Asianet Suvarna News Asianet Suvarna News

ಪತಿಗೆ ಈ ಪರಿ ಟಾರ್ಚರ್​ ಕೊಡ್ತಾರಾ ಶುಭಾ ಪೂಂಜಾ? ಬಿಗ್​ಬಾಸ್​ಗೆ ಮತ್ತೆ ಆಫರ್​ ಬಂದ್ರೆ ಹೀಗಾಗತ್ತಂತೆ!

ತಮ್ಮ ಪತಿಗೆ ತಾವು ಎಷ್ಟರಮಟ್ಟಿಗೆ ಟಾರ್ಚರ್​ ಕೊಡುತ್ತೇವೆ ಎಂದು ನಟಿ ಶುಭಾ ಪೂಂಜಾ ಹೇಳಿದ್ದಾರೆ. ಬಿಗ್​ಬಾಸ್​ಗೆ ಲಿಂಕ್​  ಮಾಡಿ ಅವರು ಹೇಳಿದ್ದೇನು?
 

Actress Shubha Poonja said how much she tortures her husband and call for Bigg Boss again suc
Author
First Published May 31, 2024, 9:17 PM IST

ನಟಿ ಶುಭಾ ಪೂಂಜಾ ಮತ್ತು ಸುಮಂತ್  ಮದುವೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಕೋವಿಡ್​ ಸಮಯದಲ್ಲಿಯೇ 2020ರಲ್ಲಿ ಹಸೆಮಣೆ  ಏರಿದ್ದ ಈ ಜೋಡಿ ಮಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದರು. ಪ್ರೇಮಿಗಳ ದಿನದಂದು ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮದುವೆ ದಿಢೀರ್ ಅಂತ ಮದುವೆಯಾಗಿದ್ದರು. ಇವರ ಮದುವೆಯ ಬಗ್ಗೆ ತಿಳಿಯದ ಫ್ಯಾನ್ಸ್​ ಅಂದು ದಿಢೀರ್​ ಅಂತ ಶಾಕ್​ ಆಗಿದ್ದು ಅಷ್ಟೇ ನಿಜ. ಅಷ್ಟಕ್ಕೂ ಕೆಲ ದಿನಗಳ ಬಳಿಕ ಮದುವೆಯ ಬಗ್ಗೆ ನಟಿ ಘೋಷಿಸಿದ್ದರು. ಬಿಗ್ ಬಾಸ್‌ನಿಂದ (Bigg Boss) ಬಂದ ಬಳಿಕ ಲಾಕ್‌ಡೌನ್  ಸಮಯದಲ್ಲಿ ಮನೆಯಲ್ಲೂ ಮದುವೆ ಮಾಡಿಕೊಳ್ಳಿ ಎನ್ನುತ್ತಿದ್ದರು. ಹತ್ತೇ ಹತ್ತು ಜನ ಇದ್ದರೂ ಪರ್ವಾಗಿಲ್ಲ ಸಿಂಪಲ್ ಆಗಿ ಮದುವೆ ಮಾಡಿಕೊಳ್ಳಬೇಕು ಮನೆಯಲ್ಲಿ ಮದುವೆ ಆಗೋಣ ಆಮೇಲೆ ಎಲ್ಲರಿಗೂ ಪಾರ್ಟಿ ಅರೇಂಜ್ ಮಾಡೋಣ ಎಂದು ನಿರ್ಧಾರ ಮಾಡಿದ್ವಿ. ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು ಎಂದು ಅಂದು ನಡೆದ ಮದುವೆಯ ಬಗ್ಗೆ ಈ ಹಿಂದೆ ಮಾತನಾಡಿದ್ದರು ಶುಭಾ.

ಇದೀಗ ಮದುವೆಯಾಗಿ ನಾಲ್ಕು ವರ್ಷಗಳ ಸುಂದರ ಸಂಸಾರ ನಡೆಸುತ್ತಿದ್ದಾರೆ ಅವರು. ಆ್ಯಂಕರ್​ ಸಂದೀಪ್​ಕುಮಾರ್​ ಅವರ ಯುಟ್ಯೂಬ್​ಗೆ ಸಂದರ್ಶನ ನೀಡಿರುವ ಶುಭಾ ಅವರು ತಮ್ಮ ಪತಿಗೆ ಹೇಗೆ ಟಾರ್ಚರ್​ ಕೊಡುತ್ತೇವೆ ಎಂದು ಮಾತನಾಡಿದ್ದಾರೆ! ಒಂದು ವೇಳೆ ಮತ್ತೊಮ್ಮೆ ಬಿಗ್​ಬಾಸ್​ಗೆ ಆಫರ್​ ಬಂದರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಶುಭಾ, ಅಬ್ಬಾ ನಾನಂತೂ ತುಂಬಾ ಅವರಿಗೆ ಟಾರ್ಚರ್​ ಕೊಡ್ತೇನೆ. ಇನ್ನೊಮ್ಮೆ ಏನಾದ್ರೂ ಬಿಗ್​ಬಾಸ್​ಗೆ ಆಫರ್​ ಬಂದ್ರೆ ಅವರು ದುಡ್ಡು ಕೊಡುವುದು ಬೇಡ, ನಾನೇ ದುಡ್ಡು ಕೊಟ್ಟು ನಿನ್ನನ್ನು ಕಳಿಸುತ್ತೇನೆ. ಪ್ರತಿವಾರ ನೀನು ಅಲ್ಲಿಯೇ ಇರಲು ದುಡ್ಡು ಕೊಡ್ತಾನೇ ಇರ್ತೇನೆ. ನೂರು ದಿನವೂ ಅಲ್ಲೇ  ಇರುವಂತೆ ಮಾಡುತ್ತೇನೆ ಎಂದಿದ್ದಾರೆ ಎನ್ನುವ ಮೂಲಕ ಜೋರಾಗಿ ನಗಿಸಿದ್ದಾರೆ ನಟಿ. 

ಕುಡಿದ ಅಮಲಿನಲ್ಲಿ ಮೈಮುಟ್ಟಿ ತಳ್ಳಿದ್ರಾ ನಟ ನಂದಮೂರಿ ಬಾಲಕೃಷ್ಣ? ನಟಿ ಅಂಜಲಿ ಹೇಳಿದ್ದೇನು?

ಇನ್ನು ಇವರ ಮದುವೆಯಾಗಿದ್ದು ಸಿಕ್ಕಾಪಟ್ಟೆ ಕುತೂಹಲವೇ. ಈ ಬಗ್ಗೆ ಈ ಹಿಂದೆ ಅವರು ಮಾತನಾಡಿದ್ದರು.  ಎರಡು ದಿನದ ಮುನ್ನ ಮದುವೆ ಪ್ಲ್ಯಾನ್ ಆಗಿದ್ದು. ನಾವು ವಾಸ ಮಾಡುತ್ತಿದ್ದ ಮನೆ 800 ವರ್ಷ ಹಳೆ ಮನೆ. ಫುಲ್ ಪೇಂಟ್ ಬಿದ್ದಿತ್ತು, ಗೋಡೆ ಸರಿಯಾಗಿಲ್ಲ ಏನೂ ಇಲ್ಲ. ಏನ್ ಚಿನ್ನಿ ಇಲ್ಲಿ ಮದುವೆಯಾಗಿ ಒಂದು ಫೋಟೋ ತೆಗೆದರೂ ಹೇಗಿರುತ್ತೆ ಅಂದ. ಮದುವೆ ಹಿಂದಿನ ದಿನ ಫುಲ್ ಪೇಂಟ್ ಮಾಡಿದ್ದಾರೆ. ಮದುವೆ ಬಂದ ಗೆಸ್ಟ್ ಸೆಲೆಬ್ರಿಟಿ ಮಂಜು ಮತ್ತು ರಾಘು ಬಂದರು ಅವರಿಂದಲೂ ಪೇಂಟ್ ಮಾಡಿಸಲಾಗಿತ್ತು ಎಂದಿದ್ದರು.

ಮದುವೆಯ ದಿನ ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಲಾಗಿತ್ತು.  ತುಂಬಾ ಬಾಡಿರುವ ಹೂವುಗಳು ಇದ್ದವು. ಅದನ್ನೇ ಖರೀದಿ ಮಾಡಿದ್ರು. ಅದಕ್ಕಾಗಿಯೇ ನಮ್ಮ ಮದುವೆ ಹಾರ ಕೂಡ ಬಾಡಿದೆ. ಮದುವೆ ಪಟ್ ಪಟ್ ಅಂತ ಮುಗಿದೇ ಹೋಯ್ತು. ಅಷ್ಟರಲ್ಲಿ ಸುಮಂತ್ ಪಂಚೆ ಬಿಚ್ಚಿ ಶಾರ್ಟ್- ಬನಿಯನ್ ಹಾಕೊಂಡು ಬಂದ. ಹೀಗಾಗಿ ನನ್ನ ಮದುವೆ ಫೋಟೋ ಅಂತ ಇರುವುದು ಕೇವಲ ನಾಲ್ಕು ಅಷ್ಟೆ. ಮೀಡಿಯಾದವರು ಕರೆ ಮಾಡಿ ಫೋಟೋ ಕಳುಹಿಸಿ ಎನ್ನುತ್ತಿದ್ದರು.  4 ಫೋಟೋ ಇದೆ ಅದು ಬಿಟ್ಟು ಬೇರೆ ಕೊಡಿ ಎಂದು ದುಂಬಾಲು ಬಿದ್ದಿದ್ದರು. ನಮ್ಮ ಬಳಿ ಇದ್ರೆ ತಾನೇ  ಕೊಡೋದು?  ನಮ್ಮ ಅಮ್ಮ ಅವರ ಅಪ್ಪ ಅಮ್ಮ ಜೊತೆಗೂ ಸುಮಂತ್ ಫೋಟೋ ತೆಗೆಸಿಕೊಂಡಿಲ್ಲ. ಮುಂದೆ ಮಕ್ಕಳು ಅಮ್ಮ ಮದುವೆ ಫೋಟೋ ವಿಡಿಯೋ ತೋರಿಸಿ ಎಂದು ಕೇಳಿದರೆ ಆ ನಾಲ್ಕು ಫೋಟೋ ಅಷ್ಟೇ ತೋರಿಸಬೇಕು ಎಂದು ತಮಾಷೆ ಮಾಡಿದ್ದರು ಶುಭಾ. 

ನಿರ್ಮಾಪಕರಿಗೆ 2.55 ಕೋಟಿ ರೂಪಾಯಿ ಪಂಗನಾಮ ಹಾಕಿದ್ರಾ ಸನ್ನಿ ಡಿಯೋಲ್‌? ಏನಿದು ಆರೋಪ?
 

Latest Videos
Follow Us:
Download App:
  • android
  • ios