ಸುಷ್ಮಾ ಅಂದರೆ ಗುರುತಿಲ್ಲದ ಕನ್ನಡಿಗರು ಕಡಿಮೆ. ಅದೇ ನಮ್ ‘ಗುಪ್ತಗಾಮಿನಿ’ ಯ ಭಾವನಾ ಅಲ್ವಾ ಅನ್ನುವ ಮರುಪ್ರಶ್ನೆ ಎಸೆದು ಆಕೆಯನ್ನು ಗುರುತಿಸುತ್ತಾರೆ. ಗುಪ್ತಗಾಮಿನಿ ಟೈಮ್ ನಲ್ಲಂತೂ ಆಕೆ ಯಾವ ಪರಿ ಫೇಮಸ್ ಆಗಿದ್ರು ಅಂದ್ರೆ ಆಕೆ ಎಲ್ಲೇ ಹೋಗಲಿ ಜನ ನೀವು ಭಾವನಾ ಅಲ್ವಾ ಅಂತ ಗುರುತಿಸುತ್ತಿದ್ದರು. ಅಷ್ಟೇ ಅಲ್ಲ, ಆ ಪಾತ್ರವೇ ಅವರು ಅನ್ನೋ ಲೆವೆಲ್‌ನಲ್ಲಿ ನಿಮಗೆ ಹಾಗೆಲ್ಲ ಕಷ್ಟ ಬರಬಾರದಿತ್ತು. ಎಷ್ಟು ಒಳ್ಳೆಯ ಮನಸ್ಸು ನಿಮ್ಮದು ಅಂತೆಲ್ಲ ಕಮೆಂಟ್ ಮಾಡುತ್ತಿದ್ದರಂತೆ. 

ಇದಾಗಿಯೂ ಒಂದಿಷ್ಟು ಸೀರಿಯಲ್‌ಗಳಲ್ಲಿ ಅಭಿನಯಿಸಿ ಸುಷ್ಮಾ ಸೈ ಅನಿಸಿಕೊಂಡರು. ಮುದ್ದು ಮುಖದ ಈ ಹುಡುಗಿಯನ್ನು ಕನ್ನಡಿಗರು ಮನೆಮಗಳ ಹಾಗೆ ಕಂಡಿದ್ದು ಸತ್ಯ. ಈ ನಡುವೆ ಸುಷ್ಮಾ ಆಂಕರಿಂಗ್‌ ಗೂ ಬಂದ್ರು. ತಾನಾಯ್ತು, ತನ್ನ ಭರತನಾಟ್ಯ ಆಯ್ತು, ಬಿಟ್ರೆ ಅಭಿನಯ ಆಯ್ತು ಅಂತಿದ್ದ ಹುಡುಗಿಗೆ ನಿರೂಪಣೆ ಅಂದರೆ ನಾಲಿಗೆ ಮೇಲೇಳೋದು ಕಷ್ಟ, ತಡವರಿಕೆಯೂ ಇತ್ತು. ಕೖ ಕಾಲು ನಡುಗುತ್ತಿತ್ತು. ಹಾಗಾಗಿಸ ಸೃಜನ್ ಲೋಕೇಶ್ ಸೖ ರಿಯಾಲಿಟಿ ಶೋ ಗೆ ಕರೆದಾಗ ಖಡಾ ಖಂಡಿತವಾಗಿ ‘ನೋ’ ಅಂದರು. ಆದರೆ ಅವರು ಬಿಡಲಿಲ್ಲ. ಇವರನ್ನು ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕರೆತಂದ ಕೀರ್ತಿ ಸೃಜನ್ಗೇ ಸಲ್ಲಬೇಕು. 

ಡಾ.ರಾಜ್ ಬಗ್ಗೆ ಗೊತ್ತಿರದ ವಿಷಯಗಳು

ಸದ್ಯಕ್ಕೆ ಸುಷ್ಮಾ ನಿರೂಪಣೆಯಲ್ಲೇ ಬ್ಯುಸಿ. ಝೀ ಕನ್ನಡದ ‘ಜೀನ್ಸ್’ ರಿಯಾಲಟಿ ಶೋನಲ್ಲಿ ಅನೇಕ ಕುಟುಂಬಗಳನ್ನು, ಸೆಲೆಬ್ರಿಟಿಗಳನ್ನು ಸಖತ್ ಲವಲವಿಕೆಯಿಮದ ಮಾತಾಡಿಸಿ ಅವರೆಲ್ಲ ಮನ ಗೆದ್ದಿದ್ದಾರೆ. 
ಇದೆಲ್ಲ ಪೀಠಿಕೆ ಆಯ್ತು, ಈಗಿನ ಸಮಾಚಾರ ಅಂದರೆ ಈ ಹೆಣ್ಣುಮಗಳಿಗೆ ಭರತನಾಟ್ಯ ಗೊತ್ತಿದೆ ಅಂತ ಹೆಚ್ಚಿನವರಿಗೆ ಗೊತ್ತಿಲ್ಲ. ಸುಷ್ಮಾಗೆ ಭರತನಾಟ್ಯ ಅಂದರೆ ಉಸಿರಿನಷ್ಟು ಇಷ್ಟ. ಬಹಳ ಚಿಕ್ಕ ವಯಸ್ಸಿನಿಂದಲೇ ನಾಟ್ಯ ಕಲಿಯಲು ಶುರು ಮಾಡಿದ್ದಾರೆ. ಇವತ್ತು ಭರತನಾಟ್ಯದಲ್ಲಿ ಸಾಕಷ್ಟು ಎತ್ತರಕ್ಕೆ ಏರಿದ್ದಾರೆ, ಸಾಕಷ್ಟು ಪ್ರದರ್ಶನಗಳನ್ನೂ ಕೊಟ್ಟಿದ್ದಾರೆ. 

ಆದರೆ ಸೋಷಲ್ ಮೀಡಿಯಾಗಳಲ್ಲಿ ಯಾವತ್ತೂ ಆಕ್ಟಿವ್ ಇಲ್ಲದ ಸುಷ್ಮಾ ಇವತ್ತು ಬೆಳಗ್ಗೆ ಬೆಳಗ್ಗೆ ತಮ್ಮ ಭರತನಾಟ್ಯದ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅದು ಯಾವುದೋ ಶಾಸ್ತ್ರೀಯ ಸಂಗೀತಕ್ಕೇನೋ ಅಂದರೆ ಖಂಡಿತಾ ಅಲ್ಲ, ಅಣ್ಣಾವ್ರ ‘ನನ್ನ ನೀನು ಗೆಲ್ಲಲಾರೆ’ ಹಾಡಿಗೆ ಭರತನಾಟ್ಯದ ಸ್ಟೆಪ್ ಹಾಕಿ ಕುಣಿದಿದ್ದಾರೆ. ಅಣ್ಣಾವ್ರ ಜನ್ಮದಿನದಂಗವಾಗಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ಪುಟಾಣಿ ವೀಡಿಯೋ ಕ್ಲಿಪ್ಪಿಂಗ್ ನಲ್ಲಿ ನೀವು ಸುಷ್ಮಾ ಅವರ ಎಕ್ಸ್‌ಪ್ರೆಷನ್ಸ್ ನೋಡಿದ್ರೆ ಖಂಡಿತಾ ಫಿದಾ ಆಗ್ತೀರ! 

ಡಾ.ರಾಜ್‌ಕುಮಾರ್‌‌ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್‌ ಸಂಗತಿಗಳು 

ಏಕೆಂದರೆ ಸುಷ್ಮಾ ಅವರು ಈವರೆಗೆ ಸಾಕಷ್ಟು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದ್ದರೂ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದು ಕಡಿಮೆ. ಕೆಲವರಿಗೆ ಅವರು ಅಭಿನಯದ ಜೊತೆಗೆ ಭರತನಾಟ್ಯವನ್ನೂ ಮಾಡುತ್ತಾರೆ ಅಂತ ಗೊತ್ತಿತ್ತಾದರೂ ಇಷ್ಟು ಮುದ್ದಾಗಿ ಡ್ಯಾನ್ಸ್ ಪ್ರದರ್ಶನ ನೀಡುತ್ತಾರೆ ಅನ್ನೋದು ಗೊತ್ತಿಲ್ಲ. ಆ ಕಾರಣಕ್ಕೇ ಇನ್‌ ಸ್ಟಾ ಗ್ರಾಂನಲ್ಲಿ ಈ ವೀಡಿಯೋವನ್ನು ಇವರು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಲೖಕ್ ಮಾಡಿದ್ದಾರೆ. ಜೊತೆಗೆ ಅಣ್ಣಾವ್ರ ಹಾಡಿಗೂ ಅಷ್ಟು ಚಂದ ಭರತನಾಟ್ಯ ಮಾಡಬಹುದು ಅನ್ನೋದನ್ನೂ ಈ ಮೂಲಕ ತೋರಿಸಿಕೊಟ್ಟಿದ್ದಾರೆ. 
ಸಾಮಾನ್ಯವಾಗಿ ಎಲ್ಲಾ ನಿರೂಪಕಿಯರು, ಕಿರುತೆರೆ, ಹಿರಿ ತೆರೆ ಕಲಾವಿದರು ಸೋಷಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಸುಷ್ಮಾ ಅವರೂ ಉಳಿದವರಂತೆ ಸೋಷಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳಲಿ. ಅವರ ಅಪರೂಪದ ಪ್ರತಿಭೆಯನ್ನು ಎಲ್ಲರಿಗೂ ಉಣಬಡಿಸಲಿ ಎನ್ನುವುದು ಅವರ ಅಭಿಮಾನಿಗಳ ಆಶಯ. 

ನೆಟ್‌ಫ್ಲಿಕ್ಸ್‌ಗೆ ಸಡ್ಡು ಹೊಡೆಯಲು ಬಂದಿದೆ 'ನಮ್ಮ Flix'; ಕನ್ನಡ ಚಿತ್ರ ಬೆರಳ ತುದಿಯಲ್ಲಿ!

ಸದ್ಯಕ್ಕೆ ಸುಷ್ಮಾ ನಿರೂಪಣೆಯ ‘ಜೀನ್ಸ್’ ಕಾರ್ಯಕ್ರಮ ಮರುಪ್ರಸಾರವಾಗುತ್ತಿದೆ. ಈ ಲಾಕ್‌ಡೌನ್ ಮುಗಿದ ಮೇಲೆ ಹೊಸ ಹೊಸ ಸೆಲೆಬ್ರಿಟಿಗಳು, ಜನ ಸಾಮಾನ್ಯರ ಜೊತೆಗೆ ನಿರೂಪಕಿ ಸುಷ್ಮಾ ನಿಮ್ಮ ಮುಂದೆ ಬರುತ್ತಾರೆ. ಸಂಬಂಧಗಳನ್ನು ಗಟ್ಟಿಗೊಳಿಸುವ ಅರ್ಥಪೂರ್ಣ ಶೋದ ಮೂಲಕ ಮತ್ತೆ ನಿಮ್ಮ ಮನ ಗೆಲ್ಲುತ್ತಾರೆ.