ಮುಂದಿನ ಜನರೇಷನ್‌ಗೆ ಆಗುವಷ್ಟು ಅಪ್ಪ- ಅಮ್ಮ ದುಡಿದಿಟ್ಟಿದ್ದಾರೆ, ಹಣ ಮುಖ್ಯವಲ್ಲ: ಶ್ವೇತಾ ಪ್ರಸಾದ್ ಹೇಳಿಕೆ ವೈರಲ್!
ಹಣ ಕಾಸಿನ ವಿಚಾರದಲ್ಲಿ ಹೆಣ್ಣು ಮಕ್ಕಳು ಎಷ್ಟು ಕಷ್ಟ ಪಡಬೇಕು, ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಶ್ವೇತಾ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಪ್ರಸಾದ್ ಈಗ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ಆಗಾಗ ಸೀರಿಯಲ್‌ಗಳಲ್ಲಿ ಗೆಸ್ಟ್ ಎಂಟ್ರಿ ಕೊಡುವ ಶ್ವೇತಾ ಯಾಕೆ ಸಿನಿಮಾ ಅಥವಾ ಸೀರಿಯಲ್ ಪ್ರಾಜೆಕ್ಟ್‌ನ ಫುಲ್ ಫ್ಲೆಡ್ಜ್ ಆಗಿ ಒಪ್ಪಿಕೊಳ್ಳುತ್ತಿಲ್ಲ, ಮಹಿಳೆಯರುಗೆ ಹಣ ಎಷ್ಟು ಮುಖ್ಯ? ಎಷ್ಟು ಹಣ ಸೇವ್ ಮಾಡಬೇಕು ಎಂದು ಶ್ವೇತಾ ಹಂಚಿಕೊಂಡಿದ್ದಾರೆ.
'ಎಲ್ಲರಿಗೂ ತುಂಬಾ ಆಫರ್‌ಗಳು ಬರುತ್ತಿವೆ ಅನ್ನೋದು ಸುಳ್ಳು. ನಮ್ಮ ಇಂಡಸ್ಟ್ರಿಯಲ್ಲಿ ಕಡಿಮೆ ಪ್ರಾಜೆಕ್ಟ್‌ಗಳಿವೆ . ಅದರೆ ನಾವು ತುಂಬಾ ಕಲಾವಿದರು ಇದ್ದೀವಿ. ಸಣ್ಣ ಪುಟ್ಟ ಪಾತ್ರಗಳು, ಚಿಕ್ಕ ಬಜೆಟ್ ಸಿನಿಮಾಗಳು ತುಂಬಾ ಬರುತ್ತೆ, ಅದರೆ ಅವುಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಮಹಿಳೆಯರಿಗೆ ಸ್ಟ್ರಾಂಗ್ ಪಾತ್ರಗಳನ್ನು ಬರೆಯುತ್ತಿಲ್ಲ. ಅಲ್ಲದೆ ಪಾತ್ರಕ್ಕೆ ತಕ್ಕಂತೆ ಸಂಭಾವನೆಯೂ ಸಿಗುತ್ತಿಲ್ಲ. ಮಹಿಳೆಯರು ಅರ್ಥಿಕವಾಗಿ ಸ್ವತಂತ್ರವಾಗಿ, ಬಲವಾಗಬೇಕು ಅಂದ್ರೆ ತುಂಬಾ ಶ್ರಮಿಸಬೇಕು. ಸಣ್ಣ ಪುಟ್ಟ ಹಣಕಾಸಿಗೆ ನಾನು ಇರೋ ಬರೋ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಹೀಗೆ ಬೇರೆ ಹೆಣ್ಣು ಮಕ್ಕಳು ಕೂಡ ಇಲ್ಲ ಎನ್ನಬೇಕು. ನನಗೆ ಅವಕಾಶವಿಲ್ಲ ಹೀಗಾಗಿ ಬಂದಿರೋ ಚಾನ್ಸ್‌ನ ಬಳಸಿಕೊಳ್ಳಬೇಕು ಅನ್ನೋ ಮನಸ್ಥಿತಿಯಲ್ಲಿ ಇರಬಾರದು. ಸ್ಟ್ರಾಂಗ್ ಪಾತ್ರಗಳನ್ನು ಬರೆದು ಅವಕಾಶಗಳನ್ನು ನೀಡುತ್ತಾರೆ. ಅನ್ನೋ ನಂಬಿಕೆಯಲ್ಲಿ ನಾನು ಇದ್ದೀನಿ,' ಎಂದು Rapid ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ವೇತಾ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಆಯ್ತು ಈಗ ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಯಶ್; ಹೊಸ ಲುಕ್‌ಗೆ ಫಿದಾ ಆದ ಕನ್ನಡಿಗರು!
ಸಿನಿಮಾಗಿಂತ ಸೀರಿಯಲ್ ದುಡ್ಡು ಚೆನ್ನಾಗಿ ಕೊಡುತ್ತದೆ. ಇಂಡಸ್ಟ್ರಿಯಲ್ಲಿ ಮಹಿಳೆಯರು ಎಷ್ಟು ಸಂಪಾದಿಸುತ್ತಾರೆ, ಅನ್ನೋದನ್ನು ರಿವೀಲ್ ಮಾಡಲು ಇಷ್ಟ ಪಡುವುದಿಲ್ಲ. ಏಕೆಂದರೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಇನ್ನೂ ಚೆನ್ನಾಗಿ ದುಡಿಯುತ್ತಾರೆ. ಖಂಡಿತಾ ದೊಡ್ಡ ಮೊತ್ತ ಸಿಗುವುದಿಲ್ಲ. ಬದುಕುವುದು ಕಷ್ಟ ಇದೆ. 1% ಆಕ್ಟರ್‌ಗಳು ಮಾತ್ರ ಚೆನ್ನಾಗಿ ಹಣ ಮಾಡುತ್ತಿದ್ದಾರೆ. ಇನ್ನುಳಿದವರು ತುಂಬಾ ಕಷ್ಟ ಪಡುತ್ತಿದ್ದಾರೆ. ನಮಗೆ ಇರುವ ಲೈಫ್‌ಸ್ಟೈಲಲ್ಲಿ ಬದುಕುವುದು ತುಂಬಾ ಕಷ್ಟ. ದುಡ್ಡು ಮಾಡಲು ಇಂಡಸ್ಟ್ರಿಗೆ ಬರಬಾರದು, ನಿಮ್ಮ ಹೊಟ್ಟೆ ತುಂಬಿಸಿಕೊಳ್ಳುವ ರೀತಿ ನೋಡಿಕೊಂಡೇ ಇಲ್ಲಿಗೆ ಬರಬೇಕು,' ಎಂದು ಶ್ವೇತಾ ಹೇಳಿದ್ದಾರೆ.
ಈ ಮಹಿಳಾ ಸ್ಪರ್ಧಿಯಲ್ಲಿ ತಾಯಿಯನ್ನು ಕಾಣುತ್ತೀನಿ ಎಂದು ಕೈಗೆ ಗುಲಾಬಿ ಕೊಟ್ಟ ಮಂಜಣ್ಣ
ವರ್ಷಕ್ಕೆ ಎರಡು ಸಿನಿಮಾ ಬರಬಹುದು. ಅದು ಹೆಚ್ಚು. ಕಲಾವಿದರಾಗಿದ್ದರೆ ಮಾತ್ರ ಜೀವನ ನಡೆಸಲು ಹಣ ಸಾಲದು. ಹೀಗಾಗಿ ಬೇರೆ ರೀತಿಯಲ್ಲಿ ಕೆಲಸಗಳನ್ನು ಹುಡುಕಿಕೊಳ್ಳಬೇಕು. ಮಾರ್ಕೆಟ್ ಇದೆ, ಇನ್‌ಸ್ಟಾಗ್ರಾಂ ಇದೆ. ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹಣ ಮಾಡಿಕೊಂಡು ಇಲ್ಲಿಗೆ ಬರಬೇಕು. ನಾವು ಬದುಕುವುದಕ್ಕೆ ಹಣ ಬೇಕು. ಊಟ ತಿಂಡಿ ಅಷ್ಟೇ ಯಾವುದಕ್ಕೂ ನನಗೆ ಕಡಿಮೆ ಇಲ್ಲ. ನನಗೆ ಈ ಜನರೇಷನ್, ಮುಂದಿನ ಜನರೇಷನ್‌ಗೆ ಸಾಕಾಗುವಷ್ಟು ಅಪ್ಪ-ಅಮ್ಮ ದುಡಿದು ಇಟ್ಟಿದ್ದಾರೆ. ನಾನು ದುಡಿಯುತ್ತಿರುವೆ. ಇಷ್ಟು ಸಾಕು. ನಾನು ಜೀವನ ಎಂಜಾಯ್ ಮಾಡುತ್ತಿದ್ದೀನಿ. ಹೀಗಾಗಿ ಹಣ ಮುಖ್ಯ ಅಲ್ಲ,' ಎಂದಿದ್ದಾರೆ ಶ್ವೇತಾ ಪ್ರಸಾದ್.