ವಿಶಿಷ್ಟ ಅನುಭವವೊಂದನ್ನು ಹಂಚಿಕೊಂಡಿದ್ದಾರೆ ನಟಿ ಮೇಘನಾ ಗಾಂವ್ಕರ್ | ಈ ವ್ಯಕ್ತಿಯ ಕೆಲಸಕ್ಕೆ ಭೇಷ್ ಎನ್ನಲೇಬೇಕು! ಏನಿದು ಇಂಟರೆಸ್ಟಿಂಗ್ ಸ್ಟೋರಿ? ಇಲ್ಲಿದೆ ನೋಡಿ. 

ಬೆಂಗಳೂರಿನಂತಹ ಮಹಾನಗರಿಯಲ್ಲಿ ಎಲ್ಲವೂ ಅಪರಿಚಿತ ಮುಖಗಳೇ. ನಂಬಿಕೆ, ವಿಶ್ವಾಸಗಳು ಸ್ವಲ್ಪ ಕಡಿಮೆ. ಯಾರು, ಯಾರಿಗೂ ಸಂಬಂಧವೇ ಇಲ್ಲ ಎನ್ನುವಂತೆ ಬದುಕುವವರೇ ಜಾಸ್ತಿ. ಆದರೂ ಅಲ್ಲೊಬ್ಬರು, ಇಲ್ಲೊಬ್ಬರು ಒಳ್ಳೆಯವರು ಸಿಗುತ್ತಾರೆ. ನಮ್ಮೊಳಗೆ ಇರುವ ರಿಯಲ್ ಹೀರೋ ಒಬ್ಬರನ್ನು ಮೇಘನಾ ಗಾಂವ್ಕರ್ ಪರಿಚಯಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

View post on Instagram

ಮೇಘನಾ ಕಾರು ಪಾರ್ಕ್ ಮಾಡಿ ಸಿನಿಮಾಗೆ ಹೋಗಿದ್ದರು. ವಾಪಸ್ ಬರುವಾಗ ತಡರಾತ್ರಿಯಾಗಿತ್ತು. ವಾಪಸ್ ಬಂದು ನೋಡಿದರೆ ಕಾರ್ ಪಾರ್ಕಿಂಗ್ ನಲ್ಲಿ ಕೆಲಸ ಮಾಡುವ ವ್ಯಕ್ತಿ ಅಲ್ಲಿಯೇ ನಿಂತಿದ್ದರು. ಯಾಕೆಂದು ವಿಚಾರಿಸಿದಾಗ ಕಾರ್ ಕಿಟಕಿಯನ್ನು ಸರಿಯಾಗಿ ಮುಚ್ಚದೇ ಹೋಗಿಲ್ಲವೆಂದು ತಿಳಿದು ಬಂದಿದೆ. ಕಾರಿನಲ್ಲಿರುವ ವಸ್ತುವನ್ನು ಕಳ್ಳರು ತೆಗೆಯಬಾರದೆಂದು ಕಾಯುತ್ತಾ ನಿಂತಿದ್ದರು ಆ ವ್ಯಕ್ತಿ. ಆ ವ್ಯಕ್ತಿಯ ಪ್ರಾಮಾಣಿಕತೆಗೆ ಮೇಘನಾ ಖುಷಿಯಾಗಿ ಅವರ ಜೊತೆ ಫೋಟೋ ತೆಗೆದುಕೊಂಡು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ.