ಉತ್ತರ ಭಾರತದ ಶಾನ್ವಿ ಶ್ರೀವಾಸ್ತವ 'ಲವ್ಲಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, 'ಚಂದ್ರಲೇಖ'ದಿಂದ ಕನ್ನಡಕ್ಕೆ ಬಂದರು. 'ಮಾಸ್ಟರ್ ಪೀಸ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ, ಸೈಮಾ ಪ್ರಶಸ್ತಿ ಗಳಿಸಿದರು. ಶಾನ್ವಿ ಶ್ರೀವಾಸ್ತವ್ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ್ದು, ತಾವು ಅಷ್ಟೊಂದು ಸುಂದರವಾಗಿ ಕಾಣಿಸೋದಕ್ಕೆ ಇದೇ ಕಾರಣ ಎಂದಿದ್ದಾರೆ.
ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ, ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಶ್ರೀನಿವಾಸ್ತವ (Shanvi Srivastava) ಉತ್ತರ ಭಾರತದವರಾಗಿದ್ದರು ಸದ್ಯ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ತೆಲುಗು ಸಿನಿಮಾ ಲವ್ಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ ಚಂದ್ರಲೇಖ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಮುಂದೆ, ಅಲ್ಲಿಂದ ಮುಂದೆ ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ಸಾಹೇಬ, ತಾರಕ್, ಮಫ್ತಿ, ಗೀತಾ, ಅವನೇ ಶ್ರೀಮನ್ನಾರಾಯಣ, ಕಸ್ತೂರಿ ಮಹಲ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡತಿಯೇ ಎನಿಸಿಕೊಂಡರು.
ತಮ್ಮ ಗ್ಲಾಮರಸ್ ಲುಕ್ ಮೂಲಕ ಇಂಟರ್ನೆಟಲ್ಲಿ ಕಿಚ್ಚು ಹಚ್ಚಿದ್ದಾರೆ ಶಾನ್ವಿ ಶ್ರೀವಾತ್ಸವ್
ಶಾನ್ವಿ ನಟಿಸಿದ್ದ ಮಾಸ್ಟರ್ ಪೀಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸೈಮಾ (SIMA Award) ಬೆಸ್ಟ್ ನಟಿ ಪ್ರಶಸ್ತಿ ಕೂಡ ಗಳಿಸಿದ್ದರು. ಉತ್ತರ ಭಾರತದವರಾದರೂ, ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಳಿಕ, ಕನ್ನಡದಲ್ಲೇ ಮಾತನಾಡುವುದನ್ನು ಕಲಿತಿರುವ ಶಾನ್ವಿ, ಈಗಂತೂ ಕನ್ನಡದ ಕಾರ್ಯಕ್ರಮಗಳಲ್ಲೂ, ಕನ್ನಡ ಇಂಟರ್ವ್ಯೂಗಳಲ್ಲೂ ಸ್ಪಷ್ಟವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಶಾನ್ವಿ ಸದ್ಯ ಕನ್ನಡ ಅಲ್ಲದೇ ತೆಲುಗು, ಮಲಯಾಲಂ ಹಾಗೂ ಒಂದು ಮರಾಠಿ ಸಿನಿಮಾದಲ್ಲೂ ನಟಿಸಿದ್ದಾರೆ. ಇದೀಗ ಕನ್ನಡದಲ್ಲಿ ತ್ರಿಶೂಲಂ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೊರ ರಾಜ್ಯದಿಂದ ಬಂದು ಕನ್ನಡಕ್ಕೆ ಹೆಗಲು ಕೊಟ್ಟು 'ಪ್ರೇಮ ಭಾಷೆ ಕನ್ನಡ' ಎಂದ ತಾರೆಯರಿವರು!
ವಾರಣಾಸಿಯವರಾಗಿರುವ ಶಾನ್ವಿ, ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಮಾಡೆಲಿಂಗ್ (modeling) ಜಗತ್ತಿಗೆ ಕಾಲಿಟ್ಟಿದ್ದರು. ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಬೆಡಗಿ, ಹೆಚ್ಚಾಗಿ ತಮ್ಮ ಫೋಟೋ ಶೂಟ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ತಮ್ಮ ಟ್ರಾವೆಲ್, ಅಡ್ವೆಂಚರಸ್ ಜರ್ನಿಗಳ ಫೋಟೊಗಳನ್ನು ಕೂಡ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನೋಡಲು ತುಂಬಾನೆ ಮುದ್ದಾಗಿರುವ ಹಾಗೂ, ಸುಂದರವಾದ ತ್ವಚೆಯ ಬೆಡಗಿ ಶಾನ್ವಿ ಅಷ್ಟೊಂದು ಸುಂದರವಾಗಿರೋದಕ್ಕೆ ಕಾರಣ ಏನು? ಸ್ಕಿನ್ ಕೇರ್ ರುಟೀನ್ ಏನು ಎಂದು ಹೆಚ್ಚಿನ ಜನರು ಕೇಳುತ್ತಲೇ ಇರುತ್ತಾರಂತೆ. ಅದಕ್ಕಾಗಿ ಸಾನ್ವಿ ತಮ್ಮ ಸೌಂದರ್ಯದ ರಹಸ್ಯವನ್ನು (glowing skin secret) ತಿಳಿಸುವ ವಿಡೀಯೋ ಶೇರ್ ಮಾಡಿದ್ದಾರೆ. ವಿಡೀಯೋದಲ್ಲಿ ಶಾನ್ವಿ ತಾವು ಪ್ರತಿದಿನ ಬೆಳಗ್ಗೆ ಒಂದು ಸಣ್ಣ ತುಂಡು ಸೇಬು, ಸಣ್ಣ ಬೀಟ್ ರೂಟ್ ಹಾಗೂ ಸಣ್ಣ ಕ್ಯಾರೆಟ್, ಪಾಲಕ್ ಸೊಪ್ಪು ಸಹ ಸೇರಿಸಿ ಜೊತೆಗೆ ಸಣ್ಣ ತುಂಡು ಶುಂಠಿ ಸೇರಿಸಿ, ಅದನ್ನ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ ಕುಡಿಯುತ್ತಾರಂತೆ. ಅದರ ವೇಸ್ಟ್ ಬಿಸಾಕೋದಿಲ್ಲವಂತೆ ನಟಿ, ಅದನ್ನು ಕೂಡ ಜೊತೆಯಾಗಿ ಕುಡಿಯುತ್ತಾರಂತೆ, ಅದುವೇ ನನ್ನ ಸ್ಕಿನ್ ಕೇರ್ ಸೀಕ್ರೆಟ್ ಎಂದಿದ್ದಾರೆ ನಟಿ.
