ಕೋರ್ಟ್‌ನಲ್ಲಿ ಗೆದ್ದು ಬಂದ, ನಟಿ ರಮ್ಯಾ ನಿರ್ಮಿತ ಸ್ವಾತಿ ಮುತ್ತಿನ ಮಳೆಹನಿಯೇ ಬಿಡುಗಡೆಗೆ ಡೇಟ್ ಫಿಕ್ಸ್!
ಬಿಡುಗಡೆಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ್ದ ನಟಿ ರಮ್ಯಾ ನಿರ್ಮಾಣದ ಮೊದಲ ಚಲನಚಿತ್ರ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ.

ನಟಿ ರಮ್ಯಾ ಅವರ ಚೊಚ್ಚಲ ನಿರ್ಮಾಣದ ರಾಜ್ ಬಿ ಶೆಟ್ಟಿ ಅವರ ಮೂರನೇ ನಿರ್ದೇಶನದ ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡುಗಡೆಗೆ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್ ದೊರೆತಿದೆ. ವಿಜಯದಶಮಿಯಾದ ಇಂದು ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಚಿತ್ರವು ಬರುವ ನವೆಂಬರ್ 24ರಂದು ಬಿಡುಗಡೆಯಾಗಲಿರುವುದಾಗಿ ತಂಡ ಹೇಳಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಆಪಲ್‌ಬಾಕ್ಸ್ ಸ್ಟುಡಿಯೋಸ್ ಅಡಿಯಲ್ಲಿ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಚಿತ್ರದಲ್ಲಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹಾ ಶರ್ಮಾ, ಜೆಪಿ ತುಮ್ಮಿನಾಡ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ.
ಇದು ನಟಿ ರಮ್ಯಾ ಅವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ಇದರಲ್ಲಿ ಖುದ್ದು ರಮ್ಯಾ ನಟಿಸಿದ್ದಾರೆ. ಈ ಕುರಿತು ಮಾತನಾಡಿದ್ದ ನಟಿ ರಮ್ಯಾ, ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದ ಅನುಭವ ರೋಚಕವಾದದ್ದು. ನಾನು ಈ ಮೊದಲು ತಿಳಿದಿಲ್ಲದ ನಿರ್ಮಾಣದ ಬಗ್ಗೆ ತುಂಬಾ ಕಲಿಯಲು ಇದರಿಂದ ಸಾಧ್ಯವಾಯಿತು. ಪ್ರತಿಯೊಬ್ಬರೂ ಚಿತ್ರವನ್ನು ವೀಕ್ಷಿಸುತ್ತಾರೆ ಮತ್ತು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಜೊತೆಗೆ ಚಿತ್ರದ ಕುರಿತು ಹೇಳಿದ್ದ ಅವರು, ಇದೊಂದು ಆಳವಾದ ಸುಂದರ ಕಾವ್ಯಾತ್ಮಕ ಚಿತ್ರವಾಗಿದೆ. ಇದು ಜನರು ನಿಜವಾದ ಪ್ರೀತಿಯನ್ನು ನೋಡುವ ವಿಧಾನವನ್ನು ಬದಲಾಯಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ನಾಯಕನ ತೊಡೆ ಮೇಲೆ ಕೂತ್ಕೊ ಅಂದ್ರು, ಆತ ಕಚ್ಚಿದ ಐಸ್ಕ್ರೀಂ ತಿನ್ನು ಅಂದ್ರು: ಆ ದಿನಗಳ ನೆನೆದ ಸುಹಾಸಿನಿ
ಚಿತ್ರಕ್ಕೆ ಮಿಧುನ್ ಮುಕುಂದನ್ ಅವರ ಸಂಗೀತವಿದ್ದು, ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿದೆ ಮತ್ತು ಸಂಕಲನದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ಅಷ್ಟಕ್ಕೂ ಈ ಚಿತ್ರದ ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. 'ಸ್ವಾತಿ ಮುತ್ತಿನ ಮಳೆಹನಿಯೇ' ಟೈಟಲ್ ವಿವಾದಕ್ಕೆ ಸಿಲುಕಿತ್ತು. ಈ ಸಿನಿಮಾದ ಟೈಟಲ್ ಬಳಸದಂತೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೋರ್ಟ್ ಮೆಟ್ಟಿಲೇರಿದ್ದರು. ಕೆಲ ಕಾಲ ಇದರ ವಿಚಾರಣೆ ನಡೆದು ರಮ್ಯಾ ಪರ ಕೋರ್ಟ್ ತೀರ್ಪು ನೀಡಿತ್ತು. ಚಿತ್ರ ನಿರ್ಮಾಣ ಮಾಡಲು ರಮ್ಯಾ ಅವರಿಗಿದ್ದ ಅಡ್ಡಿ ನಿವಾರಣೆಯಾಗಿತ್ತು.
ಅಷ್ಟಕ್ಕೂ ರಾಜೇಂದ್ರ ಸಿಂಗ್ ಅವರ ಆರೋಪ ಏನಾಗಿತ್ತು ಎಂದರೆ, ಈ ಹೆಸರು ಅವರ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲಿನದ್ದಾಗಿದೆ. ಈ ಹೆಸರನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎನ್ನುವುದಾಗಿತ್ತು. ಇದೇ ಹೆಸರು ಇಟ್ಟುಕೊಂಡು ಅಂಬರೀಷ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ, ಅವರ ಪುತ್ರ ಅಭಿಷೇಕ್ ಅಂಬರೀಷ್ ಜತೆ ಸಿನಿಮಾಗೆ ತಯಾರಿ ಮಾಡಿಕೊಳ್ಳಲಾಗಿದೆ. ಅಷ್ಟರಲ್ಲಿ ರಮ್ಯಾ ಹೆಸರು ಬಳಸಿಕೊಂಡಿದ್ದಾರೆ. ಆದ್ದರಿಂದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಸಲು, ಚಿತ್ರ ನಿರ್ಮಿಸಿ ಮತ್ತು ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ರಾಜೇಂದ್ರಸಿಂಗ್ ಬಾಬು ಕೋರಿದ್ದರು. ಮೊದಲು ಹೆಸರು ಬಳಕೆಗೆ ಕೋರ್ಟ್ ತಡೆ ನೀಡಿತ್ತು. ನಂತರ ಅದನ್ನು ತೆರವು ಮಾಡುವ ಮೂಲಕ ರಮ್ಯಾ ಪರ ತೀರ್ಪು ಕೊಟ್ಟಿತು.
Parineeti Chopra@35: 4 ಲಕ್ಷದ ಉಂಗುರ ತೋರಿಸ್ತಲೇ ಅಮ್ಮನಾಗುವ ವಿಷಯ ಮಾತಾಡಿದ ಪರಿಣಿತಿ!