ತಪ್ಪು ಮಾಡಿದ್ದು ದರ್ಶನ್, ಸ್ಯಾಂಡಲ್‌ವುಡ್ ನಿಷೇಧಿಸಿದ್ದು ನಿಖಿತಾರನ್ನು, ಅಷ್ಟಕ್ಕೂ ಈಗೆಲ್ಲಿ ಅವರು?
ಉಪೇಂದ್ರ, ಪನೀತ್ ರಾಜ್‌ಕುಮಾರ್, ಜಗ್ಗೇಶ್, ವಿ.ರವಿಚಂದ್ರನ್, ಸುದೀಪ್ ಜೊತೆಯಲ್ಲಿ ನಿಖಿತಾ ತುಕ್ರಾಲ್ ನಟಿಸಿದ್ದರು. ಮುದ್ದಾದ ಮಗುವಿನ ತಾಯಿಯಾಗಿರೋ ನಿಖಿತಾ ತುಕ್ರಾಲ್, ಇಂದಿಗೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಫಿಟ್ ಆಗಿರೋ ನಟ ದರ್ಶನ್‌ನಿಂದಾಗಿ (Actor Darshan) ನಟಿ ನಿಖಿತಾ ತುಕ್ರಾಲ್ (Actress Nikita Thukral) ಒಂದು ಬಾರಿ ಕನ್ನಡ ಇಂಡಸ್ಟ್ರಿಯಿಂದ ನಿಷೇಧಕ್ಕೆ ಒಳಗಾಗಿದ್ದರು. ಆನಂತರ ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆ ಚಲನಚಿತ್ರ ಮಂಡಳಿ (Kannada Cinema Industry) ತನ್ನ ಆದೇಶವನ್ನು ಹಿಂಪಡೆದುಕೊಂಡಿತ್ತು. ಮುಂಬೈ ಮೂಲದ ನಿಖಿತಾ ತುಕ್ರಾಲ್ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದು, ಸಾಂಸರಿಕ ಜೀವನದಲ್ಲಿ ಸಂತೋಷವಾಗಿದ್ದಾರೆ. ಕನ್ನಡದ ಪುನೀತ್ ರಾಜ್‌ಕುಮಾರ್ ಸೇರಿದಂತೆ ಸ್ಟಾರ್ ನಟರ ಜೊತೆ ನಿಖಿತಾ ತೆರೆಹಂಚಿಕೊಂಡಿದ್ದಾರೆ.
ಉಪೇಂದ್ರ, ಪನೀತ್ ರಾಜ್‌ಕುಮಾರ್, ಜಗ್ಗೇಶ್, ವಿ.ರವಿಚಂದ್ರನ್, ಸುದೀಪ್ ಜೊತೆಯಲ್ಲಿ ನಿಖಿತಾ ತುಕ್ರಾಲ್ ನಟಿಸಿದ್ದರು. ಮುದ್ದಾದ ಮಗುವಿನ ತಾಯಿಯಾಗಿರೋ ನಿಖಿತಾ ತುಕ್ರಾಲ್, ಇಂದಿಗೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಖಿತಾ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
2011ರಲ್ಲಿ ಪತ್ನಿ ಮೇಲೆ ಹಲ್ಲೆಗೈದು ದರ್ಶನ್ ಜೈಲು ಸೇರಿದ್ದ ವೇಳೆ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. ಈ ಘಟನೆಯ ಬಳಿಕ ಕೊನೆಯ ಬಾರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ದರ್ಶನ್‌ಗೆ ಜೊತೆಯಾಗಿ ನಿಖಿತಾ ತುಕ್ರಾಲ್ ಕಾಣಿಸಿಕೊಂಡಿದ್ದರು. ಸಿನಿಮಾ 100 ದಿನ ಪೂರೈಸಿದ ಸಂದರ್ಭ ಹಿನ್ನೆಲೆ ಚಿತ್ರತಂಡ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ನಿಖಿತಾ ತುಕ್ರಾಲ್ ಅವರನ್ನು ದರ್ಶನ್ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದ ದೃಶ್ಯ ಕಂಡು ಬಂದಿತ್ತು.
ಲವ್ ಜಿಹಾದ್ ಟ್ರೋಲ್ ಬಗ್ಗೆ ಮೌನಮುರಿದ ಸೋನಾಕ್ಷಿ ಸಿನ್ಹಾ : ಮಗಳ ಮದುವೆಗೆ ಒಪ್ಪಿಗೆ ನೀಡಿಲ್ವಾ ಕುಟುಂಬಸ್ಥರು?
ನಿಖಿತಾ ಗಂಡ ಯಾರು?
ನಿಖಿತಾ ಪತಿ ಗಗನದೀಪ್ ಸಿಂಗ್ ಮಾಗೋ ಮುಂಬೈ ಮೂಲದ ಉದ್ಯಮಿ. ಗಗನದೀಪ್ ತಂದೆ ಖ್ಯಾತ ಉದ್ಯಮಿಯಾಗಿದ್ದು, ಯುಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸಂಬಂಧಿಕರೊಬ್ಬರ ಮದುವೆಯಲ್ಲಿ ಗಗನ್‌ದೀಪ್ ಅವರನ್ನು ನಿಖಿತಾ ಭೇಟಿಯಾಗಿದ್ದರು. ನಂತರ ಇಬ್ಬರ ನಡುವೆ ಪರಿಚಯವಾಗಿತ್ತು. ರೆಸ್ಟೋರೆಂಟ್‌ವೊಂದರಲ್ಲಿ ಮೊಳಕಾಲೂರಿ ವಜ್ರದುಂಗರ ನೀಡಿ ಗಗನ್‌ದೀಪ್ ನನಗೆ ಪ್ರಪೋಸ್ ಮಾಡಿದ್ದರು ಎಂದು ನಿಖಿತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಪೋಷಕರು ನಮ್ಮ ಮದುವೆಗೂ ಒಪ್ಪಿಗೆ ಸೂಚಿಸಿದ ಬಳಿಕ ನಮ್ಮಿಬ್ಬರ ಮದುವೆ ನಡೆಯಿತು. ನಾನು ಆಧ್ಯತ್ಮದತ್ತ ಹೆಚ್ಚು ಒಲವು ಹೊಂದಿರೋದರಿಂದ ಮನೆಯಲ್ಲಿ ಪುಟಾಣಿ ದೇವರಕೋಣೆಯನ್ನು ನನಗಾಗಿ ನಿರ್ಮಿಸಿಕೊಟ್ಟಿದ್ದಾರೆ. ಮುಂಬೈನ ಖಾಸಗಿ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಗಗನ್‌ದೀಪ್ ಮತ್ತು ನಿಖಿತಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ನಟ ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಪೋಸ್ಟ್‌ಮಾರ್ಟಂನಲ್ಲಿ ಪತ್ತೆ: ವೈದ್ಯರು ಹೇಳಿದ್ದೇನು?
ನಿಖಿತಾ ನಟನೆಯ ಸಿನಿಮಾಗಳು
ಮಹಾರಾಜ, ನೀ ಟಾಟಾ ನಾ ಬಿರ್ಲಾ, ವಂಶಿ, ದುಬೈ ಬಾಬು, ಯೋಧ, ಗನ್, ಪ್ರಿನ್ಸ್, ಗೌರಿಪುತ್ರ, ಸ್ನೇಹಿತರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಿಂಗ್ ರೋಡ್, ಮುಕುಂದ ಮುರಾರಿ ಸಿನಿಮಾಗಳಲ್ಲಿ ನಿಖಿತಾ ತುಕ್ರಾಲ್ ನಟಿಸಿದ್ದಾರೆ. ಆರಂಭದಲ್ಲಿ ಧಾರಾವಾಹಿಯಲ್ಲಿಯೂ ನಿಖಿತಾ ನಟಿಸಿದ್ದರು. ತೆಲಗು, ತಮಿಳು ಮತ್ತು ಮಲಯಾಳಂನಲ್ಲಿಯೂ ನಿಖಿತಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.