Asianet Suvarna News

ಅದ್ದೂರಿ ಲವರ್ ಚಿತ್ರದಿಂದಾಚೆ ಬಂದ ಸಂಜನಾ ಆನಂದ್!

ಅರ್ಜುನ್ ನಿರ್ದೇಶನದ ಸಿನಿಮಾದಿಂದ ಹೊರ ಬಂದ ನಟಿ ಸಂಜಯಾ ಆನಂದ್. ತಮ್ಮ ಸಿನಿಮಾಗಳ ರಿಲೀಸ್‌ಗೆ ಸಂಜನಾ ಕಾಯುತ್ತಿದ್ದಾರೆ.  

Actress Sanjana Ananda walks out of Ap Arjun Adhuri love film
Author
Bangalore, First Published Jul 16, 2021, 3:11 PM IST
  • Facebook
  • Twitter
  • Whatsapp

ಎ.ಪಿ. ಅರ್ಜುನ್ ನಿರ್ದೇಶನದ ‘ಅದ್ಧೂರಿ ಲವರ್’ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ ಆಯ್ಕೆ ಆಗಿದ್ದರು. ಆದರೆ, ಈಗ ಡೇಟ್ಸ್ ಸಮಸ್ಯೆಯಿಂದ ಆ ಚಿತ್ರದಿಂದ ಸಂಜನಾ ಹೊರ ಬಂದಿದ್ದಾರೆ.

ಎ.ಪಿ. ಅರ್ಜುನ್ ಅವರು ಧ್ರುವ ಸರ್ಜಾ ಸಿನಿಮಾ ಹಾಗೂ ‘ಅದ್ದೂರಿ ಲವರ್’ ಚಿತ್ರ ಒಟ್ಟಿಗೆ ಶುರು ಮಾಡಲಿದ್ದಾರೆ. ಧ್ರುವ ಸರ್ಜಾ ಸಿನಿಮಾ ಶೂಟಿಂಗ್‌ಗೆ ಹೆಚ್ಚು ದಿನಗಳು ಬೇಕಾಗುತ್ತದೆ. ಹೀಗಾಗಿ ಏಕಕಾಲದಲ್ಲಿ ಎರಡು ಚಿತ್ರಗಳಲ್ಲಿ ನಿರ್ದೇಶಕರು ಬ್ಯುಸಿ ಆಗುತ್ತಾರೆ. ತಾನು ಕೂಡ ಒಂದು ಚಿತ್ರಕ್ಕಾಗಿ ಎರಡು ಚಿತ್ರಗಳಿಗೆ ಬೇಕಾದಷ್ಟು ದಿನಗಳನ್ನು ಕೊಡಬೇಕಾಗುತ್ತದೆ ಎಂಬುದು ಸಂಜನಾ ಆನಂದ್ ಅವರ ಆಲೋಚನೆ. ಈ ಕಾರಣಕ್ಕೆ ಒಂದಿಷ್ಟು ಚಿತ್ರಗಳಲ್ಲಿ ಬ್ಯುಸಿ ಆಗಿರುವ ಸಂಜನಾ ಆನಂದ್, ಒಂದೇ ಚಿತ್ರಕ್ಕಾಗಿ ಹೆಚ್ಚಿನ ದಿನಗಳ ಕಾಲ್‌ಶೀಟ್ ಕೊಡುವುದು ಕಷ್ಟ ಆಗುತ್ತದೆ ಎಂದು ಯೋಚಿಸಿ ‘ಅದ್ಧೂರಿ ಲವರ್’ ಚಿತ್ರದಿಂದಲೇ ಹೊರ ಬಂದಿದ್ದಾರೆ ಎಂಬುವುದು ಸದ್ಯದ ಸುದ್ದಿ.

ಶ್ರೀಲೀಲಾಗೆ ಲಿಪ್‌ಲಾಕ್‌ ಮಾಡಿದ ವಿರಾಟ್ ಇದೀಗ ಅದ್ಧೂರಿ ಲವರ್! 

ಅಲ್ಲದೆ ಈ ಕೊರೋನಾ ಎರಡನೇ ಅಲೆ ಸಮಯದಲ್ಲಿ ಸಂಜನಾ ತಮ್ಮ ಆಪ್ತರನ್ನು ಕಳೆದಿಕೊಂಡ ನೋವಿನಲ್ಲಿದ್ದರು. ಇದೇ ಸಮಯದಲ್ಲಿ ಚಿತ್ರರಂಗದ ಕೆಲಸವೂ ನಿಂತು ಕೊಂಡಿತ್ತು. ಮಾನಸಿಕವಾಗಿ ನೊಂದಿದ್ದ ಸಂಜನಾಗೆ ಬೆನ್ನೆಲುಬಾಗಿ ತಮ್ಮ ತಂಡವಿತ್ತು. ತಿಂಗಳ ಕಾಲ ಕೆಲಸವಿಲ್ಲದೇ ಕುಳಿತಿದ್ದ ಸಮಯದಲ್ಲಿ ಆ್ಯಕ್ಟಿಂಗ್ ಹಾಗೂ ಹೊಸ ಭಾಷೆ ಕಲಿತಿದ್ದಾರಂತೆ. ದುನಿಯಾ ವಿಜಯ್‌ಗೆ ಜೋಡಿಯಾಗಿ 'ಸಲಗ' ಚಿತ್ರದಲ್ಲಿ ಅಭಿನಯಿಸಿರುವ ಸಂಜನಾ ಭರವಸೆ ನಟಿ ಹಾಗೂ ಲಕ್ಕಿ ಲೆಗ್ ಎಂದು ಗಾಂಧಿನಗರದಲ್ಲಿ ಮಾತುಗಳು ಕೇಳಿ ಬರುತ್ತಿದೆ.

"

Follow Us:
Download App:
  • android
  • ios