ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (Bengaluru International Film Festival) ಪ್ರದರ್ಶನಗೊಂಡಿತು. ಈ ವೇಳೆ ಮಠಾಧೀಶರು ಭಾಗಿಯಾಗಿ ಚಿತ್ರ ವೀಕ್ಷಿಸುವ ಮೂಲಕ ಹೊಸ ಮುನ್ನುಡಿ ಬರೆದರು.

ಈ ವೇಳೆ ಸುತ್ತೂರಿನ ಶಿವಮೂರ್ತಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮಠದ ಧಾರ್ಮಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ತೋರ್ಪಡಿಸುವುದು ಸುಲಭದ ಕೆಲಸವಲ್ಲ. ಚಿತ್ರತಂಡದ ನಾಲ್ಕು ವರ್ಷಗಳ ಸತತ ಪರಿಶ್ರಮದ ಫಲವಾಗಿ ಇಂದು ಚಿತ್ರ ಸಿದ್ಧವಾಗಿದ್ದು, ಪ್ರದರ್ಶನವಾಗುತ್ತಿದೆ. ವಿದೇಶಗಳಲ್ಲಿ ಪ್ರಶಸ್ತಿಗಳಿಗೆ ಪಾತ್ರವಾದ ಈ ಚಿತ್ರ, ಭಾರತದಲ್ಲೇ ಇದೇ ಮೊದಲ ಬಾರಿಗೆ ಅದರಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿರುವುದು ಸಂತಸದ ಸಂಗತಿ ಎಂದರು.

ತುಮಕೂರು ಸಿದ್ಧಗಂಗ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 'ಈ ಆನಿಮೇಷನ್‌ ಚಿತ್ರವು ಕೇವಲ ಸುತ್ತೂರು ಮಠದ ಪರಂಪರೆಯ ಚಿತ್ರಣ ಮಾತ್ರವಾಗಿರದೆ ಕನ್ನಡ ನಾಡಿನ ಶರಣ ಸಂಸ್ಕೃತಿ, ದಾಸೋಹ ಸಂಸ್ಕೃತಿ, ಸಹಬಾಳೆ ಸಂಸ್ಕೃತಿಯ ದರ್ಶನವಾಗಿದೆ. ಯುದ್ಧದ ಕರಿನೆರಳು ಎಲ್ಲರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಶಾಂತಿ, ಸೌಹಾರ್ದತೆ ಸಾರುವ ಇಂತಹ ಚಿತ್ರಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ಸುನಿಲ್‌ ಪುರಾಣಿಕ್‌ ಅಂತಹ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಅಂತಾರಾಷೀಯ ಚಿತ್ರೋತ್ಸವ ವೇದಿಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ' ಎಂದು ಅಭಿಪ್ರಾಯಪಟ್ಟರು.

BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣೆ

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ (Sunil Puranik) ಮಾತನಾಡಿ, "ಚಿತ್ರೋತ್ಸವಕ್ಕೆ ಹೊಸದೊಂದು ಆಯಾಮ ಸಿಕ್ಕಂತಾಗಿದ್ದು ಇದು ಇತಿಹಾಸದಲ್ಲೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ" ಎಂದರು. ಚಿತ್ರಪ್ರದರ್ಶನದಲ್ಲಿ ಜಾನಪದತಜ್ಞ ಗೊ.ರು.ಚನ್ನಬಸಪ್ಪ, ಹಿರಿಯ ಚಿತ್ರನಿರ್ಮಾಪಕ ಎಸ್‌.ಎ.ಚೆನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜಯರಾಜ್‌, ಆನಿಮೇಷನ್‌ ಚಿತ್ರದ ನಿರ್ದೇಶಕ ಅಬ್ದುಲ್‌ ಕರೀಂ, ಹಲವು ಹಿರಿಯ ಐಎಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳು ಸೇರಿದಂತೆ ಅಪಾರ ಜನಸ್ತೋಮ ಪಾಲ್ಗೊಂಡು ಧಾರ್ಮಿಕ ಸಂಭ್ರಮದಲ್ಲಿ ಮಿಂದೆದ್ದಿದ್ದು ವಿಶೇಷವಾಗಿತ್ತು.

ಮಾ.3 ವಿಶ್ವ ಕನ್ನಡ ಚಲನಚಿತ್ರ ದಿನ: ಕನ್ನಡದ ಪ್ರಪ್ರಥಮ ವಾಕ್‌ ಚಿತ್ರ ಸತಿ ಸುಲೋಚನ 1934ರ ಮಾರ್ಚ್‌ 3ರಂದು ತೆರೆ ಕಂಡ ಸ್ಮರಣಾರ್ಥವಾಗಿ ಮಾರ್ಚ್‌ 3ನ್ನು ‘ವಿಶ್ವ ಕನ್ನಡ ಚಲನಚಿತ್ರ ದಿನ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಗುರುವಾರ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್‌ ಸಭಾಂಗಣದಲ್ಲಿ ಯೋಜಿಸಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಮಾ.3ರಿಂದ 10ರ ವರೆಗೆ) ಉದ್ಘಾಟಿಸಿ ಅವರು ಮಾತನಾಡಿದರು.

BIFFES: 'ಪೆದ್ರೋ' ಸಿನಿಮಾ ಆಯ್ಕೆಯಾಗದ್ದಕ್ಕೆ ನಟ ರಿಷಬ್‌, ನಟೇಶ್‌ ಬೇಸರ

ಮಾರ್ಚ್‌ 3 ಕನ್ನಡ ಚಿತ್ರರಂಗಕ್ಕೆ (Sandalwood) ಐತಿಹಾಸಿಕ ದಿನ. ಏಕೆಂದರೆ, ಇದು ಕನ್ನಡದ ಪ್ರಪ್ರಥಮ ವಾಕ್‌ ಚಿತ್ರ ಬಿಡುಗಡೆಯಾದ ದಿನ. ಈ ದಿನವೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ (Government of Karnataka) ಮಾರ್ಚ್‌ 3ಅನ್ನು ವಿಶ್ವ ಕನ್ನಡ ಚಲನಚಿತ್ರ ದಿನ ಎಂದು ಘೋಷಿಸುತ್ತಿದ್ದೇನೆ. ಅಲ್ಲದೆ, ಇನ್ನು ಮುಂದೆ ಇದೇ ದಿನದಂದು ಅಂತಾರಾಷ್ಟ್ರೀಯ ಚಲಚಿತ್ರೋತ್ಸವ ಆರಂಭಿಸಲಾಗುವುದು ಎಂದು ತಿಳಿಸಿದರು.

Latest Videos
Follow Us:
Download App:
  • android
  • ios