90ರ ದಶಕದಲ್ಲಿ ನಟಿ ಪ್ರೇಮ ಸ್ಟಾರ್ ನಟರೊಂದಿಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ರು.ಈಗ ಮತ್ತೆ ಲಾಯರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಸಮಾಜದ ಗಂಭೀರ ಸಮಸ್ಯೆಯನ್ನು ಮುಖ್ಯ ಕಥೆಯಾಗಿಸಿಕೊಂಡು ಸದ್ಯ ತೆರೆ ಕಾಣಲು ಸಜ್ಜಾಗಿರುವ ಚಿತ್ರ ವೆಡ್ಡಿಂಗ್ ಗಿಫ್ಟ್. ವಿಕ್ರಂ ಪ್ರಭು ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಸ್ಯಾಂಪಲ್ಸ್ ಮೂಲಕವೇ ಸಿನಿಮಾ ಕಥೆ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬ್ಯುಲ್ಡ್ ಮಾಡಿದೆ.

ಮೊದಲೆಲ್ಲಾ ದಾಂಪತ್ಯ ಜೀವನದ ಸಮಸ್ಯೆಗಳನ್ನು ಮನೆಯ ಹಿರಿಯರೇ ಮಾತನಾಡಿ ಬಗೆಹರಿಸುತ್ತಿದ್ರು. ಆದರೆ ಈಗಂತೂ ಸಾಂಸಾರಿಕ ಬಿರುಕು ದೊಡ್ಡ ಗಲಾಟೆಗಳಾಗಿ ಕೋರ್ಟ್ ಮೆಟ್ಟಿಲೇರುವ ಪ್ರಕರಣಗಳೇ ಹೆಚ್ಚು. ಅದ್ರಲ್ಲೂ ಹೆಣ್ಣುಮಕ್ಕಳೇ ತಪ್ಪು ಹಾದಿಯಲ್ಲಿ ಹೆಜ್ಜೆ ಇಟ್ಟು, ತಮ್ಮ ರಕ್ಷಣೆಗಾಗಿ ಇರುವ ಕಾನೂನು ದುರುಪಯೋಗ ಪಡಿಸಿಕೊಂಡು ಪುರುಷರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಇದೇ ವಿಚಾರದ ಕುರಿತು ವೆಡ್ಡಿಂಗ್ ಗಿಫ್ಟ್ ಸಿನಿಮಾ ಮಾಡಲಾಗಿದೆ. ಇಂತಹ ಕ್ರಿಟಿಕಲ್ ಕೇಸ್ ನ್ನು ಹ್ಯಾಂಡಲ್ ಮಾಡಿ ಸಮಸ್ಯೆ ಬಗೆಹರಿಸಿ ನ್ಯಾಯ ದೊರಕಿಲಿಕೊಡುವ ಲಾಯರ್ ಪಾತ್ರದಲ್ಲಿ ಸ್ಯಾಂಡಲ್ ವುಡ್‌ನ ಎವರ್ಗ್ರೀನ್ ನಟಿ ಪ್ರೇಮ ಕಾಣಿಸಿಕೊಳ್ತಿದ್ದಾರೆ.

90ರ ದಶಕದಲ್ಲಿ ನಟಿ ಪ್ರೇಮ ಸ್ಟಾರ್ ನಟರೊಂದಿಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ರು. ನಂತ್ರ ಕೆಲ ವರ್ಷಗಳು ಚಿತ್ರರಂಗದಿಂದ ದೂರ ಉಳಿದಿದ್ರು. ಮತ್ತೆ ಉತ್ತಮ ಸಾಮಾಜಿಕ ಸಂದೇಶವುಳ್ಳ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ಬೇಕು ಎಂದು ಕಾಯುತ್ತಿದ್ದ ಪ್ರೇಮ ಸಾಕಷ್ಟು ಸಿನಿಮಾಗಳಿಂದ ಆಫರ್ಸ್ ಬಂದ್ರೂ ಒಪ್ಪಿಕೊಂಡಿರ್ಲಿಲ್ಲ. ಆದ್ರೆ ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ಅಂತಹದ್ದೊಂದು ಉತ್ತಮ ಪಾತ್ರ ಸಿಕ್ಕಿದ್ರಿಂದ ಈ ಚಿತ್ರದ ಮೂಲಕ ಪ್ರೇಮ ಮತ್ತೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ವಿಕ್ರಂ ಪ್ರಭು ಕನಸಿನ ಕೂಸು ವೆಡ್ಡಿಂಗ್ ಗಿಫ್ಟ್!

ಹಲವು ಸಿನಿಮಾಗಳಲ್ಲಿ ಭಿನ್ನ, ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಲಿರುವ ಪ್ರೇಮ ಈ ಚಿತ್ರದಲ್ಲಿ ಲಾಯರ್ ರೋಲ್ ನಲ್ಲಿ ಕಮಾಲ್ ಮಾಡಲು ಬರ್ತಿದ್ದಾರೆ. ಈಗಾಗ್ಲೇ ಹೊರಬಂದಿರುವ ಚಿತ್ರದ ಟೀಸರ್ ಹಾಗೂ ಟ್ರೈಲರ್ ನಲ್ಲಿ ಪ್ರೇಮ ಅವರ ಪಾತ್ರದ ಝಲಕ್ ನೋಡುಗರ ಗಮನ ಸೆಳೆದಿದೆ. ಈ ಸಿನಿಮಾ ಮೂಲಕ ಪ್ರೇಮ ಅವರ ಸಿನಿ ಕೆರಿಯರ್ ನ ಸೆಕೆಂಡ್ ಇನ್ನಿಂಗ್ಸ್ ಗೆ ಭರ್ಜರಿ ಓಪನಿಂಗ್ ಸಿಗುವ ಸಾಧ್ಯತೆ ಇದೆ.

ಇನ್ನೂ ನಿಶಾನ್ ಈ ಚಿತ್ರಗ ನಾಯಕನಾಗಿ ನಟಿಸಿದ್ರೆ, ಸೋನು ಗೌಡ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಪವಿತ್ರ ಲೋಕೇಶ್, ಅಚ್ಯುತ್ ಕುಮಾರ್ ಇನ್ನೂ ಹಲವು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಬಾಲತಂದ್ರ ಪ್ರಭು ಸಂಗೀತ ಸಂಸೋಜಿಸಿದ್ರೆ, ಉದಯ್ ಲೀಲ ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶನ ಮಾಡೋದ್ರ ಜೊತೆಗೆ ವಿಕ್ರಂ ಪ್ರಭು ತಮ್ಮ ವಿಕ್ರಂ ಪ್ರಭು ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ. ಒಟ್ಟಾರೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ವೆಡ್ಡಿಂಗಂ ಗಿಫ್ಟ್ ಚಿತ್ರ ಜುಲೈ 8ಕ್ಕೆ ಥಿಸೇಟರ್ ಗಳಿಗೆ ಲಗ್ಗೆ ಇಡಲಿದೆ.

YouTube video player