ಮಾಸ್ಟರ್ ಪೀಸ್‌ ಸುಂದರಿ ಶಾನ್ವಿ ಶ್ರೀ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಮಾಲ್ಡೀವ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವುದನ್ನು ನೋಡಿ ನೆಟ್ಟಿಗರು ಆಕೆ ಈಗಲೂ ಜಾಲಿ ಮೂಡ್‌ನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಟ್ರೋಲ್ ಮಾಡ್ತೀರಾ? ನನ್ನಿಷ್ಟದ ಬಟ್ಟೆ ತೊಡುವ ಹಕ್ಕು ನನಗಿದೆ: ಶಾನ್ವಿ 

ಸುಮಾರು ಬೀಚ್‌ ವೇರ್‌ ಪೋಟೋಗಳನ್ನು ಅಪ್ಲೋಡ್ ಮಾಡಿರುವ ಶಾನ್ವಿ ಸಿಕ್ಕಾಪಟ್ಟೆ ಹಾಟ್‌ ಆಗಿಯೇ ಕಾಣಿಸುತ್ತಿದ್ದಾರೆ. ತಮ್ಮ ಮಾಲ್ಡೀವ್ಸ್‌ ಪ್ರವಾಸ ಹೇಗಿತ್ತು, ಅಲ್ಲಿನ ಸುರಕ್ಷಿತ ಕ್ರಮಗಳ ಬಗ್ಗೆ ಮಾತನಾಡಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆ ಶೇರ್ ಮಾಡಿಕೊಂಡಿರುವ ಒಂದು ಫೋಟೋ ತುಂಬಾನೇ ಸಸ್ಪೆನ್ಸ್‌ ಕ್ರಿಯೇಟ್ ಮಾಡುತ್ತಿದೆ. 

ಹೌದು! ಶಾನಿ ಮಾಲ್ಡೀವ್‌ ಪ್ರವಾಸದಲ್ಲಿದ್ದಾಗ ಒಬ್ಬರೇ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಅವರ ಜೊತೆ ಯಾರಿದ್ದಾರೆ, ಆಕೆಯ ಫೋಟೋ ಯಾರು ಸೆರೆ ಹಿಡಿಯುತ್ತಿದ್ದಾರೆ ಅಂತ ಮಾತ್ರ ಯಾರಿಗೂ ಗೊತ್ತಿರಲಿಲ್ಲ ಆದರೀಗೆ ಒಂದು ಫೋಟೋಗೆ 'ನನ್ನ ಕಣ್ಣುಗಳು ಸದಾ ನಿಮ್ಮ ಮೇಲೆ ಇರುತ್ತದೆ. ವಿಂಕ್...'  ಎಂದು ಬರೆದಿದ್ದಾರೆ. ಈ ಸಾಲುಗಳನ್ನು ಶಾನ್ವಿ ಫೋಟೋ ಸೆರೆ ಹಿಡಿದ ವ್ಯಕ್ತಿಗೆ ಹೇಳುತ್ತಿದ್ದಾರಾ ಆಥವಾ ಮತ್ಯಾರಿಗೋ ಹೇಳುತ್ತಿದ್ದಾರಾ ಎಂದು ನೆಟ್ಟಿಗರು ಸಂಶಯ ವ್ಯಕ್ತಪಡಿಸಿದ್ದಾರೆ. 

ಶಾನ್ವಿಯ ಮತ್ತೊಂದು 'ಬೋಲ್ಡ್' ಅವತಾರ ಕಂಡು ಬೆಚ್ಚಿಬೀಳಬೇಡಿ! ಪೋಟೋ ಒಳಗಿದೆ 

ಅದರಲ್ಲೂ ಒಬ್ಬ ನೆಟ್ಟಿಗ 'ಕನ್ನಡತಿ ಆಗಿರು..' ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌‌ಗೆ ಮತ್ತೊಬ್ಬ ವ್ಯಕ್ತಿ 'ಆಕೆ  ಉತ್ತರ ಭಾರತದವಳು ಅರ್ಥ ಆಯ್ತಾ?' ಎಂದು ಕಾಲು ಎಳೆದಿದ್ದಾರೆ. ಶಾನ್ವಿ ಉತ್ತರ ಭಾರತದ ಚೆಲುವೆಯಾದರೂ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿ ಅಪಾರ ಸಂಖ್ಯೆಯಲ್ಲಿ ಕನ್ನಡಿಗರ ಪ್ರೀತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಸಿನಿಮಾ ತೆರೆ ಕಾಣಲು ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ.

ಇದೇ ತಿಂಗಳಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡು ಶಾನ್ವಿಗೆ ರಕ್ಷಿತ್ ಶೆಟ್ಟಿ ಶುಭ ಕೋರಿದ್ದರು. ಅದಕ್ಕೆ ಶಾನ್ವಿಯನ್ನೇ ಮದುವೆಯಾಗು ಗುರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ರಕ್ಷಿತ್ ಮತ್ತು ಶಾನ್ವಿ ಜೋಡಿ ಶ್ರೀಮನ್ ನಾರಾಯಣ ಚಿತ್ರದಲ್ಲಿ ಒಟ್ಟಿಗೆ ಅಭನಯಿಸಿತ್ತು. ಈ ಜೋಡಿ ತೆರೆ ಮೇಲೆ ಸಖತ್ತೂ ಕಮಾಲ್ ಮಾಡಿತ್ತು.

 

 
 
 
 
 
 
 
 
 
 
 
 
 
 
 

A post shared by Shanvi sri (@shanvisri)