ಸದಾ ಕೈಮಗ್ಗ ಸೀರೆಯಲ್ಲಿ ಮಿಂಚುವ ನಟಿ ಭಾವನಾ ರಾಮಣ್ಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅತಿ ಹೆಚ್ಚು ಹುಡುಕಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನೂರಾರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟಿ ಭಾವನಾ ರಾಮಣ್ಣ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ಕೈಮಗ್ಗ ಸೀರೆ, ಹಣೆ ತುಂಬಾ ಬಿಂದಿ, ಕಾಲುಗೆಜ್ಜೆ ಮತ್ತು ದೊಡ್ಡ ಮೂಗುತ್ತಿ ಇವರ ಲುಕ್‌ನ ಹೈಲೈಟ್‌. ಭಾವನಾ ಬಗ್ಗೆ ಅನೇಕ ವಿಚಾರಗಳನ್ನು ಹುಡುಕಿ ಉತ್ತರ ಸಿಗಲಿಲ್ಲ ...ಆ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.... 

ಭಾವನಾಗೆ ಕೋಪ ಜಾಸ್ತಿ?
ಹೌದು ಹೌದು ನನಗೆ ಕೋಪ ಬರುತ್ತೆ ಆದರೆ ಕಾರಣ ಇಲ್ಲದೆ ಬರಲ್ಲ. ಅದರಲ್ಲೂ ಏರ್‌ಪೋರ್ಟ್‌ನಲ್ಲಿ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ ಅಲ್ಲಿ ಮಾಡಿರುವಷ್ಟು ಜಗಳ ನಾನು ಎಲ್ಲೂ ಮಾಡಿಲ್ಲ. ದೇಶಾದ್ಯಂತ ಇರುವ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಜಗಳ ಮಾಡಿದ್ದೀನಿ ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಪಾರ್ಟಿ ಜಾಸ್ತಿ ಮಾಡ್ತಾರಾ?
ಪಾರ್ಟಿ ಮಾಡುವ ವ್ಯಕ್ತಿ ನಾನಲ್ಲ ಆದರೆ ಸುಮ್ಮನೆ ಕುಳಿತುಕೊಂಡು ಜ್ಯಾಮ್‌ ಸೆಕ್ಷನ್ ಮಾಡುವುದು ಹಾಡುವುದು ಮಾತುಕತೆ ಮಾಡುವುದು ಇಷ್ಟ ಆಗುತ್ತೆ. 

Dont care ವ್ಯಕ್ತಿ?
ಇಲ್ಲ ನಾನು ತುಂಬಾ ಕೇರ್ ಮಾಡುವ ವ್ಯಕ್ತಿ. Dont care ಗುಣ ಬಂದ್ರೆ ನಿರ್ಲಕ್ಷ್ಯ ಗುಣವೇ ಹೆಚ್ಚಾಗುತ್ತದೆ. 

ಕೋಟ್ಯಾಧಿಪತಿ?
ದೇವಯ ದಯೇಯಿಂದ ದುಡ್ಡಿಗೆ ಏನೂ ಕಡಿಮೆ ಆಗಿಲ್ಲ ಆದರೆ ಹಣಕ್ಕೆ ಹೆಚ್ಚಿನ ಪ್ರಮುಖ್ಯಗೆ ನೀಡಿಲ್ಲ. 

ರಾಜಕೀಯದಲ್ಲಿ ಶತ್ರುಗಳು ಹೆಚ್ಚು ಹಾಗೂ ಒಳ್ಳೆ ಅವಕಾಶ ಸಿಕ್ಕಿಲ್ಲ?
ಶತ್ರುಗಳು ಅಂತ ಹೇಳುವುದಕ್ಕೆ ಆಗಲ್ಲ ಆದರೆ ಅವರ ಎಕ್ಸ್‌ಪ್ರೆಶ್‌ಗಳನ್ನು ನನಗೆ ಮುಖ್ಯವಾಗುತ್ತದೆ. ಶತ್ರು ಇದೇ ರೋಪದಲ್ಲಿ ಇದ್ದಾರೆ ಎಂದು ಹೇಳಲು ಹೇಗಾಗುತ್ತದೆ?. ಒಂದೇ ಸಲ ಟಿಕೆಟ್ ಕೇಳಿದ್ದೆ ಅದು ಮಿಸ್ ಆಯ್ತು ಈ ಸಲ ಟಿಕೆಟ್ ಕೇಳಿರುವು ಈ ಸಲವೂ ಮಿಸ್ ಆದ್ರೆ ಮಾತ್ರ ಅವಕಾಶ ಸಿಕ್ಕಿಲ್ಲ ಎನ್ನಬಹುದು. 

ಇಷ್ಟು ವರ್ಷವಾದರೂ ಭಾವನಾ ರಾಮಣ್ಣ ಮದ್ವೆ ಆಗದೇ ಇರೋದಕ್ಕೆ ಇದೇ ಕಾರಣವಂತೆ!

ದತ್ತು ಮಕ್ಕಳು? 
ನಾನು ಮಕ್ಕಳನ್ನು ದತ್ತು ತೆಗೆದುಕೊಂಡಿಲ್ಲ ಆದರೆ ನಿಜಕ್ಕೂ ದತ್ತು ತೆಗೆದುಕೊಳ್ಳಬೇಕು ಅನ್ನೋ ಆಸೆ ತುಂಬಾ ಇದೆ. ಬಾಂಬೆಯಲ್ಲಿರುವಾಗ ಒಂದು ಹುಡುಗಿ ಇದ್ದಳು ಅವರ ತಾಯಿಗೆ 5 ಜನ ಹೆಣ್ಣು ಮಕ್ಕಳು ಅವರ ಸಹೋದರಿಯರನ್ನು ದತ್ತು ತೆಗೆದುಕೊಳ್ಳಬೇಕು ಅಂದುಕೊಂಡೆ ಆಗಲಿಲ್ಲ. ವಿದ್ಯಾಭ್ಯಾಸದ ಕಾರಣಕ್ಕೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವೆ. ಅವರಿಗೆ ವರ್ಷಕ್ಕೆ ಹಣ ಬಟ್ಟೆ ಕೊಡುವುದು ಮಾಡುವೆ. ಭಾರತದಲ್ಲಿ ಸಿಂಗಲ್ ಮಹಿಳೆ ದತ್ತು ತೆಗೆದುಕೊಳ್ಳಲು ಅಗಲ್ಲ.

ಮೂಗುತ್ತಿ ಮತ್ತು ಕಾಲು ಗೆಜ್ಜೆ ಕಲೆಕ್ಷನ್?
ಗೆಜ್ಜೆ ಅಂದ್ರೆ ಪ್ರಾಣ ನನಗೆ. ಗೆಜ್ಜೆ ಶಬ್ಧ ಇಲ್ಲ ಅಂದ್ರೆ ಬದುಕಲು ಅಗಲ್ಲ. ಬಾಂಬೆಯಲ್ಲಿ ಗೆಜ್ಜೆ ಹಾಕಿಕೊಂಡಿದ್ದೆ ಆಗ ಮೋಹಿನಿ ರೀತಿ ಓಡಾಡುತ್ತಿರುವೆ ಎಂದು ನನ್ನ ತಮ್ಮ ಹೇಳಿದ.

ಸೇರೆ ಕಲೆಕ್ಷನ್?
ನನ್ನ ಬಳಿ ಜಾಸ್ತಿ ಸೀರೆಗಳು ಇಲ್ಲ ತುಂಬಾ ಕಲೆಕ್ಷನ್ ಮಾಡಬೇಕು ಅಂದುಕೊಂಡಿರುವೆ. ಹೆಚ್ಚಿಗೆ ಹ್ಯಾಂಡ್‌ಲೂಮ್‌ ಮತ್ತು ರೇಶ್ಮೆ ಸೀರೆ ಧರಿಸುವುದು. ಕಂಪ್ಯೂಟರ್‌ ಡಿಸೈನ್‌ ಇರುವ ಸೀರೆಗಳನ್ನು ಅಯ್ಕೆ ಮಾಡುವುದಿಲ್ಲ. ತುಂಬಾ ಹುಡುಕಿ ಹುಡುಕಿ ಸೀರೆ ಆಯ್ಕೆ ಮಾಡುವೆ. ಒಂದು ನಿಮಿಷ ಧರಿಸಿ ಕೊಡುವೆ ಎಂದು ಯಾರೇ ಕೇಳಿದ್ದರೂ ನಾನು ಕೊಡುವುದಿಲ್ಲ. ಸೀರೆಗಳನ್ನು ನನ್ನ ಕೈಯಲ್ಲಿ ನಾನೇ ತೊಳೆದು ಐರನ್ ಮಾಡುವೆ. ಸೀರೆ ಮೇಲೆ ಪ್ರೀತಿ ಹುಟ್ಟಲು ಕಾರಣ ಏನು ಗೊತ್ತಿಲ್ಲ ಆದರೆ 15 ವರ್ಷ ಹುಡುಗಿ ಇದ್ದಾಗಿನಿಂದಲೂ ಸೀರೆ ಧರಿಸುತ್ತಿರುವೆ. ಮಿಡಿ ಮಿನಿ ನನ್ನ ಕಾಲದಲ್ಲಿ ವೆಸ್ಟ್ರನ್ ಡ್ರೆಸ್‌ ಇತ್ತು ನನಗೆ ಅದೆಲ್ಲಾ ಸೂಟ್ ಆಗುತ್ತಿರಲಿಲ್ಲ.