Asianet Suvarna News

'ವೀರಪುತ್ರ'ನಾದ ವಿಜಯ್ ಸೂರ್ಯ; ಹೇಗಿದೆ ಗುಳಿಕೆನ್ನೆ ಹುಡುಗನ ಮಾಸ್ ಲುಕ್?

ಬೆಳ್ಳಿ ತೆರೆಗೆ ರೀ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ. ಹೀಗಿದೆ ನೋಡಿ  'ವೀರಪುತ್ರ'ನ ಮಾಸ್ ಲುಕ್ .. 

agnishakshi fame vijay suriya Veeraputra poster and promo video viral
Author
Bangalore, First Published Sep 9, 2020, 2:41 PM IST
  • Facebook
  • Twitter
  • Whatsapp

ಕಿರುತೆರೆ ವೀಕ್ಷಕರ ನೆಚ್ಚಿನ ಚಾಕೊಲೇಟ್ ಬಾಯ್ ವಿಜಯ್ ಸೂರ್ಯ  'ಇಷ್ಟಕಾಮ್ಯ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದರು. ಅದಾದ ನಂತರ ಧಾರಾವಾಹಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಈದೀಗ ಮತ್ತೆ ಸಿನಿಮಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಅಯ್ಯೋ! 'ಅಗ್ನಿಸಾಕ್ಷಿ' ಸಿದ್ಧಾರ್ಥ್ ಲಾಕ್‌ಡೌನ್‌ನಲ್ಲಿ ಏನ್‌ ಮಾಡ್ಕೊಂಡಿದ್ದಾರೆ ನೋಡಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ' ಪ್ರೇಮಲೋಕ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಆಗಿರುವ ವಿಜಯ್ ಸೂರ್ಯ ಈಗ ವೀರಪುತ್ರ ಸಿನಿಮಾದಲ್ಲಿ ನಾಯಕನಾಗಿ  ಅಭಿನಯಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್‌ ಹಾಗೂ ಪ್ರೋಮೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ.

 

 
 
 
 
 
 
 
 
 
 
 
 
 

Veeraputra .! Promo link in the bio , please do check it out and share it 🙏🏼😇

A post shared by Vijay Suriya (@vijaysuriya_07) on Sep 6, 2020 at 10:25pm PDT

ಎಸ್‌ ದೇವರಾಜ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೀರಪುತ್ರ ಸಿನಿಮಾದಲ್ಲಿ ನೀವು ಎಂದೂ ನೋಡಿರದ ವಿಜಯ್ ಸೂರ್ಯನನ್ನು ಚಿತ್ರದಲ್ಲಿ ಕಾಣಬಹುದು. ಚಿತ್ರದ ವಿಶೇಷತೆ ಏನೆಂದರೆ ನಿರ್ದೇಶಕ ದೇವರಾಜ್‌ ಅವರೇ ಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿರುವುದು.

ಸೆಪ್ಟೆಂಬರ್‌ 7ರಂದು ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ಲುಕ್ ಹಾಗೂ ಪ್ರೋಮೋ ವಿಡಿಯೋ ರಿಲೀಸ್ ಮಾಡಲಾಗಿತ್ತು. ಡಿಂಪಲ್‌ ಬಾಯ್‌ ಮಾಸ್‌ ಲುಕ್‌ಗೆ ಹುಡುಗಿಯರ ಕ್ಲೀನ್ ಬೋಲ್ಡ್ ಆಗಿದ್ದಾರೆ.

 

Follow Us:
Download App:
  • android
  • ios