ನಾನು ನಿಮ್ಮ ಜೊತೆ ನಟಿಸಬೇಕು; ರಕ್ಷಿತ್‌ಗೆ ಸ್ಟಾರ್ ನಟಿಯ ಬೇಡಿಕೆ

777 ಚಾರ್ಲಿ ಸಿನಿಮಾಗೆ ಎಲ್ಲಾ ಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಈ ಸಮಯದಲ್ಲಿ ಸ್ಟಾರ್ ನಟಿಯೊಬ್ಬರು ರಕ್ಷಿತ್ ಸಿನಿಮಾ ನೋಡಿ ಸಿಂಪಲ್ ಸ್ಟಾರ್ ಜೊತೆ ನಟಿಸುವ ಆಸೆ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣಲ್ಲಿ ಚಾರ್ಲಿ ನೋಡಿದ ಸಂತಸ ವ್ಯಕ್ತಪಡಿಸಿರುವ ನಟಿ, ರಕ್ಷಿತ್ ಜೊತೆ ನಟಿಸುವ ಬಯಕೆಯನ್ನು ಬಹಿರಂಗಪಡಿಸಿದ್ದಾರೆ. 

Actress shradha Shrinath watched 777 charlie and says she want to work with rakshith shetty sgk

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ( Rakshith shetty) ಸದ್ಯ 777 ಚಾರ್ಲಿ (777 Charlie) ಸಿನಿಮಾದ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಚಾರ್ಲಿ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.  ಸಿನಿ ಗಣ್ಯರು ಸಹ ರಕ್ಷಿತ್ ಸಿನಿಮಾಗೆ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಪರಭಾಷೆಯ ಗಣ್ಯರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಮನಸೋತು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ರಾಜಕೀಯ ಗಣ್ಯರು ಸಿನಿಮಾ ಚಾರ್ಲಿಗೆ ನಮನಸೋತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಸಿ ಎಂ ಬೊಮ್ಮಾಯಿ ರಕ್ಷಿತ್ ಸಿನಿಮಾ ನೋಡಿ ಕಣ್ಣೀರಿಟ್ಟಿದ್ದಾರೆ. 

ಬಾಕ್ಸ್ ಆಫೀಸ್‌ನಲ್ಲಿ ಚಾರ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾಗೆ ಎಲ್ಲಾ ಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಈ ಸಮಯದಲ್ಲಿ ಸ್ಟಾರ್ ನಟಿಯೊಬ್ಬರು ರಕ್ಷಿತ್ ಸಿನಿಮಾ ನೋಡಿ ಸಿಂಪಲ್ ಸ್ಟಾರ್ ಜೊತೆ ನಟಿಸುವ ಆಸೆ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣಲ್ಲಿ ಚಾರ್ಲಿ ನೋಡಿದ ಸಂತಸ ವ್ಯಕ್ತಪಡಿಸಿರುವ ನಟಿ, ರಕ್ಷಿತ್ ಜೊತೆ ನಟಿಸುವ ಬಯಕೆಯನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ಅಂತ ಯೋಚಿಸುತ್ತಿದ್ದೀರಾ? ಅವರು ಮತ್ಯಾರು ಅಲ್ಲ ಕನ್ನಡ ಮೂಲದ ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್. ಹೌದು, ಶ್ರದ್ಧಾ ಶ್ರೀನಾಥ್ ಚಾರ್ಲಿ ನೋಡಿ ಫಿದಾ ಆಗಿದ್ದಾರೆ. ಅಲ್ಲದೆ ರಕ್ಷಿತ್ ಜೊತೆ ನಟಿಯಬೇಕೆಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಶ್ರದ್ಧಾ, 'ನಾನು ಚಾರ್ಲಿ ಸಿನಿಮಾವನ್ನು ವೀಕ್ಷಿಸಿದೆ. ರಕ್ಷಿತ್ ಶೆಟ್ಟಿ ನಿಮ್ಮ ಅಭಿನಯ ಪರರಿಶುದ್ಧವಾಗಿದೆ, ಪ್ರಾಮಾಣಿಕವಾಗಿದೆ. ನಾನು ನಿಮ್ಮ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ ಅಂತ ಜೋರಾಗಿ ಹೇಳುತ್ತೇನೆ. ಕಿರಣ್ ರಾಜ್ ನೀವು ಏನು ಮಾಡಿದ್ದೀರಾ ತುಂಬಾ ಹೆಮ್ಮೆಯಾಗುತ್ತದೆ. ನಿರ್ದೇಶನ, ಬರವಣಿಗೆ ಎಲ್ಲವೂ ಅತ್ಯುತ್ತಮವಾಗಿದೆ' ಎಂದು ಶ್ರದ್ಧಾ ಟ್ವೀಟ್ ಮಾಡಿದ್ದಾರೆ. 

ಇದಕ್ಕೆ ಸಿಂಪಲ್ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ. ಶ್ರದ್ದಾ ಶ್ರೀನಾಥ‌್‌ಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಶ್ರದ್ಧಾ ಸಿನಿಮಾವನ್ನು ಯಾವಾಗಲು ಇಷ್ಟಪಡುವುದಾಗಿ ಹೇಳಿದ್ದಾರೆ. ಧನ್ಯವಾದಗಳು. ನಿಮ್ಮ ಅಭಿನಯವನ್ನು ನಾನು ಯಾವಗಲೂ ಇಷ್ಟಪಡುತ್ತೇನೆ. ಅದ್ಭುತ ಸಿನಿಮಾ ಮೂಲಕ ಶೀಘ್ರದಲ್ಲೇ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಭಾವಿಸುತ್ತೇನೆ' ಎಂದು ರಕ್ಷಿತ್ ಹೇಳಿದ್ದಾರೆ. 

ರಕ್ಷಿತ್ ಶೆಟ್ಟಿ ಚಾರ್ಲಿ ನೋಡಿ ಈ ವಿಡಿಯೋ ಹಾಕಿದ್ರಾ? ರಶ್ಮಿಕಾ ಕಾಲೆಳೆದ ನೆಟ್ಟಿಗರು

ರಿಚರ್ಡ್ ಆಂಟನಿಯಲ್ಲಿ ಶ್ರದ್ಧಾ ನಾಯಕಿ?

ರಕ್ಷಿತ್ ಶೆಟ್ಟಿಯ ಈ ಉತ್ತರ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ರಕ್ಷಿತ್ ನಟನೆಯ ಮುಂದಿನ ಬಹುನಿರೀಕ್ಷೆಯ ರಿಚರ್ಡ್ ಆಂಟನಿ ಸಿನಿಮಾದಲ್ಲಿ ಶ್ರದ್ಧ ನಟಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರಿಚರ್ಡ್ ಆಂಟನಿಯಲ್ಲಿ  ರಕ್ಷಿತ್ ಬಿಟ್ಟರೆ ಬೇರೆ ಕಲಾವಿದದರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ.

777 ಚಾರ್ಲಿಗೆ ತೆರಿಗೆ ವಿನಾಯಿತಿ

ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಾರ್ಲಿ 777 ಸಿನಿಮಾಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಚಾರ್ಲಿ 777 ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಈ ಮೂಲಕ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಳಿಕ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಪಡೆದ ಎರಡನೇ ಚಿತ್ರ ಇದಾಗಿದೆ. ಸಿಎಂ ಬೊಮ್ಮಾಯಿ ರಾಜ್ಯದ ಜಿಎಸ್‌ಟಿ ಪಾಲಿನಿಂದ ವಿನಾಯಿತಿ ನೀಡಿದ್ದಾರೆ.  ಶ್ವಾನ ಪ್ರೀಯ ಬೊಮ್ಮಾಯಿ ಖುದ್ದು ಈ ಚಿತ್ರವನ್ನು ವೀಕ್ಷಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ ಬೊಮ್ಮಾಯಿ ತಮ್ಮ ಮುದ್ದಿನ ಶ್ವಾನವನ್ನು ನೆನೆದು ಭಾವುಕರಾಗಿದ್ದರು. ಚಿತ್ರ ವೀಕ್ಷಿಸಿದ ಬಳಿಕ ಎಲ್ಲರೂ ಈ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದರು. 

777 ಚಾರ್ಲಿಗೆ ಸಿಕ್ತು ಮುಖ್ಯಮಂತ್ರಿಗಳ ಬಲ: ರಕ್ಷಿತ್-ಚಾರ್ಲಿಗೆ ಜೈ ಎಂದ ಸಿಎಂ, ಸಚಿವರು!

ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿಸಿರುವ ಚಾರ್ಲಿ 777 ಕನ್ನಡ ಸಿನಿಮಾವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ಸನ್ನಿ’ಯನ್ನು ನೆನೆದು ಭಾವುಕರಾಗಿ ದುಃಖ ತಡೆಯಲಾಗದೆ ಕಣ್ಣೀರು ಹಾಕಿದ್ದರು. ಸಿಎಂ ಸಿನಿಮಾ ನೋಡಿ ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.  

Latest Videos
Follow Us:
Download App:
  • android
  • ios