Asianet Suvarna News Asianet Suvarna News

ತಂದೆಯಿಂದಲ್ಲೇ ನಟಿ ಖುಷ್ಬೂಗೆ ಲೈಂಗಿಕ ದೌರ್ಜನ್ಯ; ತಾಯಿ ಕೂಡ ನಂಬಲ್ಲ ಅನ್ನೋ ಭಯವಿತ್ತು ಎಂದ 'ಶಾಂತಿ ಕ್ರಾಂತಿ' ನಟಿ

ಬಾಲ್ಯದಲ್ಲಿ ತಂದೆಯಿಂದ ಲೈಂಗಿಕ ಕಿರುಕುಳ ಎದುರಿಸಿದ ಶಾಂತಿ ಕ್ರಾಂತಿ ನಟಿ ಖುಷ್ಬೂ. ಯಾರೊಂದಿಗೂ ಹಂಚಿಕೊಳ್ಳದ ಸತ್ಯ ತೆರೆದಿಟ್ಟ ನಟಿ....

Actress Politician Kushboo opens about abused from father at the age of 8 National commission for women vcs
Author
First Published Mar 6, 2023, 9:32 AM IST | Last Updated Mar 6, 2023, 9:32 AM IST

ರಣಧೀರ, ಶಾಂತಿ ಕ್ರಾಂತಿ, ಮ್ಯಾಜಿಕ್ ಅಜ್ಜಿ, ಜೀವನದಿ, ಪಾಳೆಗಾರ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಬಹುಭಾಷಾ ನಟಿ ಖುಷ್ಬೂ ಬಾಲ್ಯದಲ್ಲಿ ತಂದೆಯಿಂದಲ್ಲೇ ಕಿರುಕುಳ ಅನುಭವಿಸಿರುವ ಘಟನೆ ರಿವೀಲ್ ಮಾಡಿದ್ದಾರೆ. ನಟಿ ಕಮ್ ರಾಜಕಾರಣಿಯಾಗಿರುವ ಖುಷ್ಬೂ ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡ ಕ್ಷಣ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ತೆರೆದಿಟ್ಟಿದ್ದಾರೆ. 

'ಬಾಲ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದರೆ ಮಾನಸಿಕವಾಗಿ ದೊಡ್ಡ ಪರಿಣಾಮ ಬೀರುತ್ತದೆ ಅದರಿಂದ ಇಡೀ ಜೀವನ ಹೆದರಿಕೊಳ್ಳಲು ಆರಂಭಿಸುತ್ತಾರೆ. ನನ್ನ ತಾಯಿ ವೈವಾಹಿಕ ಜೀವನದಲ್ಲಿ ಅತಿ ಹೆಚ್ಚು ನಿಂದನೆಗಳನ್ನು ಎದುರಿಸಿದ್ದರು. ಹೆಂಡತಿ ಮೇಲೆ ಹಲ್ಲೆ ಮಾಡುವುದು, ಮಕ್ಕಳನ್ನು ಹೊಡೆಯುವುದು ಅಪರಾಧ ಆದರೆ ಆ ಮನುಷ್ಯ ತಮ್ಮ ಜನ್ಮ ಹಕ್ಕ ಎನ್ನುವ ರೀತಿ ವರ್ತಿಸುತ್ತಿದ್ದ. ನಾನು 8 ವರ್ಷದ ಹುಡುಗಿ ಆಗಿದ್ದಾಗ ನನಗೆ ಕಿರುಕುಳ ನೀಡಲು ಆರಂಭಿಸಿದ್ದರೆ. ದೌರ್ಜನ್ಯದ  ಬಗ್ಗೆ ಧ್ವತಿ ಎತ್ತಿ ಮಾತನಾಡಲು ಧೈರ್ಯ ಬಂದಿದ್ದೇ ನಾನು 15 ವರ್ಷ ಮುಟ್ಟಿದ್ದಾಗ' ಎಂದು ಬರ್ಖಾ ದತ್ ಜೊತೆ ಮೊಜೊ ಸ್ಟೋರಿಗಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವ್ಹೀಲ್‌ಚೇರ್‌ಗಾಗಿ 30 ನಿಮಿಷ ಕಾಯಬೇಕಾಯ್ತು: ಏರ್‌ ಇಂಡಿಯಾ ವಿರುದ್ಧ ಗರಂ ಆದ ಖುಷ್ಬೂ ಸುಂದರ್

ಕುಟುಂಬದವರ ಭಯದಿಂದ ಖುಷ್ಬೂ ಕಿರುಕುಳದ ಬಗ್ಗೆ ಹೇಳಿಕೊಳ್ಳಲು ಹೆದರುತ್ತಿದ್ದರಂತೆ. 'ಕಿರುಕುಳದ ಬಗ್ಗೆ ಹೇಳಿಕೊಂಡರೂ ನನ್ನ ತಾಯಿ ನಂಬುತ್ತಾರೋ ಇಲ್ವೋ ಅನ್ನೋ ಭಯ ನನ್ನಲ್ಲಿತ್ತು ಏಕೆಂದರೆ ಏನೇ ಆಗಲಿ ನನ್ನ ಪತಿ ದೇವರು ಎನ್ನುವ ಮೈಂಡ್‌ಸೆಟ್‌ ಇರುತ್ತದೆ ಎಂದು. ತಾಳ್ಮೆ ಮೀರಿದ ಮೇಲೆ ನಾನು ತಂದೆ ವಿರುದ್ಧ ಮಾತನಾಡಲು ಶುರು ಮಾಡಿದೆ, ಅಗ ನನಗೆ 15 ವರ್ಷ. ನಮ್ಮ ಬಳಿ ಏನಂದ್ರೆ ಏನೂ ಇರಲಿಲ್ಲ ಆ ಸಮಯದಲ್ಲಿ ನಮ್ಮನ್ನು ಬಿಟ್ಟು ಹೋದರು. ಒಂದು ಹೊತ್ತು ಊಟಕ್ಕೂ ತುಂಬಾ ಯೋಚನೆ ಮಾಡಬೇಕಿತ್ತು. 16 ವರ್ಷದ ಹುಡುಗಿ ಆಗಿದ್ದಾಗ ಜೀವನ ಪಾಠ ಕಲಿಸಿತ್ತು' ಎಂದು ಖುಷ್ಬೂ ಹೇಳಿದ್ದಾರೆ.

ಖುಷ್ಬೂ ಜರ್ನಿ:

1986ರಲ್ಲಿ ಕಲಿಯುಗ ಪಾಂಡವುಲು ಚಿತ್ರದ ಮೂಲಕ ದಕ್ಷಿಣ ಚಿತ್ರರಂಗದ ಕಡೆ ಪ್ರಯಾಣ ಶುರು ಮಾಡಿದ ಖುಷ್ಬೂ ಸುಂದರ್ ನಿಜವಾದ ಹೆಸರು ನಖತ್ ಖಾನ್‌ ಎಂದು. ಮುಂಬೈನ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ನಂತರ ಹಿಂದೂ ಧರ್ಮೀಯ ಸುಂದರ್ ಅವರನ್ನು ಮದುವೆಯಾಗುವ ಮುನ್ನ ಅವರು ಹಿಂದೂ ಸಂಪ್ರದಾಯಗಳನ್ನು ಅನುಸರಿಸಿದರು. ತಮ್ಮ ಗಂಡನ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ದಂಪತಿಗಳು ತಮ್ಮ ಮಕ್ಕಳಿಗೆ ಆವಂತಿಕಾ ಮತ್ತು ಆನಂದಿತಾ ಎಂದು ಹೆಸರಿಸಿದ್ದಾರೆ. ಸದ್ಯ ಖುಷ್‌ಬೂ ತಮಿಳುನಾಡಿನ ಭಾರತೀಯ ಜನತಾ ಪಾರ್ಟಿಯಲ್ಲಿ ಕ್ರಿಯಾಶೀಲವಾಗಿ ಇದ್ದಾರೆ. ಇವರಿಗಾಗಿ ಒಂದು ದೇವಾಲಯವನ್ನೂ ಕಟ್ಟಲಾಗಿದೆ.

ನಟಿ ಖುಷ್ಬೂ ಕೂದಲು ಪಳಪಳ ಹೊಳೆಯುವುದಕ್ಕೆ ಕಾರಣವೇ ಈ ಹೇರ್‌ಪ್ಯಾಕ್‌!

ಇದಕ್ಕಿದ್ದಂತೆ ಸಣ್ಣ?:

ಮೊದಲ ಕೊರೋನಾ ವೈರಸ್ ಲಾಕ್‌ಡೌನ್‌ ಸಮಯದಲ್ಲಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ಸ್ಕಿನ್ ಕೇರ್  ಮತ್ತು ಹೇರ್‌ ಕೇರ್ ಟಿಪ್ಸ್ ಕೊಟ್ಟು ಫೋಟೋ ಹಂಚಿಕೊಳ್ಳುತ್ತಿದ್ದರು. ಈ ವೇಳೆ ನಟಿ ಮುಖವನ್ನು ಕ್ಲೋಸಪ್‌ನಲ್ಲಿ ನೋಡುತ್ತಿದ್ದ ನೆಟ್ಟಿಗರು, ನೀವು ತುಂಬಾ ದಪ್ಪ ಆಗಿದ್ದೀರಿ ಎಂದು ಕಾಮೆಂಟ್  ಮಾಡುತ್ತಿದ್ದರು. ಯಾವುದಕ್ಕೂ ಪ್ರತಿಕ್ರಿಯೆ ನೀಡದ ಖುಷ್ಬೂ ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ, ಸಣ್ಣ ಆಗಿದ್ದಾರೆ. ಕಾಯಿಲೆ ಬಂದಿದೆ ಎಂದು ಕಾಲೆಳೆಯುತ್ತಿದ್ದವರಿಗೆ ಟ್ರಾನ್ಸ್‌ಫಾರ್ಮೇಷನ್‌ ಫೋಟೋ ಹಂಚಿಕೊಂಡು ದೇಹದ ತೂಕ ಇಳಿಸಿಕೊಂಡ ಬಗ್ಗೆ ಸಣ್ಣ ಸುಳಿವು ನೀಡಿದ್ದರು. '20 ಕೆಜಿ ಲೈಟ್ ಆಗಿರುವೆ. ನಾನು ಆರೋಗ್ಯವಾಗಿದ್ದೀನಿ. ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ, ನೆನಪಿರಲಿ ಆರೋಗ್ಯವೇ ಭಾಗ್ಯ. ನನಗೆ ಉಷಾರಿಲ್ವಾ ಎಂದು ಪ್ರಶ್ನೆ ಮಾಡುವವರಿಗೆ ಧನ್ಯವಾದಗಳು ನಿಮ್ಮ ಕಾಳಜಿಗೆ. ಈಗಿರುವ ಫಿಟ್ ನಾನು ಎಂದೂ ಇರಲಿಲ್ಲ. ಇದನ್ನು ಓದಿದವರಲ್ಲಿ 10 ಜನರಿಗೆ ಸಣ್ಣ ಆಗಲು ಫಿಟ್ ಆಗಲು ನಾನು ಸ್ಪೂರ್ತಿಯಾದರೆ, ನಾನು ಯಶಸ್ವಿಯಾಗಿರುವೆ ಎಂದು ಭಾವಿಸುವೆ,' ಎಂದು ಬರೆದುಕೊಂಡಿದ್ದರು. 

Latest Videos
Follow Us:
Download App:
  • android
  • ios