ಹೊಟ್ಟೆ ಹಿಡಿದು ನಗಿಸುವಂತೆ ಸಿನಿಮಾ 'ಸಖತ್', ಡಬ್ಬಿಂಗ್ ಬಗ್ಗೆ ಅಪ್ಡೇಟ್ ನೀಡಿದ ನಟಿ ಮಾಳವಿಕಾ.

ಕನ್ನಡ ಚಿತ್ರರಂಗದ ಸಿಂಪಲ್ ಡೈರೆಕ್ಟರ್ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಖತ್ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಸಖತ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟಿ ಮಾಳವಿಕಾ ಇತ್ತೀಚಿಗೆ ಡಬ್ಬಿಂಗ್ ಮುಗಿಸಿದ್ದಾರೆ. 'ಸಿಂಪಲ್ ಹುಡುಗಿ ಸಖತ್ ಸಿನಿಮಾ ಗಣೇಶ್ ಹೊಟ್ಟೆ ತುಂಬಾ ನಗಿಸುವುದು ಗ್ಯಾರಂಟಿ. ನೆಲದ ಮೇಲೆ ಉರುಳಾಡಿ ಉರುಳಾಡಿ ನಗುತ್ತೀರಿ' ಎಂದು ನಟಿ ಮಾಳವಿಕಾ ಸ್ಟುಡಿಯೋದಿಂದ ಪೋಟೋ ಹಂಚಿಕೊಂಡಿದ್ದಾರೆ. 

ನಟಿ ಸುಧಾರಾಣಿ ಹುಟ್ಟು ಹಬ್ಬಕ್ಕೆ ಬಿಗ್ ಸರ್ಪ್ರೈಸ್ ನೀಡಿದ ಶ್ರುತಿ, ಮಾಳವಿಕಾ!

ಮಾಳವಿಕಾ ಅವರ ಪಾತ್ರದ ಬಗ್ಗೆ ಎಲ್ಲಿಯೂ ರಿವೀಲ್ ಆಗಿಲ್ಲ. ಕೆಜಿಎಫ್ ಚಾಪ್ಟರ್ 1ರಲ್ಲಿ ಮಾಳವಿಕಾ ಕಾಣಿಸಿಕೊಂಡ ನಂತರ ಚಾಪ್ಟರ್ 2ರಲ್ಲೂ ಅವರ ಪಾತ್ರದ ಬಗ್ಗೆ ಸಿನಿಮಾ ರಸಿಕರಿಗೆ ಕುತೂಹಲವಿದೆ. ಸಿನಿಮಾ ರಂಗ ಹಾಗೂ ರಾಜಕೀಯ ಎರಡನ್ನೂ ಸಮವಾಗಿ ನಿಭಾಯಿಸುತ್ತಿದ್ದಾರೆ. ಟಿ. ಎನ್ ಸೀತಾರಾಮ್ ನಿರ್ದೇಶನ ಮಾಡುತ್ತಿರುವ ಮತ್ತೆ ಮನ್ವಂತರ ಧಾರಾವಾಹಿಯಲ್ಲಿ ಮಾಳವಿಕಾ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು ಮುಂದಿನ ತಿಂಗಳು ಪ್ರಸಾರವಾಗುವ ನಿರೀಕ್ಷೆ ಇದೆ.