ತಮಿಳುನಾಡು ಮಾಜಿ ಸಿಎಂ, ರಾಜಕಾರಣಿ ಜಯಲಲಿತಾ ಬಗ್ಗೆ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. 'ತಲೈವಿ' ಯಾಗಿ ಕಂಗನಾ ರಾಣಾವತ್ ಕಾಣಿಸಿಕೊಂಡಿದ್ದಾರೆ.  ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ.  ಟೀಸರ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಜಯಲಲಿತಾ ಪಾತ್ರಕ್ಕೆ ಕಂಗನಾ ಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಬಾಲಿವುಡ್ ಗುಸುಗುಸು, ಕತ್ರಿನಾ-ವಿಕ್ಕಿ ಕೌಶಲ್ ನಡುವೆ ನಡಿತಿದ್ಯಾ ಪಿಸುಪಿಸು?

ಈ ಸಂದರ್ಭದಲ್ಲಿ ನಿತ್ಯಾ ಮೆನನ್ ಹೇಳಿಕೆಯೊಂದು ಗಮನ ಸೆಳೆದಿದೆ. ಜಯಲಲಿತಾ ಪಾತ್ರಕ್ಕೆ ನಾನೇ ಪರ್ಫೆಕ್ಟ್ ಎಂದಿದ್ದಾರೆ. 'ತಲೈವಿ' ಹೆಸರಿನಲ್ಲಿ ಕಂಗನಾ ಜಯಲಲಿತಾ ಆಗಿ ಕಾಣಿಸಿಕೊಂಡಿದ್ದರೆ, 'ದಿ ಐರನ್ ಲೇಡಿ' ಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ. 

'ತಲೈವಿ' ಗಾಗಿ ಕಂಗನಾ ದಿನಾ ಹಾರ್ಮೋನ್ ಮಾತ್ರೆ ನುಂಗುತ್ತಿದ್ದರಂತೆ!

ಈ ಬಗ್ಗೆ ನಿತ್ಯಾ ಮಾತನಾಡಿ, "ನನಗೂ ಜಯಲಲಿತಾರಿಗೂ ಸಾಕಷ್ಟು ಸಾಮ್ಯತೆ ಇದೆ. ನಮ್ಮಿಬ್ಬರ ಹವ್ಯಾಸಗಳು, ಯೋಚನೆ, ನಡವಳಿಕೆ ಎಲ್ಲದರಲ್ಲೂ ಸಾಮ್ಯತೆ ಇದೆ. ಹಾಗಾಗಿ ಅವರ ಪಾತ್ರ ಮಾಡಲು ನಾನೇ ಹೆಚ್ಚು ಪರ್ಫೆಕ್ಟ್ ಎಂದಿದ್ದಾರೆ. 

'ತಲೈವಿ' ಯಾಗಿ ಕಂಗನಾ, 'ದಿ ಐರನ್ ಲೇಡಿ'ಯಾಗಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಎರಡೂ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ತಲೈವಿ ಟೀಸರ್ ನಿರೀಕ್ಷೆ ಹುಸಿ ಮಾಡಿದ್ದು 'ದಿ ಐರನ್ ಲೇಡಿ' ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: