28 ವಾರಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ  ಬಹುಭಾಷಾ ನಟಿ ಅಪ್ಲೋಡ್‌ ಮಾಡಿದ ವಿಡಿಯೋ ಈಗ ಫುಲ್‌ ವೈರಲ್‌, ಇದಕ್ಕೆ ನೆಟ್ಟಿಗರು ಕೊಟ್ಟ ರಿಯಾಕ್ಷನ್‌ ಹೇಗಿದೆ ಗೊತ್ತಾ?

'ಅರಸು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶ್ರೀಯಾ ಶರಣ್‌ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ 'ಚಂದ್ರ' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ನಂತರ ಕನ್ನಡ ಸಿನಿ ಪ್ರೇಮಿಗಳ ಮುದ್ದಿನ ಹುಡುಗಿಯಾದವರು. 

ಮಾರ್ಚ್ 12, 2018ರಂದು ಮುಂಬೈನಲ್ಲಿ ಹಿಂದು ಸಂಪ್ರದಾಯದಂತೆ ವಿದೇಶಿ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀಯಾ, ಈಗ ಸೋಷಿಯಲ್‌ ಮೀಡಿಯಾದಲ್ಲಿ 'ಕಪಲ್ಸ್‌ ಗೋಲ್‌' ಕೊಡುತ್ತಿದ್ದಾರೆ. ಆದರೆ ಆ ವಿಡಿಯೋ ಈಗ ಯಾಕೆ ವೈರಲ್‌ ಆಗುತ್ತಿದೆ ಎಂಬುವುದ ಮಾತ್ರ ಯಾರಿಗೂ ಗೊತ್ತಿಲ್ಲ. ಸೋಷಿಯಲ್ ಮೀಡಿಯಾ ಹಾಗೇ ಅಲ್ವಾ? ಯಾವುದನ್ನು ಜನರು ಇಷ್ಟ ಪಡುತ್ತಾರೋ ಗೊತ್ತಾಗುವುದಿಲ್ಲ. 

ಪಬ್ಲಿಕ್‌ನಲ್ಲೇ ಪತಿಗೆ ಲಿಪ್ ಲಾಕ್ ಮಾಡಿದ ನಟಿ; ವಿಡಿಯೋ ವೈರಲ್!

ಸುಮಾರು 28 ವಾರಗಳ ಹಿಂದೆ ಶ್ರೀಯಾ Ibiza ಪ್ರದೇಶದಲ್ಲಿ ಪತಿಯೊಂದಿಗೆ ಕಳೆದ ಸಮಯದ ಅಮೂಲ್ಯ ಕ್ಷಣದ ತುಣುಕುಗಳನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಒಂದು ವಿಡಿಯೋದಲ್ಲಿ ಶ್ರೀಯಾ ಜೋರಾಗಿ ಬೀಸುತ್ತಿದ್ದ ಗಾಳಿಯೊಂದಿಗೆ ತಪ್ಪಾಂಗುಚಿ ಸ್ಟೆಪ್‌ ಹಾಕಿರುವುದು ಇದೀಗ ವೈರಲ್ ಆಗುತ್ತಿದೆ.

View post on Instagram

'ಒಂದಾನೊಂದು ಕಾಲದಲ್ಲಿ Ibizaನಲ್ಲಿ ಇದ್ದಾಗ... ನಾವು ಈ ಐಲ್ಯಾಂಡ್‌ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ, ' ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಸುಮ್ಮನೆ ಬಿಡ್ತಾರಾ? 'ನಿಮ್ಮನ್ನು ಇದಕ್ಕೇ ಕಾಮದ ಮಹಾರಾಣಿ ಎಂದು ಕರೆಯುವುದು' ಎಂದೂ 'ಬಿಕಿನಿಯಲ್ಲಿ ನೀವು ಸೂಪರ್‌' ಎಂದೂ ಕಾಮೆಂಟ್‌ ಮಾಡಿದ್ದಾರೆ.

ಮಾರ್ಚ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ