ನಟಿ ಮೇಘನಾ ರಾಜ್​ ತಮಗೆ ಯಾವ ಆಹಾರ ಇಷ್ಟ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಮೂರು ಹೊತ್ತು ಬೇಕಿದ್ರೆ ಇದಿಷ್ಟನ್ನೇ ತಿಂತೇನೆ ಎನ್ನುವ ನಟಿಗೆ ಇಷ್ಟ ಏನು? 

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಷಗಳ ಬಳಿಕ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ ಮೇಘನಾ ರಾಜ್‌. ಕಮ್ ಬ್ಯಾಕ್ ಸಿನಿಮಾ ' ತತ್ಸಮ ತದ್ಭವ' ಅದ್ಭುತ ಪ್ರತಿಕಿಯೆ ಪಡೆದಿದ್ದು, ಮೇಘನಾ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ ಅಲ್ಲದೆ ಸೂಪರ್ ಮಾಮ್ ಎನ್ನು ಕಿರೀಟ ಕೊಟ್ಟಿದ್ದಾರೆ ಫ್ಯಾನ್ಸ್. 


ನಟಿ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಆಗಾಗ್ಗೆ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮಗೆ ಯಾವ ಆಹಾರ ಇಷ್ಟ ಎನ್ನುವುದನ್ನು ಹೇಳಿದ್ದಾರೆ. ಮೊಸರನ್ನ, ಉಪ್ಪಿನಕಾಯಿ ಮತ್ತು ಚಿಕನ್​ ಇಷ್ಟು ಇದ್ದರೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಟೈಂನಲ್ಲಿಯೂ ಇದರಲ್ಲಿಯೇ ಊಟ ಮಾಡುವುದಾಗಿ ಹೇಳಿದ್ದಾರೆ. ಇಷ್ಟು ಇದ್ದರೆ ತಮಗೆ ಏನೂ ಬೇಡ, ಮೂರು ಹೊತ್ತೂ ಇದನ್ನೇ ಬೇಕಿದ್ದರೆ ತಿನ್ನುತ್ತೇನೆ ಎಂದಿದ್ದಾರೆ.

ಸ್ಟ್ರಾಬೆರ್ರಿ ಚೊಕೊಲೇಟ್​ ಕೇಕ್​ ಮಾಡುವುದನ್ನು ಕಲಿಸಿಕೊಡುತ್ತಿದ್ದಾರೆ ಸ್ಯಾಂಡಲ್​ವುಡ್​​ ನಟಿ ಮೇಘನಾ ರಾಜ್​

ಕೆಲ ದಿನಗಳ ಹಿಂದೆ ತಮ್ಮ ರುಟೀನ್​ ವರ್ಕ್​ ಕುರಿತು ನಟಿ ಮಾತನಾಡಿದ್ದರು. ಶೂಟಿಂಗ್​ ಮುಗಿದ ಮೇಲೆ ಮನೆಗೆ ಬಂದು ಮೊದಲನೆಯ ಕೆಲಸ ಮೇಕಪ್​ ತೆಗೆಯುವುದು. ಪ್ರತಿಯೊಬ್ಬರು ಈ ಕೆಲಸವನ್ನು ಮಾಡಲೇಬೇಕು. ಮೇಕಪ್​ ಅನ್ನು ಮುಖದ ಮೇಲಿನಿಂದ ಸಂಪೂರ್ಣವಾಗಿ ತೆಗೆದ ಮೇಲಷ್ಟೇ ಮಲಗಿಕೊಳ್ಳಬೇಕು. ಇಲ್ಲದಿದ್ದರೆ ಚರ್ಮಕ್ಕೆ ಹಾನಿಯಾಗುತ್ತದೆ ಎಂದಿರುವ ನಟಿ, ಈ ಮೇಕಪ್​ ತೆಗೆಯಲು ತಾವು ಅನುಸರಿಸುವ ಕ್ರಮಗಳ ಬಗ್ಗೆ ಹೇಳಿದ್ದರು. ಇದಕ್ಕೂ ಮುನ್ನ, ಮನೆಗೆ ಬಂದ ತಕ್ಷಣ ಕನ್​ಫರ್ಟ್​ ಎನಿಸುವ ಬಟ್ಟೆ ಹಾಕಬೇಕು ಎನ್ನುವುದು ಮೇಘನಾ ಅವರ ಸಲಹೆ. 

ನಂತರ ಟಿ.ವಿ ನೋಡಿ, ಮ್ಯೂಸಿಕ್​ ಕೇಳುವುದು ಹಾಗೂ ನಾಳೆಗೆ ಏನು ಮಾಡಬೇಕು ಎನ್ನುವ ಲಿಸ್ಟ್​ ಮಾಡಿ ಮಲಗೋದು ಎಂದು ನಟಿ ಹೇಳಿದ್ದರು. ಇದೇ ವೇಳೆ ರಾಯನ್​ ಮನೆಯಲ್ಲಾ ಚೆಲ್ಲಾಪಿಲ್ಲಿಯಾಗಿ ವಸ್ತುಗಳನ್ನು ಹರಡಿ ಇಡುವುದನ್ನು ಸರಿ ಮಾಡುವುದೇ ದೊಡ್ಡ ಸವಾಲಿನ ಕೆಲಸದ ಜೊತೆಗೆ ಅದಕ್ಕೂ ಸಾಕಷ್ಟು ವೇಳೆ ಮೀಸಲು ಇಡುತ್ತೇನೆ ಎಂದಿದ್ದರು. ಕೇವಲ 3 ವರ್ಷದ ರಾಯನ್‌ ಈಗಷ್ಟೇ ಸ್ಕೂಲ್‌ಗೆ ಕಾಲಿಟ್ಟಿದ್ದಾನೆ. ಸಿನಿಮಾ, ಕಿರುತೆರೆ ಮತ್ತು ಮಗ-ಮನೆ ಎಲ್ಲವೂ ಮೇಘನಾ ಮ್ಯಾನೇಜ್ ಮಾಡುತ್ತಿರುವುದಕ್ಕೆ ಸೂಪರ್ ಮಾಮ್ ಅಂತಾರೆ ಫ್ಯಾನ್ಸ್‌. ರಾಯನ್ ರಾಜ್ ಸರ್ಜಾ ಯಾವತ್ತೂ ಅಪ್ಪ ಅಂತ ಕೇಳಿಲ್ಲ. ಹೀಗಾಗಿ ಸಮಾಧಾನ ಮಾಡುವ ಅಗತ್ಯ ಬಂದಿಲ್ಲ ಎಂದು ಮೇಘನಾ ಈಚೆಗೆ ಹೇಳಿದ್ದರು. ಅಪ್ಪನ ಬಗ್ಗೆ ರಾಯನ್​ ಕೇಳುತ್ತಾನಾ ಎನ್ನುವ ಪ್ರಶ್ನೆಗೆ ಅವರು ಹೀಗೆ ಉತ್ತರ ಕೊಟ್ಟಿದ್ದರು. 

ಚಿರು ಪುತ್ರನ ಡ್ಯಾನ್ಸ್‌ಗೆ ಮನಸೋತ ನೆಟ್ಟಿಗರು: ಭವಿಷ್ಯದ ಸ್ಟಾರ್‌ ನಟ ಫಿಕ್ಸ್‌ ಎಂದ ಫ್ಯಾನ್ಸ್‌

View post on Instagram