70 ಹಾಗೂ 80 ದಶಕದ ಭೂಗತ ಲೋಕದ ದೊರೆ ಜೈ ರಾಜ್‌ ಜೀವನದ ಮುಖ್ಯ ಕಥೆಯನ್ನು ಚಿತ್ರ ರೂಪದಲ್ಲಿ ತರಲು ಅಗ್ನಿ ಶ್ರೀಧರ್ ಮುಂದಾಗಿದ್ದಾರೆ. ಜೈ ರಾಜ್‌ ಪಾತ್ರದಲ್ಲಿ ಡಾಲಿ ಧನಂಜಯ್ ಮಿಂಚಲಿದ್ದಾರೆಂದು ಈಗಾಗಲೇ ಚಿತ್ರ ತಂಡ ರಿವೀಲ್‌ ಮಾಡಿದೆ.

ಆದರೆ ಜೈ ರಾಜ್‌ ಸಾವಿಗೆ ಕಾರಣವಾದ ಮುತ್ತಪ್ಪ ರೈ ಪಾತ್ರವನ್ನು ಯಾರು ಮಾಡುತ್ತಾರೆ? ಈ ಕುತೂಹಲಕ್ಕೆ ಸ್ವತಃ ಅಗ್ನಿ ಶ್ರೀಧರ್‌ ಅವರೇ ಉತ್ತರಿಸಿದ್ದಾರೆ. ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಅಗ್ನಿ ಶ್ರೀಧರ್‌ ಮಾತನಾಡಿದ್ದು, ಚಿತ್ರದ ಮರ್ಮವನ್ನು ಬಿಚ್ಚಿಟ್ಟಿದ್ದಾರೆ.

ಭೂಗತ ಲೋಕದ 'ಜೈ ರಾಜ್‌' ಬಗ್ಗೆ ಅಗ್ನಿ ಶ್ರೀಧರ್‌ ಬರೆದ ಕಥೆಗೆ ಧನಂಜಯ್ ಹೀರೋ!

'ಜೈ ರಾಜ್‌ ಬಗ್ಗೆ ಮಾಡುತ್ತಿರುವ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಇರುವುದಿಲ್ಲ. 70-80ರ ದಶಕದ ಘಟನೆಗಳನ್ನು ಮಾತ್ರ ಫೋಕಸ್ ಮಾಡಲಾಗುತ್ತದೆ,' ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಚಿತ್ರಕಥೆ ಹಾಗೂ ಸಂಭಾಷಣೆ ಮಾಡುತ್ತಿರುವ ಶ್ರೀಧರ್‌, ಚಿತ್ರದಲ್ಲಿ ನಟಿಸುತ್ತಾರಾ?

'ಚಿತ್ರ ಕಥೆ ಇನ್ನೂ ತಯಾರಿಯಲ್ಲಿದೆ. ಚಿತ್ರದಲ್ಲಿ ಅಗ್ನಿ ಶ್ರೀಧರ್‌ ಇರಬಹುದು, ಇಲ್ಲದೆಯೂ ಇರಬಹುದು. ಕಥೆ ಬೆಳೆಯುತ್ತಿದ್ದಂತೆ, ಯಾವ ಯಾವ ಪಾತ್ರ ಬರುತ್ತವೋ ನೋಡೋಣ' ಎಂದು ಹೇಳಿದ್ದಾರೆ. ಅಶುಬೆದ್ರ ವೆಂಚರ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕ ಶೂನ್ಯ ನಿರ್ದೇಶಿಸುತ್ತಿದ್ದಾರೆ.