‘ಈಗ ವೈಫೈ ಕನೆಕ್ಟ್ ಆದಂಗೆ ಮನಸ್ಸು ಮನಸ್ಸು ಕನೆಕ್ಟ್ ಆಗಲ್ಲ. ಒಂದು ವೇಳೆ ಮನಸ್ಸು ಮನಸ್ಸು ಕನೆಕ್ಟ್ ಆದರೆ ಆ ಭಾವನೆಗಳ ತೀವ್ರತೆ ಹೇಗಿರುತ್ತೆ ಅನ್ನೋದನ್ನು ‘ಓ ಮೈ ಲವ್‌’ ಚಿತ್ರದಲ್ಲಿ ಹೇಳೋ ಪ್ರಯತ್ನ ಮಾಡಿದ್ದೀನಿ’.

'ಓ ಮೈ ಲವ್' ಚಿತ್ರ ಮುಹೂರ್ತ; ಶಶಿಕುಮಾರ್ ಪುತ್ರನ ಹೊಸ ಸಿನಿಮಾ! 

-ಹೀಗಂದಿದ್ದು ನಿರ್ದೇಶಕ ಸ್ಮೈಲ್‌ ಶ್ರೀನು. ಅವರೀಗ ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ನಟನೆಯ ‘ಓ ಮೈ ಲವ್‌’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ಹೊರಟಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಷಣ್ಮುಖ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಶ್ರೀನಿ ಸಿನಿಮಾದಲ್ಲಿ ತಾನು ಏನು ಹೇಳಲು ಹೊರಟಿದ್ದೇನೆ ಅನ್ನೋದರ ಬಗ್ಗೆ ಮಾತಾಡಿದ್ರು.

ಶಿಕುಮಾರ್‌ ಪುತ್ರ ಅಕ್ಷಿತ್ ಚಿತ್ರಕ್ಕೆ ದೇವ್‌ ಗಿಲ್‌ ವಿಲನ್‌! 

‘ನನ್ನ ಸಿನಿಮಾಗಳಿಗೆ ಸಾಧ್ಯವಾದಷ್ಟುಹೊಸ ನಟ, ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರ ಮೂಲಕ ನಾವೇನು ಹೇಳಬೇಕು ಅಂದುಕೊಂಡಿದ್ದೇವೋ ಅದನ್ನು ಹೇಳಿಸೋದು ಸುಲಭ. ಜೊತೆಗೆ ಚಿತ್ರದಲ್ಲಿ ಫ್ರೆಶ್‌ನೆಸ್‌ ಇರುತ್ತೆ. ಈ ಸಿನಿಮಾದಲ್ಲಿ ನವರಸಗಳಿವೆ. ಪಕ್ಕಾ ಕಮರ್ಷಿಯಲ್‌ ಚಿತ್ರವಿದು. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಹಾಡುಗಳ ಶೂಟಿಂಗ್‌ಗೆ ವಿದೇಶಕ್ಕೆ ಹೋಗುವ ಪ್ಲಾನ್‌ ಇದೆ’ ಎಂದರು.

ಸಚಿವ ಶ್ರೀರಾಮುಲು ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದರು. ನಟ ಶಶಿಕುಮಾರ್‌ ಮಗನ ಚಿತ್ರವನ್ನು ಪ್ರೋತ್ಸಾಹಿಸುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು. ಕೀರ್ತಿ ಚಿತ್ರದ ನಾಯಕಿ. ದೀಪಿಕಾ ಮುಖ್ಯ ಪಾತ್ರದಲ್ಲಿದ್ದಾರೆ. ರಾಮಾಂಜಿನಿ ಕಥೆ ಬರೆದು, ಚಿತ್ರ ನಿರ್ಮಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ, ಚರಣ್‌ ಅರ್ಜುನ್‌ ಸಂಗೀತವಿದೆ.