ನಟ ಮೈ ತೋರಿಸಿದರೆ ನಿಮಗೆ ಓಕೆ, ನಟಿ ಮೈ ಕಂಡರೆ ಮಾತ್ರ 'ದೇಹ ಪ್ರದರ್ಶನ'ವೇ; ತನಿಷಾ ಮಾತು ಭಾರೀ ವೈರಲ್!
ಪ್ರೆಸ್ ಮೀಟ್‌ಗಳಲ್ಲಿ ಹಾಗು ಸಂದರ್ಶನಗಳಲ್ಲಿ ಈ ಇಬ್ಬರೂ ನಟಿಯರಿಗೆ ಆ ಪಾತ್ರದಲ್ಲಿ ಅವರು ಬೋಲ್ಡ್ ಆಗಿ ನಟಿಸಿದ್ದರ ಬಗ್ಗೆ ಪದೇಪದೇ ಕೇಳಿ ಅವರಿಂದ ಉತ್ತರಗಳನ್ನು ನಿರೀಕ್ಷಿಸಲಾಗಿತ್ತು. ಆ ವೇಳೆ ಈ ಇಬ್ಬರೂ 'ದಂಡುಪಾಳ್ಯ' ಚಿತ್ರದ ಕಥೆಗೆ, ಪಾತ್ರಕ್ಕೆ ಹಾಗೇ ಅರೆಬರೆ ಬೆತ್ತಲೆ ಕಾಣಿಸಿಕೊಳ್ಳುವ ಅಗತ್ಯವಿತ್ತು, ಬೆನ್ನು ತೋರಿಸಲೇಬೇಕಿತ್ತು.
ಬಿಗ್ ಬಾಸ್ ಕನ್ನಡ ಸೀಸನ್ ಸ್ಪರ್ಧಿ ತನಿಷಾ ಕುಪ್ಪುಂದ ರೆಬಲ್ ನೇಚರ್‌ಗೆ ಹೆಸರಾದವರು ಎನ್ನಬಹುದು. ಕಣ್ಣಿಗೆ ಕಂಡಿದ್ದನ್ನು ಕಂಡ ಹಾಗೇ ಹೇಳುವ ನಟಿ ತನಿಷಾ ಬಗ್ಗೆ ಅವರನ್ನು ಬಲ್ಲವರು ಹೇಳುವುದು 'ಸ್ಟ್ರೇಟ್ ಫಾರ್ವಡ್' ಎಂದು. ಅಷ್ಟರಮಟ್ಟಿಗೆ ತನಿಷಾ ನೇರಾನೇರ ಮಾತನಾಡುವ ಹುಡುಗಿ, ಸ್ವಲ್ಪ ಡಾಮಿನೇಟಿಂಗ್ ಸ್ವಭಾವವೂ ಇದೆ ಎನ್ನಬಹುದು. ಅಂಥ ತನಿಷಾ ತಮ್ಮ ಹಿಂದಿನ ಒಂದು ಕಹಿ ಘಟನೆ ಬಗ್ಗೆ ಮಾತನಾಡಿರುವುದು ಈಗ ವೈರಲ್ ಆಗಿದೆ. ಬಿಗ್ ಬಾಸ್ ಮನೆಯೊಳಕ್ಕೆ ತನಿಷಾ ಇರುವ ಈ ವೇಳೆ, ಅವರು ಯಾವತ್ತೋ ಆಡಿದ್ದ ಮಾತುಗಳು ವೈರಲ್ ಆಗತೊಡಗಿವೆ.
ಹಾಗಿದ್ದರೆ ತನಿಷಾ ಹಿಂದೊಮ್ಮೆ ಹೇಳಿದ್ದೇನು? ನಟಿ ತನಿಷಾ ಅವರು ರಿಯಾಲಿಟಿ ಶೋ, ಸೀರಿಯಲ್ಸ್ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ನಟಿಸಿದ್ದ 'ದಂಡುಪಾಳ್ಯ 2 ಹಾಗು ಪೆಂಟಗನ್' ಚಿತ್ರಗಳಲ್ಲಿ ಅರೆಬರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದರು. ಕಾರಣ, ಅದು ಪಾತ್ರಕ್ಕೆ ಅಗತ್ಯವಿತ್ತು. ದಂಡುಪಾಳ್ಯ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಕೂಡ ಹಾಗೇ ಬೆನ್ನು ತೋರಿಸಿ ಸುದ್ದಿಯಾಗಿದ್ದರು. ಪೂಜಾ ಗಾಂಧಿಯ ವಿಷಯದಲ್ಲೂ ಆ ಕಾಲದಲ್ಲಿ ಅದೊಂದು ಕಾಂಟ್ರೋವರ್ಸಿ ಎಂಬಂತೆ ಬಿಂಬಿಸಲಾಗಿತ್ತು. ಹಾಗೇ, 'ದಂಡುಪಾಳ್ಯ 2' ಹಾಗೂ 'ಪೆಂಟಗನ್' ಚಿತ್ರದಲ್ಲಿ ತನಿಷಾ ಸಹ ಸುದ್ದಿಯಾಗಿದ್ದರು.
ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ!
ಪ್ರೆಸ್ ಮೀಟ್‌ಗಳಲ್ಲಿ ಹಾಗು ಸಂದರ್ಶನಗಳಲ್ಲಿ ಈ ಇಬ್ಬರೂ ನಟಿಯರಿಗೆ ಆ ಪಾತ್ರದಲ್ಲಿ ಅವರು ಬೋಲ್ಡ್ ಆಗಿ ನಟಿಸಿದ್ದರ ಬಗ್ಗೆ ಪದೇಪದೇ ಕೇಳಿ ಅವರಿಂದ ಉತ್ತರಗಳನ್ನು ನಿರೀಕ್ಷಿಸಲಾಗಿತ್ತು. ಆ ವೇಳೆ ಈ ಇಬ್ಬರೂ 'ದಂಡುಪಾಳ್ಯ' ಚಿತ್ರದ ಕಥೆಗೆ, ಪಾತ್ರಕ್ಕೆ ಹಾಗೇ ಅರೆಬರೆ ಬೆತ್ತಲೆ ಕಾಣಿಸಿಕೊಳ್ಳುವ ಅಗತ್ಯವಿತ್ತು, ಬೆನ್ನು ತೋರಿಸಲೇಬೇಕಿತ್ತು. ನಿರ್ದೇಶಕರ ಕಲ್ಪನೆಗೆ, ಕ್ರಿಯೇಟಿವಿಟಿಗೆ ನ್ಯಾಯ ಒದಗಿಸುವುದು ಕಲಾವಿದರು, ನಟನಟಿಯರಾಗಿರುವ ನಮ್ಮ ಕೆಲಸ, ಕರ್ತವ್ಯ' ಎಂದು ಹಲವಾರು ಬಾರಿ ಉತ್ತರಿಸಿದ್ದರು. ಆದರೂ ಆ ಪ್ರಶ್ನೆ ಪದೇಪದೇ ಬರುತ್ತಲೇ ಇತ್ತು.
ಹಾಗೊಮ್ಮೆ ನಟಿ ತನಿಷಾಗೆ ಈ ಬಗ್ಗೆ ಇಂಟರ್‌ವ್ಯೂ ಒಂದರಲ್ಲಿ ಕೇಳಲಾಗಿತ್ತು. ಅದಕ್ಕೆ ತನಿಷಾ ಸಾಕಷ್ಟು ಸೀರಿಯಸ್ಸಾಗಿ, ನೇರಾನೇರ ಉತ್ತರ ಕೊಟ್ಟಿದ್ದರು. 'ಅದೇ ಚಿತ್ರದಲ್ಲಿ, ಅದೇ ದೃಶ್ಯದಲ್ಲಿ ನಮ್ಮ ಜತೆ ಇದ್ದ ಹೀರೋ ಪಾತ್ರ ಕೂಡ ನಮ್ಮಂತೆ ಪಾತ್ರಕ್ಕೆ ತಕ್ಕಂತೆ ದೇಹ ಪ್ರದರ್ಶನ ಮಾಡಿದ್ದಾರೆ. ಅವರು ಕೂಡ ಎದೆ, ಬೆನ್ನು ಎಲ್ಲವನ್ನೂ ತೋರಿಸಿದ್ದಾರೆ. ನೀವ್ಯಾಕೆ ಆ ಬಗ್ಗೆ ಪ್ರಶ್ನೆ ಎತ್ತುವುದಿಲ್ಲ? ಅದ್ಯಾಕೆ ಹೆಣ್ಣುಮಕ್ಕಳ ಬಗ್ಗೆ ನಿಮಗೆ ಪ್ರಶ್ನೆಗಳು ಏಳುತ್ತವೆ? ಹೆಣ್ಣಿನ ದೇಹ ಹೆಣ್ಣಿನಂತೆ, ಗಂಡಿನ ದೇಹ ಗಂಡಿನಂತೆ ಇರುತ್ತವೆ. ಹೇಗಿದೆಯೋ ಹಾಗೆ ಕಾಣಿಸುತ್ತದೆ.
ನಟಿ ಶ್ರೀದೇವಿ ಸಡನ್ನಾಗಿ ನಟನೆ ನಿಲ್ಲಿಸಿದ್ದು ಯಾಕೆ, ಕೆರಿಯರ್‌ಗೆ ಮೇನ್ ವಿಲನ್ ಆಗಿದ್ದು ಇವರೇ ನೋಡಿ!
ನಮ್ಮ ಕೆಲಸಕ್ಕೆ, ಪಾತ್ರಕ್ಕೆ ತಕ್ಕಂತೆ ದೇಹವನ್ನು ಕ್ಯಾಮರಾ ಮುಂದೆ ತೋರಿಸಿದರೆ ಅದನ್ನು ದೇಹ ಪ್ರದರ್ಶನ ಎಂದು ಯಾಕೆ ಕರೆಯಬೇಕು, ಕಲೆ ಎಂದು ಕರೆಯಬಾರದೇ? ಕಲಾವಿದರ ಕೆಲಸ ನಿರ್ದೇಶಕರು ಹೇಳಿದಂತೆ ನಟಿಸುವುದು. ಅದಕ್ಕಾಗಿಯೇ ನಮಗೆ ಹಣ ಕೊಡುವುದು. ನಿಮಗೆ ನಮ್ಮ ಪಾತ್ರದಲ್ಲಿ ಯಾವುದೇ ಸಮಸ್ಯೆ ಕಂಡರೆ, ನಿಮ್ಮ ಪ್ರಶ್ನೆಗಳನ್ನು ಆಯಾ ಸಿನಿಮಾ ನಿರ್ದೇಶಕರಿಗೆ ಕೇಳುವುದು ಸೂಕ್ತ' ಎಂದು ನಟಿ ತನಿಷಾ ಕಡ್ಡಿ ಮುರಿದಂತೆ ಹೇಳಿದ್ದರು. ಅವರು ಆಡಿರುವ ಮಾತುಗಳು ಈಗ ಸಖತ್ ವೈರಲ್ ಆಗುತ್ತಿವೆ.