ದೇಶಾದ್ಯಂತ 'ಕಿಸಾನ್ ದಿವಸ್' ಆಚರಣೆ ಮಾಡಲಾಗುತ್ತಿದೆ. ಸಿನಿಮಾ ನಟ-ನಟಿಯರು, ರಾಜಕಾರಣಿಗಳು ಹಾಗೂ ಸಾರ್ವಜನಿಗರು ರೈತರಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ರೈತರಿಗೆ ಸಿಗುತ್ತಿರುವ ಮನ್ನಣೆ ಬಗ್ಗೆ ಹಲವು ನಟ, ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನೆ ನಡುವೆ ರೈತರಿಗೆ ಸಿಹಿ ಸುದ್ದಿ; ಡಿ.25ರಂದು ರೈತರ ಖಾತೆಗೆ PM ಕಿಸಾನ್ ಯೋಜನೆ ಹಣ! 

ಕಾಂಗ್ರೆಸ್‌ನೊಂದಿಗೆ ತಮ್ಮನ್ನು ಗುರುತಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ರಮ್ಯಾ ರೈತರ ಪರವಾಗಿ ಧ್ವನಿ ಎತ್ತಿ, ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಇಂದು ಕಿಸಾನ್ ದಿವಸ್‌'. ರೈತರಿಗೆ ಬೆಂಬಲ ನೀಡುವ ಮೂಲಕ ನಾನು ಇಂದು ಒಂದು ಹೊತ್ತು ಉಪವಾಸ ಮಾಡುತ್ತಿದ್ದೇನೆ. ಆಗಸ್ಟ್‌ 9,2020ರಿಂದ ಭಾರತೀಯ ರೈತರು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾನೂನಿನ ವಿರುದ್ದ ಪ್ರತಿಭಟಿಸುತ್ತಲೇ ಇದ್ದಾರೆ.  ಆದರೆ ಮೋದಿ ಸರ್ಕಾರ ಮಾತ್ರ ತನ್ನ ಪಟ್ಟು ಬಿಡುತ್ತಿಲ್ಲ. ಹಠ ಮುಂದುವರಿಸಿದೆ. ಮೋದಿ ಬೆಂಬಲ ರೈತರಿಗಿಲ್ಲ, ಕಾರ್ಪೋರೇಟ್ ಸ್ನೇಹಿತರ ಪರ,' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಸರಕಾರವನ್ನು ಮತ್ತೊಮ್ಮೆ ಸೂಟುಬೂಟಿನ ಸರ್ಕಾರವೆಂದು ವ್ಯಾಖ್ಯಾನಿಸಿದ ರಮ್ಯಾ, ರೈತರಿಲ್ಲ ಎಂದರೆ ಅಹಾರವಿಲ್ಲ, ರೈತರ ದಿನಾರಣೆ ಎಂದು ಹ್ಯಾಶ್‌ಟ್ಯಾಗ್‌ ಬಳಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಗೂ ಸ್ಟೇಟಸ್ ಪೋಸ್ಟ್ ಮಾಡಿದ್ದಾರೆ.

ರಾಕೇಶ್‌ ಟಿಕಾಯತ್‌ ಮಾತು:
ನಟಿ ರಮ್ಯಾ ರೈತರ ಪರವಾಗಿ ಮಾತನಾಡುತ್ತಾ ಭಾರತೀಯ ಕಿಸಾನ್ ಟಿಕಾಯಿತ್ ಅಧ್ಯಕ್ಷ ರಾಕೇಶ್ ಕಿಟಾಯತ್‌ ಹೇಳಿರುವ ಮಾತುಗಳನ್ನ ಬರೆದುಕೊಂಡಿದ್ದಾರೆ. 'ಉತ್ತರ ಪ್ರದೇಶದಲ್ಲಿರುವವರಿಗೆ ಒಂದು ದಿನ ಊಟ ಬಿಡುವಂತೆ ರಾಕೇಶ್ ಕಿಟಾಯತ್‌ ಕರೆ ನೀಡಿದ್ದಾರೆ. ಆದರೆ ದೇಶಕ್ಕೆ ಊಟ ನೀಡುವವರ ಈ ಸರ್ಕಾರ ಮಾಡಿರುವ ಕಾನೂನಿನಿಂದ ಹಸಿವಿನಲ್ಲಿ ಇದ್ದಾರೆ. ರೈತರ ದಿನ ಅಡುಗೆ ಮಾಡಬೇಡಿ, ಅವರನ್ನು ಬೆಂಬಲಿಸಿ ಅಂತ ಹೇಳಿದ್ದಾರೆ' ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಗಾಸಿಪ್: ನಟಿ ರಮ್ಯಾ ಎಲ್ಲಿ, ಯಾರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನೋಡಿ! 

ಕೇಂದ್ರ ಸರಕಾರ ತಾವು ಬೆಳೆದ ಬೆಳೆಯನ್ನು ತಮ್ಮಿಷ್ಟ ಬಂದವರಿಗೆ ಮಾರುವ ಅವಕಾಶ ನೀಡಿ, ಕಾಯಿದೆ ಜಾರಿಗೊಳಿಸಿದೆ. ಈ ಸಂಬಂಧ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ರೈತರು ದೆಹಲಿಯಲ್ಲಿ  ಪ್ರತಿಭಟಿಸುತ್ತಿದ್ದಾರೆ.