ಸ್ಯಾಂಡಲ್​ವುಡ್​ ತಾರೆ ಅಮೂಲ್ಯ ಮಕ್ಕಳ ಕೊರಳಲ್ಲೂ ಹುಲಿ ಉಗುರಿನ ಪೆಂಡೆಂಟ್​: ನಟಿ ಹೇಳಿದ್ದೇನು? 

ಈಗ ಎಲ್ಲೆಲ್ಲೂ ಹುಲಿ ಉಗುರಿನದ್ದೇ ಮಾತು. ಬಿಗ್​ಬಾಸ್​ ಮನೆಯಿಂದ ವರ್ತೂರ್​ ಸಂತೋಷ್​ ಅವರನ್ನು ನೇರವಾಗಿ ಅರೆಸ್ಟ್​ ಮಾಡಿಹೋದ ಬಳಿಕ ಇದೀಗ ಹುಲಿ ಉಗುರು ಧರಿಸಿರುವ ನಟರು ಸೇರಿದಂತೆ ಕೆಲವರಿಗೆ ಭೀತಿ ಉಂಟಾಗಿದೆ. ಇದಾಗಲೇ ಕೆಲ ನಟರ ವಿರುದ್ಧ ದೂರು ಕೂಡ ದಾಖಲಾಗಿದೆ. ಹೀಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರೆಸ್ಟ್​ ಮಾಡುತ್ತಿರುವುದಕ್ಕೆ ಇಲ್ಲವೇ ಮನೆಗೆ ಬಂದು ಪರಿಶೋಧನೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಬಹು ದೊಡ್ಡ ಮಟ್ಟಿನ ಚರ್ಚೆ ನಡೆಯುತ್ತಿದೆ. ಕೆಲವರು ಇದರ ಪರವಾಗಿದ್ದರೆ, ಇನ್ನು ಕೆಲವರು ಇದನ್ನು ಧರಿಸಿದರೆ ಅಂಥ ತಪ್ಪೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ನಾಯಕರ ಮೇಲೆ ಅರಣ್ಯ ಇಲಾಖೆ ಕಣ್ಣು ನೆಟ್ಟಿರುವುದರಿಂದ ಗರಂ ಆಗಿದ್ದು, ಚಿತ್ರ ನಟರ ಮೇಲೆ ಏಕೆ ಕಣ್ಣು, ಇದನ್ನು ತುಂಬಾ ಜನ ಧರಿಸುತ್ತಿದ್ದಾರೆ, ಅವರನ್ನೂ ಹಿಡಿಯಲಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇದಕ್ಕೆ ರಾಜಕೀಯದ ರಂಗು ಸೇರಿಸುತ್ತಿದ್ದಾರೆ. ಕೆಲವು ಖ್ಯಾತನಾಮರು ಇದು ಅಸಲಿಯಲ್ಲ, ನಕಲಿ ಉಗುರು ಎಂದು ಹೇಳುತ್ತಿದ್ದಾರೆ. ಹುಲಿ ಉಗುರಿಗೆ ಸಂಬಂಧಿಸಿದಂತೆ ನಟ ಜಗ್ಗೇಶ್​ ಹೈಕೋರ್ಟ್​ ಮೊರೆ ಕೂಡ ಹೋಗಿದ್ದಾರೆ.

ಇಷ್ಟೆಲ್ಲಾ ಹಲ್​ಚಲ್​ ಸೃಷ್ಟಿಯಾಗುತ್ತಿರುವ ನಡುವೆಯೇ, ಯಾವ ಯಾವ ಸೆಲೆಬ್ರಿಟಿಗಳ ಹಾಗೂ ಅವರ ಕುಟುಂಬಸ್ಥರ ಕೊರಳಲ್ಲಿ ಹುಲಿ ಉಗುರು ಇದೆ ಎಂಬ ಬಗ್ಗೆ ಎಲ್ಲರ ಚಿತ್ತ ಹಾಯುತ್ತಿದೆ. ಇದೀಗ ನಟಿ ಅಮೂಲ್ಯ ಅವರ ಅವಳಿ ಮಕ್ಕಳ ಮೇಲೆ ಕಣ್ಣು ಹೋಗಿದೆ. ಇಬ್ಬರು ಮುದ್ದಾದ ಮಕ್ಕಳ ಕುತ್ತಿಗೆಯಲ್ಲಿಯೂ ಹುಲಿ ಉಗುರಿನ ಪೆಂಡೆಂಟ್​ ಇದ್ದು, ಅದರ ಬಗ್ಗೆ ನಟಿ ಖುದ್ದು ಈಗ ಸ್ಪಷ್ಟನೆ ಕೊಟ್ಟಿದ್ದಾರೆ. ಅಷ್ಟಕ್ಕೂ ನಟಿ ಅಮೂಲ್ಯ ಹೇಳಿದ್ದೇನೆಂದರೆ ತಮ್ಮ ಮಕ್ಕಳ ಕೊರಳಲ್ಲಿ ಇರುವುದು ಅಸಲಿ ಹುಲಿಯುಗುರು ಅಲ್ಲ, ಬದಲಿಗೆ ಅವು ಸಿಂಥೆಟಿಕ್​ ಹುಲಿ ಉಗುರು ಎಂದು ಹೇಳಿದ್ದಾರೆ. 

ಚಿತ್ರ ನಟರು ಹುಲಿ ಉಗುರು ಯಾಕೆ ಧರಿಸ್ಬಾರ್ದು? ಇವ್ರು ಕೊಟ್ಟಿದ್ದಾರೆ ಕಾರಣ ನೋಡಿ...

ಮಕ್ಕಳ ನಾಮಕರಣದ ವೇಳೆ ಇದನ್ನು ಧರಿಸಲಾಗಿತ್ತು. ಅದರೆ ಅವು ಅಸಲಿಯಲ್ಲ. ಇಂಥ ಸಿಂಥೆಟಿಕ್​ ಉಗುರುಗಳು 500-600ಗೆ ಸಿಗುತ್ತವೆ ಎಂದಿರುವ ನಟಿ, ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಖಂಡಿತಾ ಅವುಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಇದು ನಿಜ ಎಂದು ತಾವು ಮೊದಲು ನಂಬಿದುದಾಗಿ ನಟಿ ಹೇಳಿದ್ದಾರೆ. ನಾನು ಮೊದಲು ಅದು ನಿಜವಾದ ಹುಲಿ ಉಗುರು ಎಂದುಕೊಂಡಿದ್ದು ಆದರೆ ಅಲ್ಲ. ಇವು ಸಿಂಥೆಟಿಕ್ ಉಗುರು ಅಷ್ಟೇ ಅಂದಿದ್ದಾರೆ ಅಮೂಲ್ಯಾ. ಮಕ್ಕಳ ಬರ್ತ್​ಡೇಗೆ ತಮ್ಮ ಅಮ್ಮ ಕೊಟ್ಟ ಸರಕ್ಕೆ ಈ ನಕಲಿ ಹುಲಿ ಉಗುರು ಹಾಕಿರುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. 

ನನ್ನ ಅಮ್ಮ, ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಚೈನ್​ ಕೊಟ್ಟರು. ಅದಕ್ಕೊಂದು ಪೆಂಡೆಂಟ್​ ಇರಲಿ ಎಂದು ನಾನೇ ಡಿಸೈನ್​ ಮಾಡಿಸಿದ್ದೆ. ಇವು ಸಿಂಥೆಟಿಕ್​ ಉಗುರುಗಳು ಎಂದು ನಟಿ ಅಮೂಲ್ಯಾ ಹೇಳಿದ್ದಾರೆ. ಮೊದಲಾದರೆ ಹುಲಿ ಉಗುರುಗಳು ರಾಜಾರೋಷವಾಗಿ ಸಿಗುತ್ತಿದ್ದವು. ಆದರೆ ಇದೀಗ ಅದು ಅಪರಾಧ ಆಗಿರುವ ಕಾರಣ, ಉಗುರಿಗೆ ಲಕ್ಷಾಂತರ ರೂಪಾಯಿಗಳು ಇವೆ. ಆದರೆ ನಮ್ಮ ಮಕ್ಕಳಿಗೆ ಹಾಕಿರುವ ಉಗುರು 500-600 ರೂಪಾಯಿ ಒಳಗೆ ಸಿಗುತ್ತವೆ ಎಂದಿದ್ದಾರೆ.

ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ, ಅಮ್ಮ ನೀಡಿದ ಹಳೆಯ ಲಾಕೆಟ್‌ ಎಂದಿದ್ದೇನೆ: ಪಾಚ್ಕೊಳಿ ಎಂದ ನಟ ಜಗ್ಗೇಶ್‌!