Asianet Suvarna News Asianet Suvarna News

ಅದಿತಿ ಪ್ರಭುದೇವ ಮದುವೆಗೆ ರಣವೀರ್ ಸಿಂಗ್ ಡಿಸೈನರ್?; ಕಾಲೆಳೆದ ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ

ಕಿರುತೆರೆಯಲ್ಲಿ ಕಾಣಿಸಿಕೊಂಡ ಅದಿತಿ ಪ್ರಭುದೇವ. ಪತಿಗೆ ಮುತ್ತಿಡಲು ಕಾರಣ ತಿಳಿಸಿದ ನಟಿ...... 

Aditi Prabhudeva recalls her wedding special moments and talks about husband Yashas vcs
Author
First Published Jan 24, 2023, 11:10 AM IST

ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ ಸ್ಟಾರ್ ಸುವರ್ಣ ವಾಹಿನಿ ಜೊತೆ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಈ ವೇಳೆ  ಮದುವೆ ಕ್ಷಣಗಳು ಹೇಗಿತ್ತು? ಮದುವೆ ಬಟ್ಟೆಗಳನ್ನು ಡಿಸೈನ್ ಮಾಡಿದ್ದವರು ಯಾರೆಂದು ಚರ್ಚೆ ಮಾಡಿದ್ದಾರೆ. 

ವೈವಾಹಿಕ ಜೀವನ ಹೇಗಿದೆ?

'ನಾನು ಕಲಾವಿದೆಯಾಗಿ ಹುಟ್ಟಿದ್ದು ಕಿರುತೆರೆಯಿಂದ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಮರಳುವುದು ತುಂಬಾನೇ ಇಷ್ಟ. ಪ್ರತಿಯೊಂದು ಹಬ್ಬ ನನಗೆ ತುಂಬಾನೇ ಇಷ್ಟ, ತುಂಬಾ ಗೌರವದಿಂದ ಆಚರಿಸುತ್ತೀನಿ. ಈ ವರ್ಷ ಮದುವೆ ಆಗಿರುವುದರಿಂದ ಫ್ಯಾಮಿಲಿ ದೊಡ್ಡದಾಗಿದೆ, ಅಪ್ಪ ಅಮ್ಮ ರೀತಿ ಇರುವ ಅತ್ತೆ ಮಾವ ಸಿಕ್ಕಿದ್ದಾರೆ ಫ್ರೆಂಡ್ ಇರುವ ಗಂಡ ಸಿಕ್ಕಿದ್ದಾರೆ. ಒಟ್ಟಾರೆ ಫ್ಯಾಮಿಲಿ ದೊಡ್ಡದಾಗಿರುವುದಕ್ಕೆ ಖುಷಿ ಇದೆ. ಬೆಸ್ಟ್‌ ಫ್ರೆಂಡ್‌ ನನ್ನ ಪತಿಯಾಗಿರುವುದು ಇನ್ನೂ ಖುಷಿ ಇದೆ. ನನ್ನ ಪತಿ ಜೊತೆಗಿರುವ ದಿನಗಳೆಲ್ಲಾ ನನಗೆ ಹಬ್ಬನೇ. ಎಲ್ಲರು ಅಂದುಕೊಳ್ಳುತ್ತಾರೆ ಹೊಸದಾಗಿ ಮದುವೆ ಆಗಿದ್ದಾರೆ ಅದಿಕ್ಕೆ ಈ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು. ಇಲ್ಲ ಇಲ್ಲ ಒಂದುವರೆ ವರ್ಷದಿಂದ ಯಶಸ್ ಅವರ ಜೊತೆ ಪ್ರಯಾಣ ಮಾಡಿರುವೆ. ಇನ್ನೂ ಜಾಸ್ತಿ ಖುಷಿ ಇದೆ ಈ ವರ್ಷ' ಎಂದು ಅದಿತಿ ಮಾತನಾಡಿದ್ದಾರೆ. 

ಹಳದಿ ಸೀರೆ: 

ನನ್ನ ಡಿಸೈನರ್ ಚಂದನ್ ಅವರಿಗೆ ನಾನು ಧನ್ಯವಾದಗಳನ್ನು ಹೇಳಬೇಕು. ವೈಟ್ ಸೀರೆಯಲ್ಲಿ ಕಾಣಿಸಿಕೊಳ್ಳಬೇಕು  ಈ ರೀತಿ ಬೇಕು ಅಂತ ಹೇಗೆ ಚಿಂತಿಸಿದ್ದೆ ಅದೇ ರೀತಿ ಡ್ರೆಸ್‌ ಚೆನ್ನಾಗಿ ಮಾಡಿದ್ದಾರೆ. ಅದರಿಂದ ಲುಕ್ ಚೆನ್ನಾಗಿದೆ.

ಊಟ ಮಾಡುವಾಗ ವಾಂತಿ ಮಾಡಿದ ಅದಿತಿ ಪ್ರಭುದೇವ; ವಿಡಿಯೋ ವೈರಲ್ 

ಮೆಹೇಂದಿ:

ರಣವೀರ್ ಸಿಂಗ್ ಡ್ರೆಸ್ ಡಿಸೈನ್ ಮಾಡಿದ್ದಾರೆ ಎಂದು ನೆಟ್ಟಿಗರು ಗಾಸಿಪ್ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಶಿವರಾಜ್‌ ಕೆಆರ್‌ ಪೇಟೆ ಪ್ರಶ್ನೆ ಮಾಡಿದಾಗ ಅದಿತಿ ನಗು ನಗುತ್ತಲೇ ಉತ್ತರ ಕೊಟ್ಟಿದ್ದಾರೆ. ಮೆಹೇಂದಿ ತುಂಬಾ ಕಲರ್‌ಫುಲ್ ಆಗಿರಬೇಕು ಎಂದು ಪ್ಲ್ಯಾನ್ ಮಾಡಲಾಗಿತ್ತು ಹೀಗಾಗಿ ಹಿಂದೆ ಡೆಕೊರೇಷನ್‌ ಕೂಡ ಅದೇ ರೀತಿ ಮಾಡಿಸಲಾಗಿತ್ತು.

Aditi Prabhudeva recalls her wedding special moments and talks about husband Yashas vcs

ಇದಾದ ಮೇಲೆ ತಾಳಿ ಕಟ್ಟುವ ವಿಡಿಯೋ ನೋಡಿ ಅದಿತಿ ಪ್ರಭುದೇವ ಭಾವುಕರಾಗಿದ್ದಾರೆ. 'ಚಿತ್ರರಂಗದಲ್ಲಿ ನಾವು ತುಂಬಾ ಸ್ಟ್ರಗಲ್ ಮಾಡಿ ಬಂದಿರುವವರು. ಚಿಕ್ಕದಾಗಿ ಆರಂಭಿಸಿ ಒಂದೊಂದೆ ಹೆಜ್ಜೆ ಇಟ್ಕೊಂಡು ಬೆಳೆದರವರು. ಈ ಜರ್ನಿಯಲ್ಲಿ ನಮ್ಮ ಜೊತೆ ಒಬ್ಬ ಸ್ಟ್ರಾಂಗ್ ಆಗಿರುವ ವ್ಯಕ್ತಿ ಜೊತೆಗೆ ಇರಬೇಕು ಅನಿಸುತ್ತದೆ. ತುಂಬಾ ಜನ ಹೇಳುತ್ತಾರೆ ಹುಡುಗಿಯರು ಇಂಡಿಪೆಂಡೆಂಟ್‌ ಅದು ಇದು ಎಂದು ಆದರೆ ಪ್ರತಿಯೊಂದು ಹೆಣ್ಣಿಗೂ ಹುಡುಗನ ಆಸೆ ಬೇಕೇ ಬೇಕು ಅದು ತಂದೆ, ತಮ್ಮ ಅಥವಾ ಗಂಡ ಆಗಿರಬಹುದು. ಗಂಡ ಅನ್ನೋ ರೋಲ್ ತುಂಬಾನೇ ಮುಖ್ಯವಾಗುತ್ತದೆ, ಎಷ್ಟು ವರ್ಷ ಬದುಕಿರುತ್ತೀನಿ ಅವರ ಜೊತೆ ಜೀವನ ನಡೆಸಬೇಕು. ಇದೆಲ್ಲಾ ದೇವರ ದಯೇ..ಲವ್ ಮಾಡಿದ್ದರೂ ಇಷ್ಟು ಒಳ್ಳೆಯ ಹುಡುಗ ಸಿಗುತ್ತಿದ್ದರು ಇಲ್ವೋ ಗೊತ್ತಿಲ್ಲ. ಅರೇಂಜ್ಡ್‌ ಕಾನ್ಸೆಪ್ಟ್‌ನಲ್ಲಿ ನನಗೆ ಒಳ್ಳೆ ಹುಡುಗಿ ಸಿಕ್ಕಿ ಅವರನ್ನು ನಾನು ತುಂಬಾ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿರುವೆ. ತಾಳಿ ಕಟ್ಟಿಸಿಕೊಳ್ಳುವಾಗ ಕಣ್ಣೀರು ತುಂಬಾನೇ ಕಂಟ್ರೋಲ್ ಮಾಡಿದೆ...ಅಪ್ಪ ಅಮ್ಮ ಬಿಟ್ಟು ಹೋಗುತ್ತೀನಿ ಅನ್ನೋ ವಿಚಾರ ಅಲ್ಲ ಏಕೆಂದರೆ ಫೋನ್ ಇರುತ್ತದೆ ಎಲ್ಲರೂ ಜೊತೆಗಿರುತ್ತೀವಿ. ಇನ್ನು ಮುಂದೆ ನನ್ನ ಜೀವನದಲ್ಲಿ ಹೆಚ್ಚಿಗೆ ಖುಷಿ ಇರಲಿದೆ ಅನ್ನೋದು ಖುಷಿಗೆ ಕಣ್ಣಿರಿಟ್ಟಿದ್ದು' ಎಂದು ಅದಿತಿ ಹೇಳಿದ್ದಾರೆ.

ಅದಿತಿ ಪ್ರಭುದೇವ ಮೆಹೆಂದಿ; ಅರಮನೆ ಮೈದಾನದಲ್ಲಿ ಕೆಂಪು-ಕೆಂಪು ಸೆಟ್...

ಮುತ್ತಿನ ಐಡಿಯಾ ಬಂದಿದ್ದು ಹೇಗೆ ಎಂದು ಶಿವರಾಜ್‌ ಕೇಳುತ್ತಾರೆ. 'ತುಂಬಾ ಮುದ್ದು ನಮ್ಮ ಹುಡುಗ. ನನ್ನ ಬದುಕಿನ ಮೋಸ್ಟ್‌ ಮೆಮೋರಬಲ್‌ ಕ್ಷಣವನ್ನು ಕ್ರಿಯೇಟ್ ಮಾಡಿದ್ದರು. ಅವರೇ ಎಲ್ಲನೂ ಅರೇಂಜ್ ಮಾಡಿರುವುದು. ಅದೇ ಖುಷಿಗೆ ಸದಾ ನೆನಪು ಇಟ್ಟಿಕೊಳ್ಳುವ ಗಿಫ್ಟ್‌ ಕೊಡಬೇಕು ಎಂದು ಮುತ್ತು ಕೊಟ್ಟೆ. 

ರಾಧಿಕಾ ಪಂಡಿತ್‌ಗೆ ಮುತ್ತು:

ರಾಧಿಕಾ ಪಂಡಿತ್ ಅವರು ನನ್ನ ಡಾರ್ಲಿಂಗ್. ಸ್ಪೂರ್ತಿಯಾಗಿ ನೋಡುತ್ತೀನಿ.  ನಾಯಕ ನಟಿ ಅಥವಾ ನಾಯಕ ಅಂದ್ಮೇಲೆ ಪರದೆ ಮೇಲೆ ಮಾತ್ರ ಹೀರೋ ಹೀರೋಯಿನ್ ರೀತಿ ಕಾಣಿಸಿಕೊಳ್ಳುವುದಲ್ಲ. ವ್ಯಕ್ತಿತ್ವವನ್ನು ಉನ್ನತ ಮಟ್ಟದಲ್ಲಿ ಇಟ್ಟಿಕೊಳ್ಳಬೇಕು ಅನ್ನೋದು ನನ್ನ ಪರ್ಸನಲ್ ಅಭಿಪ್ರಾಯ.ಕೆಲವು ವ್ಯಕ್ತಿಗಳು ತುಂಬಾ ಇನ್ ಸ್ಪೈರ್ ಮಾಡುತ್ತಾರೆ. ಕೆಲವರನ್ನು ನೋಡಿದ್ದರೆ ನಮ್ಮ ಮನೆ ಲಕ್ಷ್ಮಿ ನಮ್ಮ ಮನೆ ಹೆಣ್ಣು ಮಕ್ಕಳು ಈ ರೀತಿ ಇರಬೇಕು ಅನಿಸುತ್ತದೆ...ಆ ಲಿಸ್ಟ್‌ಗೆ ರಾಧಿಕಾ ಮೇಡಂ ಸೇರಿಕೊಳ್ಳುತ್ತಾರೆ. ನಾನು ತುಂಬಾ ಇಷ್ಟ ಪಡುವ ನಾಯಕಿ ಅವರು ಎಂದಿದ್ದಾರೆ ಅದಿತಿ.

Follow Us:
Download App:
  • android
  • ios