Asianet Suvarna News Asianet Suvarna News

Aditi Prabhudeva ಲವ್ ಮ್ಯಾರೇಜ್‌ ಅಲ್ಲ ಅರೇಂಜ್ಡ್‌,ಲವ್ ಮಾಡಿದ್ರೂ ಇಷ್ಟೊಳ್ಳೆ ಹುಡ್ಗ ಸಿಕ್ತಿರ್ಲಿಲ್ಲ

ಹಸೆಮಣೆ ಏರಲು ಸಜ್ಜಾಗಿರುವ ಅದಿತಿ ಪ್ರಭದೇವ. ರಿಯಲ್ ಲೈಫಲ್ಲಿ ಡಬಲ್ ರೈಡಿಂಗ್ ಮಾಡಿದ್ದಾರಾ? 
 

Aditi Prabhudeva talks about marriage and fiance Yashasvi vcs
Author
First Published Nov 9, 2022, 2:44 PM IST

ಕನ್ನಡ ಚಿತ್ರರಂಗದಲ್ಲಿ ಶಾನೆ ಟಾಪ್ ಆಗಿರುವ ನಟಿ ಅದಿತಿ ಪ್ರಭುದೇವ ನವೆಂಬರ್ 27ರಂದು ಅರಮನೆ ಮೈದಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಉದ್ಯಮಿ ಯಶಸ್ವಿ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟ ನಂತರ ಯುಟ್ಯೂಬ್‌ನಲ್ಲಿನಲ್ಲಿ ಅತ್ತೆ-ಮಾವ ಹಾಗೂ ಭಾವಿ ಪತಿ ಜೊತೆ ವಿಡಿಯೋ ಮಾಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡು ಒಂದು ವರ್ಷದ ನಂತರ ಮದುವೆ ಅಗುತ್ತಿರುವ ಕಾರಣ ಲವ್ ಮತ್ತು ಹೊಂದಾಣಿಕೆ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

'ಮದುವೆ ಸಂಭ್ರಮ ಜೋರಾಗಿದೆ. ಮಿಕ್ಸಡ್‌ ಫೀಲಿಂಗ್ಸ್‌ ಇದೆ ಏಕೆಂದರೆ ಮದುವೆ ಹಿಂದಿನ ದಿನವೂ ನಾನು ಶೂಟಿಂಗ್ ಮಾಡುತ್ತಿರುವೆ. ತುಂಬಾ ಖುಷಿ ಇದೆ. ಪ್ರತಿಯೊಬ್ಬರ ಬದುಕಿನಲ್ಲೂ ಬ್ಯೂಟಿಫುಲ್ ಚಾಪ್ಟರ್ ಇದು ನನ್ನ ಲೈಫ್‌ನಲ್ಲೂ ಬ್ಯೂಟಿಫುಲ್ ಚಾಪ್ಟರ್ ಇದಾಗಲಿದೆ ಅದನ್ನ ಸರಿಯಾಗಿ ನಿಭಾಯಿಸುತ್ತೀನಿ ಅನ್ನೋ ನಂಬಿಕೆ ಮೇಲೆ 27 ನವೆಂಬರ್ ಮದುವೆ ಆಗುತ್ತಿರುವೆ' ಎಂದು ಮದುವೆ ಬಗ್ಗೆ ಅದಿತಿ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Aditi Prabhudeva talks about marriage and fiance Yashasvi vcs

'ಇದು ಲವ್ ಮ್ಯಾರೇಜ್ ಅಲ್ಲ ತಪ್ಪು ಮಾಹಿತಿ ಕೊಡುತ್ತಿದ್ದೀರಾ ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್. ಎಂಗೇಜ್ ಆಗಿ ಒಂದು ವರ್ಷ ಆಗಿದೆ ಈ ಒಂದು ವರ್ಷದಲ್ಲಿ ತುಂಬಾ ಅರ್ಥ ಮಾಡಿಕೊಂಡಿದ್ದೀವಿ . ಬಹುಷ ನಾನು ಲವ್ ಮಾಡಿದ್ದರೂ ಇಷ್ಟೊಳ್ಳೆ ಹುಡುಗ ಸಿಗುತ್ತಿರಲಿಲ್ಲ. ಅಪ್ಪ ಅಮ್ಮನೇ ಅರೇಂಜ್ಡ್‌ ಮ್ಯಾರೇಜ್‌ನಲ್ಲಿ ಇಷ್ಟೊಳ್ಳೆ ಹುಡುಗನನ್ನು ಕೊಟ್ಟಿದ್ದಾರೆ ಅದೇ ನನಗೆ ಖುಷಿ ವಿಚಾರ. ಇಷ್ಟು ದಿನ ಒಬ್ಬಂಟಿ, ಒಬ್ಬಳೆ ಹೋರಾಟ ಮಾಡಬೇಕಿತ್ತು ಈಗ ಜೋಡಿ ಆದ ಮೇಲೆ ಶಕ್ತಿ ಜಾಸ್ತಿಯಾಗಿದೆ. ನನ್ನ ಕನಸುಗಳಿಗೆ ಪ್ರೋತ್ಸಾಹ ನೀಡುವಂತ ಕುಟುಂಬ ಸಪೋರ್ಟ್ ಮಾಡ್ತಾರೆ. ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಕಮ್ ಬ್ಯಾಕ್ ಮಾಡುತ್ತೀನಿ. ಯಶಸ್ವಿ ಅವರ ಜೊತೆ ಡಬಲ್ ರೈಡಿಂಗ್ ಹೋಗಿಲ್ಲ ಬರೀ ಕಾರಿನಲ್ಲಿ ಸುತ್ತಾಡಿದ್ದೀವಿ ಬೈಕ್‌ನಲ್ಲಿ ಹೋಗುವ ಆಸೆ ಇದೆ ಹೋಗಬೇಕು' ಎಂದು ಅದಿತಿ ಹೇಳಿದ್ದಾರೆ. 

ಕೆಲಸಕ್ಕಿಂತ ಪತಿ ಮುಖ್ಯ:

ಈ ಹಿಂದೆ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಅದಿತಿ ಭಾಗಿಯಾಗಿದ್ದಾಗ  ದಾಂಪತ್ಯ ಜೀವನ ಹೇಗಿರುತ್ತೆ, ಏನೆಲ್ಲಾ ಫಾಲೋ ಮಾಡಬೇಕು ಯಾವುದಕ್ಕೆ ಹೆಚ್ಚು ಪ್ರಮುಖ್ಯತೆ ನೀಡಬೇಕು ಎಂದು ಚರ್ಚೆ ಮಾಡಿದ್ದಾರೆ. 'ನೋಡಿದವರು ಕಲಾವಿದ ಜೀವನದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅದತಿ ಅಂದ್ರೆ ಎಲ್ಲರೂ ಹೇಳುವುದು ಸದಾ ನಗುತ್ತಿರುತ್ತಾಳೆ ಖುಷಿಯಾಗಿರುತ್ತಾಳೆ ಅಂತ. ನಗು ಖುಷಿ ಇದ್ದೇ ಇದೆ ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿದೆ. ನನ್ನ ಜೀವನ ಒಳ್ಳೆಯ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಅನ್ನೋ ಆಸೆ ಇದೆ. ಇದುವರೆಗೂ ನಾನು ಒಂದು ಪಾರ್ಟಿಗೂ ಹೋಗಿಲ್ಲ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಒಳ್ಳೆ ರೀತಿ ಜೀವನಕ್ಕೆ ನಾನು ಈ ರೀತಿ ಬದುಕು ಕಟ್ಟಿಕೊಂಡಿರುವೆ. ದೇವರು ಅನ್ನೋ ಶಕ್ತಿ ನಂಬಿದಾಗ ಮೋಸ ಆಗೋಲ್ಲ ಅಂತಾರೆ. ಹೀಗಾಗಿ ಸ್ವಲ್ಪ ಎಮೋಷನ್ ಆದೆ. ಲವ್ ಕೂಡ ಮಾಡೋಕೆ ಆಗಿಲ್ಲ ನನ್ನ ಕರ್ಮಕ್ಕೆ. ಈ ರೀತಿ ಇರುವ ಹುಡುಗಿಗೆ ಹುಡುನ ನೋಡಿ ಫೀಲಿಂಗ್ ಬಂದಿರುವುದು ಇದೇ ಮೊದಲು' ಹೇಳಿದ್ದಾರೆ.

ನಮ್ ಫಿಗರ್ ನಮ್ ತರಾನೇ; ಭಾವಿ ಪತಿಯನ್ನು ಫಿಗರ್ ಎಂದು ಕರೆದ ಅದಿತಿ ಪ್ರಭುದೇವ

'ಯಾವ ಪಾರ್ಟಿಯಲ್ಲೂ ಭಾಗಿಯಾಗಬೇಕು ಅನಿಸುತ್ತಿರಲಿಲ್ಲ. ಆರ್ಟಿಸ್ಟ್‌ ಅಂದ್ರೆ ಜನರು ಬೇರೇ ರೀತಿ ನೋಡ್ತಾರೆ. ಇಂಡಸ್ಟ್ರಿಗೆ ಕಾಲಿಟ್ಟಾಗ ನನ್ನ ಅಮ್ಮ ಏನ್ ಮಾಡಿದರು ಅಂದ್ರೆ ನಾನು ಮಲಗಿಕೊಂಡು ಚೆನ್ನಾಗಿದ್ದೆ ಪುಟ್ಟ ಬಾ ಇಲ್ಲಿ ಅಂದು ದೇವರ ಮನೆ ಮುಂದೆ ನಿಲ್ಲಿಸಿದ್ದರು. ಭಾಷೆ ತೆಗೆದುಕೊಂಡರು ಈಗ ನೀನು ಹೇಗೆ ನನ್ನ ಮಗಳಾಗಿರುವೆ ಇದೇ ರೀತಿ ಮುಂದಕ್ಕೂ ಇರಬೇಕು. ಈ ಮಾತು ಸುಮ್ಮನೆ ಹೇಳಿಲ್ಲ ಸುಮಾರು ಅರ್ಥಗಳಿದೆ. ಅವರು ಹೇಳಿರುವ ಅರ್ಥ ನನಗೆ ಸೂಕ್ಷ್ಮವಾಗಿ ಅರ್ಥವಾಗಿದೆ. ಇದೆಲ್ಲಾ ಬೇಡ ಯಾಕೆ ಅಂತ ನನ್ನನ್ನು ನಾನು restrict ಮಾಡಿಕೊಳ್ಳುತ್ತಿದ್ದೆ ಹಿಂಸೆ ಆಗುತ್ತಿತ್ತು ಬುಕ್‌ನಲ್ಲಿ ಬರಿ ಆಮೇಲೆ ಹರಿದು ಹಾಕುತ್ತಿದ್ದೆ. ನನ್ನ ಪತಿ ನನ್ನ ಬೆಸ್ಟ್‌ ಫ್ರೆಂಡ್‌. ನನ್ನ ಜೀವನದಲ್ಲಿ ನೀವು ಬಂದಿದಕ್ಕೆ ಧನ್ಯಾವದಗಳು. ಜೀವನದಲ್ಲಿ ನಾನು ತೆಗೆದುಕೊಂಡಿರುವ ಬೆಸ್ಟ್‌ ನಿರ್ಧಾರ ಅಂದ್ರೆ ನೀವೇ' ಎಂದಿದ್ದಾರೆ.

Follow Us:
Download App:
  • android
  • ios