ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಇತ್ತೀಚಿಗೆ ಫ್ಯಾಮಿಲಿ ಹಾಗೂ ಶ್ವಾನಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಸುಮ್ಮನೆ ಕೂತರೆ ಆಗದು ಎನ್ನುವ ಕಾರಣ ತಮ್ಮ ಸಿನಿಮಾ ನೋಡುವ ಕ್ರೇಜನ್ನು ಮತ್ತೆ ಶುರು ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನೋಡಿರುವ ನೀವೂ ಯಾವುದಾದರೂ ಸಲಹೆ ಕೊಡಿ ಎಂದು ಅಭಿಮಾನಿಗಳನ್ನು ಕೇಳಿದ್ದರು. 

ಚಿತ್ರಾನ್ನ ರೆಡಿ ಮಾಡಿ ರೈತರ ಪ್ರತಿಭಟನೆಗೆ ಜೈ ಎಂದ ರಮ್ಯಾ 

ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಅಭಿಮಾನಿಗಳ ಜೊತೆ ಸಂದರ್ಶಿಸಿದ ನಟಿ ರಮ್ಯಾ ಕನ್ನಡ ಚಿತ್ರಗಳ ಮೇಲಿರುವ ಪ್ರೀತಿಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಭಾಷೆ ಸಿನಿಮಾ ನೋಡುವ ಜನ ಇದ್ದೇ ಇರುತ್ತಾರೆ ಹಾಗೇ ರಮ್ಯಾಗೂ ಬಹಳ ದೊಡ್ಡ ಲಿಸ್ಟ್‌ ನೀಡಿದ್ದಾರೆ. ಆದರೆ ನಮ್ಮ ಮೋಹಕ ತಾರೆ ಮಾತ್ರ ಕನ್ನಡ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ರಮ್ಯಾ ಲಿಸ್ಟ್:

'ನೀವೆಲ್ಲಾ ತುಂಬಾನೇ ಸ್ವೀಟ್‌ ಮಂದಿ. ನಿಮ್ಮಲ್ಲರ ಪ್ರತಿಕ್ರಿಯೆ ಓದಿರುವೆ. ಅದರಲ್ಲಿ ಹೆಚ್ಚಾಗಿ ಬಂದದ್ದನ್ನು ಲಿಸ್ಟ್ ಮಾಡಿಕೊಂಡಿರುವೆ. ಲವ್ ಮಾಕ್ಟೇಲ್, ದಿಯಾ, ಭೀಮಸೇನಾ ನಳಮಹಾರಾಜ, ಕವಲುದಾರಿ ಹಾಗೂ ಇನ್‌ಸ್ಪೆಕ್ಟರ್‌ ವಿಕ್ರಂ' ಎಂದು ಲಿಸ್ಟ್ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ 'ಗಂಟುಮೂಟೆ' ಸಿನಿಮಾ ನೋಡಿ ರಮ್ಯಾ ಫಿದಾ ಆಗಿದ್ದಾರೆ. 2020ರಲ್ಲಿ ನಾನು ವೀಕ್ಷಿಸಿದ ಸಿನಿಮಾ ಹಾಗೂ ವೆಬ್‌ ಸೀರಿಸ್‌ ಪಟ್ಟಿಯನ್ನು ಶೀಘ್ರದಲ್ಲಿ ಹಂಚಿಕೊಳ್ಳುವೆ ಎಂದು ಹೇಳಿದ್ದಾರೆ.

"