Asianet Suvarna News Asianet Suvarna News

ಮೇಘನಾ ರಾಜ್‌ ಥೈಲ್ಯಾಂಡ್‌ ಟ್ರಿಪ್; ಮಗನನ್ನು ಬಿಟ್ಟಿರಲು ತುಂಬಾ ಕಷ್ಟ ಎಂದ ನಟಿ

ವಿಡಿಯೋ ಕಾಲ್‌ನಲ್ಲಿ ರಾಯನ್‌ ನನ್ನನ್ನು ನೋಡಿದ್ದರೆ ಜೊತೆಗಿರಬೇಕು ಎಂದು ಹಠ ಮಾಡುತ್ತಾನೆ. ಗರ್ಲ್ಡ್‌ ಜೊತೆ ಟ್ರಿಪ್ ಹೇಗಿತ್ತು ಎಂದು ಮಾತನಾಡಿದ ಮೇಘನಾ ರಾಜ್...

Actress Meghana Raj talks about her all girls trip and missing raayan raj vcs
Author
First Published Dec 6, 2022, 4:00 PM IST

ಸ್ಯಾಂಡಲ್‌ವುಡ್‌ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಆಲ್‌ ಗರ್ಲ್ಸ್ ಟ್ರಿಪ್‌ ಥೈಲ್ಯಾಂಡ್‌ ಬಿಗ್ ಬ್ರೇಕ್‌ ನಂತರ ಮತ್ತೆ ನಾರ್ಮಲ್‌ ರೂಟೀನ್‌ ಆರಂಭಿಸಿದ್ದಾರೆ.  ಸನ್ ಬಾತ್‌ಯಿಂದ ಹಿಡಿದು ಮಗನನ್ನು ಮಿಸ್ ಮಾಡಿಕೊಂಡ ಕ್ಷಣಗಳ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. ಸ್ಟಾರ್ ಕಿಡ್ ಲಿಸ್ಟ್‌ ಸೇರಿರುವ ರಾಯನ್ ರಾಜ್‌ ಸರ್ಜಾ ಲೈಫ್‌ಸ್ಟೈಲ್‌, ಫೋಟೋ ಮತ್ತು ವಿಡಿಯೋ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.

'ಹಲವು ವರ್ಷಗಳೇ ಆಗಿತ್ತು ನಾನು ಮತ್ತು ನನ್ನ ಗರ್ಲ್‌ ಗ್ಯಾಂಗ್ ಜೊತೆ ಟ್ರಿಪ್ ಮಾಡಿ. ಟ್ರಿಪ್‌ಗೆ ಹೋಗಿದ್ದ ನಾವೆಲ್ಲರೂ ತಾಯಂದಿರು ಹೀಗಾಗಿ ಒಂದು ದೊಡ್ಡ ಬ್ರೇಕ್ ಅಗತ್ಯವಿತ್ತು. ಕಳೆದ ಬಾರಿ ನಾವು 2018ರಲ್ಲಿ ಬ್ಯಾಚುಲರ್ ಪಾರ್ಟಿ ಮಾಡಲು ಸಿಂಗಪೂರ್‌ಗೆ ಹೋಗಿದ್ದು. ಆದರೆ ಈ ಸಲ ಥೈಲ್ಯಾಂಡ್‌ ಹೋಗುವ ಪ್ಲ್ಯಾನ್ ಮಾಡಿದ ಕಾರಣವೇ ಚಿರು ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಅಲ್ಲಿ ಸೆಲೆಬ್ರೇಟ್ ಮಾಡಿದ್ದರು. ಚಿರು ಭೇಟಿ ಕೊಟ್ಟ ಸ್ಥಳಗಳಿಗೆ ಭೇಟಿ ಕೊಟ್ಟ ಪ್ರತಿ ಕ್ಷಣವನ್ನು ರೀ-ಕ್ರಿಯೇಟ್ ಮಾಡಿದೆವು' ಎಂದು ಮೇಘನಾ ರಾಜ್‌ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Actress Meghana Raj talks about her all girls trip and missing raayan raj vcs

'ಈ ಟ್ರಿಪ್‌ವೊಂದು ನಮಗೆ ಮೀ-ಟೈಂ ವೆಕೇಷ್ ಆಗಿತ್ತು ಇದೊಂದು ರೀತಿಯ ಥೆರಪಿ ಆಗಿತ್ತು. ನಾವೆಲ್ಲರೂ ಎರಡು ಸೂಟ್‌ ಕೇಸ್‌ ಹಿಡಿದುಕೊಂಡು ಹೋಗಿ ಹಿಂತಿರುಗಿ ಬರುವಾಗ ನಾಲ್ಕೈದು ಹಿಡಿದುಕೊಂಡು ಬಂದೆವು. ನಮ್ಮ ಚೆಕ್‌ಲಿಸ್ಟ್‌ನಲ್ಲಿ ಎರಡೇ ವಿಚಾರಗಳು ಒಳ್ಳೆಯ ಊಟ ಮತ್ತು ಕಣ್ಣು ತುಂಬಾ ನಿದ್ರೆ' ಎಂದು ಮೇಘನಾ ಹೇಳಿದ್ದಾರೆ. 

'ಮಕ್ಕಳ ಜೊತೆ ಮಲಗದೇ ಇರುವುದು ಒಂದ ರೀತಿ ನೆಮ್ಮದಿ ಕೊಡುತ್ತದೆ. ಮಕ್ಕಳು ಮಂಚದಿಂದ ಬೀಳುತ್ತಾರೆ ಆರಾಮ್ ಆಗಿದ್ದಾರಾ ಎದಿದ್ದಾರಾ ಎಂದು ಪದೇ ಪದೇ ನೋಡುವುದು ತಪ್ಪುತ್ತದೆ. ಏನೇ ಇರಲಿ ತಾಯಿ ತಾಯಿನೇ. ನಾವೆಲ್ಲರು ಮಕ್ಕಳನ್ನು ಮನೆಯಲ್ಲಿ ಬಿಟ್ಟಿರಬಹುದು ಆದರೆ ನಾವೆಲ್ಲ ಪದೇ ಪದೇ ಕರೆ ಮಾಡಿ ವಿಡಿಯೋ ಕಾಲ್ ಮಾಡಿ ಹೇಗಿದ್ದಾರೆ ಎಂದು ವಿಚಾರಿಸಿಕೊಳ್ಳುತ್ತಿದ್ದೆವು' ಎಂದು ಮಗನನ್ನು ಮಿಸ್ ಮಾಡಿಕೊಂಡ ಕ್ಷಣದ ಬಗ್ಗೆ ಹೇಳಿದ್ದಾರೆ.

Meghana Raj ಮಗನನ್ನು ಬಿಟ್ಟು ಮೋಜು-ಮಸ್ತಿ ಮಾಡ್ತಿದ್ದಾಳೆ ಎಂದವರಿಗೆ ಸುಂದರ್‌ ರಾಜ್‌ ತಿರುಗೇಟು

'ರಾಯನ್‌ ನನ್ನ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ. ನನ್ನ ತಾಯಿ ರಾಯನ್‌ ಜೊತೆಗಿದ್ದರೆ ಅವನು ಆರಾಮ್ ಆಗಿರುತ್ತಾರೆ. ವಿಡಿಯೋ ಕಾಲ್‌ನಲ್ಲಿ ನನ್ನ ಮುಖ ತೋರಿಸಲು ಹೆದರಿಕೊಳ್ಳುತ್ತಿದ್ದೆ. ನನ್ನ ಮುಖ ನೋಡಿದ ತಕ್ಷಣ ಅಮ್ಮ ಬೇಕು ಎಂದು ಹಠ ಮಾಡುತ್ತಾನೆ. ಹೀಗಾಗಿ ಕ್ಯಾಮೆರಾ ತೋರಿಸಿದೆ ರಾಯನ್‌ನ ನೋಡಿ ಮಾತನಾಡಿಸುವೆ. ರಾಯನ್‌ನಿಂದ ದೂರ ಉಳಿಯುವುದಕ್ಕೆ ತುಂಬಾನೇ ಎಮೋಷನಲ್‌ ಆಗುತ್ತದೆ. ಬೆಳ್ಳಂಬೆಳಗ್ಗೆ 3 ಗಂಟೆಗೆ ಮನೆಗೆ ತಲುಪಿದೆ  ಆನಂತರ ಶೂಟ್‌ ಇತ್ತು ಎಂದು ರೆಡಿಯಾಗಿ ಹೊರಟು ಬಿಟ್ಟೆ ರಾಯನ್‌ನ ಮಾತನಾಡಿಸಿರಲಿಲ್ಲ. ಸಂಜೆವರೆಗೂ ಕಾಯುವಷ್ಟು ತಾಳ್ಮೆ ನನಗೆ ಇರಲಿಲ್ಲ ಹೀಗಾಗಿ ಮಗನನ್ನು ಕರೆದುಕೊಂಡು ಸೆಟ್‌ಗೆ ಬರಲು ಅಮ್ಮನಿಗೆ ಹೇಳಿದೆ. ನನ್ನನ್ನು ನೋಡಿ ಓಡಿ ಓಡಿ ಬಂದ ನಾನು ಓಡಿ ಓಡಿ ಹೋದೆ ಆ ಕ್ಷಣ ಮರೆಯಲು ಆಗುವುದಿಲ್ಲ.  ತುಂಬಾ ಫಿಲ್ಮಿ ಆಗಿತ್ತು. ಈ ಟ್ರಿಪ್‌ನಿಂದ ನನ್ನ ಮನಸ್ಸಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಈ ರೀತಿ ಟ್ರಿಪ್ ಮಾಡುವಂತೆ ನನ್ನ ತಾಯಿಗೂ ಹೇಳುತ್ತಿರುವೆ. ರಾಯನ್ ಮತ್ತು ನನ್ನನ್ನು ನೋಡಿಕೊಂಡು ಅವರಿಗೂ ಕಷ್ಟ ಆಗಿರುತ್ತದೆ. ಪ್ರತಿಯೊಬ್ಬ ತಾಯಿಗೂ ಬ್ರೇಕ್ ಬೇಕು' ಎಂದಿದ್ದಾರೆ ಮೇಘನಾ

Follow Us:
Download App:
  • android
  • ios