Asianet Suvarna News Asianet Suvarna News

ನಟ ಪುನೀತ್‌ ರಾಜ್‌ಕುಮಾರ್‌ಗೆ ಯಾರು ಬೆಸ್ಟ್ ಪೇರ್? ಈ ಲಿಸ್ಟ್‌ನಲ್ಲಿರೋ ಹಿರೋಯಿನ್‌ಗಳೆಲ್ಲರೂ ರಿಜೆಕ್ಟ್ ಆಗಿದ್ಯಾಕೆ?

ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅವರಿಗೆ ಸಿನಿ ಪಯಣದಲ್ಲಿ ಯಾರು ಬೆಸ್ಟ್‌ ಪೇರ್ ಹೀರೋಯಿನ್‌ ಎಂದು ಕೇಳಿದರೆ, ಅಭಿಮಾನಿಯೊಬ್ಬ ಲಿಸ್ಟ್‌ನಲ್ಲಿರುವವರನ್ನು ರಿಜೆಕ್ಟ್‌ ಮಾಡಿ ಎಲ್ಲರೂ ಮೆಚ್ಚುವ ಉತ್ತರ ಕೊಟ್ಟಿದ್ದಾನೆ. 

Actress Bhavana Ramya and Rakshita Who is the best pair to Power star Puneeth RajKumar sat
Author
First Published Feb 24, 2024, 6:22 PM IST

ಬೆಂಗಳೂರು (ಫೆ.24): ಕನ್ನಡ ಚಿತ್ರರಂಗದ ನಗುಮುಖದ ಒಡೆಯ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರಿಗೆ ಅಭಿಮಾನಿ ಆಗದವರೇ ಇಲ್ಲ. ಇನ್ನು ಅವರ ಪ್ರತಿ ಸಿನಿಮಾದಲ್ಲಿ ಡ್ಯಾನ್ಸ್‌ಗೇನೂ ಕೊರತೆ ಇರುತ್ತಿರಲಿಲ್ಲ. ಆದರೆ, ಪುನೀತ್‌ ಚಿತ್ರರಂಗದ ಜರ್ನಿಯಲ್ಲಿ ಯಾರು ಬೆಸ್ಟ್‌ ಪೇರ್ ಎಂಬುದನ್ನು ನೋಡಿದರೆ ಈ ನಾಲ್ಕು ಹೀರೋಯಿನ್‌ಗಳು ಮುನ್ನೆಲೆಗೆ ಬರುತ್ತಾರೆ. ಆದರೆ, ಈ ಎಲ್ಲ ಹೀರೋಯಿನ್‌ಗಳನ್ನು ಅಭಿಮಾನಿಗಳು ರಿಜೆಕ್ಟ್ ಮಾಡಿ ಬೀಸಾಡಿದ್ದಾರೆ.

ದೊಡ್ಡ ಮನೆಯ ಕುಡಿ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ, ನಂತರ ನಾಯಕನಾಗಿ ಕನ್ನಡಿಗರನ್ನು ರಂಜಿಸಿದ್ದಾರೆ. ಬಾಲನಟನಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದ ಪುನೀತ್ ಅವರು ನಾಯಕನಾದ ನಂತರವೂ ಅದೇ ನಟನೆಯನ್ನು ಮುಂದುವರೆಸಿದ್ದರು. ಆದರೆ, ಬಾಲನಟನೆಗೂ ಹಾಗೂ ನಾಯಕನಿಗೂ ಏನೇನು ವ್ಯತ್ಯಾಸ ಇರಬೇಕು. ನಾಯಕನಾಗಲು ಯಾವ ಅರ್ಹತೆಗಳು ಇರಬೇಕು ಅವೆಲ್ಲವನ್ನೂ ಮೈಗೂಡಿಸಿಕೊಂಡೇ ಸಿನಿಮಾ ಕ್ಷೇತ್ರಕ್ಕೆ ಮರಳಿ ಕಾಲಿಟ್ಟರು. ಪುನೀತ್ ರಾಜ್‌ಕುಮಾರ್ ಹೀರೋ ಆಗಿ ನಟಿಸಿದ ಮೇಲಂತೂ ಅವರ ಅಭಿಮಾನಿಗಳ ಬಳಗ ತುಂಬಾ ದೊಡ್ಡದಾಗಿ ಬೆಳೆಯಿತು.

ನಂತರ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ನಡೆಸಿಕೊಡಲು ಬಂದ ನಂತರ ಅವರಿಗೆ ಅಭಿಮಾನಿಯಾಗದ ವ್ಯಕ್ತಿಯೇ ಇಲ್ಲವೆಂದು ಹೇಳಬಹುದು. ಆದರೆ, ಅವರ ಇಡೀ ಚಿತ್ರರಂಗದ ಜರ್ನಿಯಲ್ಲಿ ರಾಜಕುಮಾರ ಸಿನಿಮಾ ಮಾಡಿದ ನಂತರ ಇಡೀ ನಾಡೇ ಅವರನ್ನು ಕೊಂಡಾಡಿತು. ಅವರ ನಟನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು. ಇಲ್ಲಿ ಮುಖ್ಯವಾಗಿ ರಾಜಕುಮಾರ ಸಿನಿಮಾದ ಶೈಲಿಯಲ್ಲಿಯೇ ಪುನೀತ್‌ ರಾಜ್‌ ಕುಮಾರ್ ನೈಜ ಜೀವನದಲ್ಲಿಯೂ ಅನಾಥಾಶ್ರಮ ನಡೆಸುತ್ತಾ, ಬಾಲಕಿಯರ ಹಾಸ್ಟೆಲ್ ನಡೆಸುತ್ತಿದ್ದರು ಎಂಬುದು ಗೊತ್ತೇ ಇರಲಿಲ್ಲ.

ಇನ್ನು ಪುನೀತ್ ರಾಜ್‌ಕುಮಾರ್ ಅವರು ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಬಲಿಯಾದ ನಂತರ ಇಡೀ ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿಯಿತು. ಆದರೆ, ಪುನೀತ್‌ ರಾಜ್ ಕುಮಾರ್ ಅವರು ಈಗಲೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿಯೇ ಇದ್ದಾರೆ. ಅವರ ಸಿನಿಮಾಗಳು, ಹಾಡುಗಳು ಹಾಗೂ ಅಭಿಮಾನಿಗಳ ನಿರಂತರ ಸೇವೆಗಳಿಂದಾಗಿ ಪುನೀತ್‌ ರಾಜ್‌ಕುಮಾರ್ ನಮ್ಮೊಂದಿಗೆ ಸದಾ ಜೀವಂತವಾಗಿದ್ದಾರೇನೋ ಎನಿಸುತ್ತದೆ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಪುನೀತ್‌ ರಾಜ್‌ಕುಮಾರ್ ಸಂಗತಿಗಳು ಮರುಕಳಿಸುತ್ತಲೇ ಇರುತ್ತವೆ.

ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಮ್‌ನ ನಮ್ಮ ಸ್ಯಾಂಡಲ್‌ವುಡ್‌ ಎಂಬ ಖಾತೆಯಲ್ಲಿ ನಮ್ಮ ಪವರ್‌ ಸ್ಟಾರ್‌ ಅಪ್ಪು ಅವರಿಗೆ ಈ ಲಿಸ್ಟ್‌ನಲ್ಲಿ ಇರುವ ಯಾವ ಹಿರೋಯಿನ್‌ಗಳು ಬೆಸ್ಟ್‌ ಪೇರ್ ಎಂದು ಪ್ರಶ್ನೆ ಮಾಡಿದ್ದಾರೆ. ಈ ಲಿಸ್ಟ್‌ನಲ್ಲಿ ರಮ್ಯಾ, ರಕ್ಷಿತಾ, ಭಾವನಾ ಹಾಗೂ ಪ್ರಿಯಾಮಣಿ ಹೆಸರು ಸೂಚಿಸಲಾಗಿದೆ. ಈ ಪ್ರಶ್ನೆಗೆ ಕಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡಿದ ಅಭಿಮಾನಿಯೊಬ್ಬ ಈ ನಾಲ್ವರು ಹೀರೋಯಿನ್‌ಗಳನ್ನು ರಿಜೆಕ್ಟ್‌ ಮಾಡಿದ್ದಾನೆ. ಜೊತೆಗೆ, ಯಾವ ಹಿರೋಯಿನ್‌ಗಳ ಹೆಸರನ್ನೂ ತೆಗೆದುಕೊಳ್ಳದೇ ಪುನೀತ್‌ ರಾಜ್‌ ಕುಮಾರ್ ಅವರ ಪತ್ನಿ ಅಶ್ವಿನಿ ಅವರೇ ಬೆಸ್ಟ್‌ ಪೇರ್ ಎಂದು ಕಮೆಂಟ್ ಮಾಡಿದ್ದಾನೆ. ಅವರ ಕಮೆಂಟ್‌ಗೆ ಅತಿಹೆಚ್ಚು ಲೈಕ್‌ಗಳು ಕೂಡ ಬಂದಿವೆ.

Follow Us:
Download App:
  • android
  • ios