ಬೆಂಗಳೂರು (ಏ. 17):  ನಟಿ ಅಶ್ವಿನಿ ಗೌಡ ಈಗ ನಿರ್ಮಾಪಕಿ ಆಗುತ್ತಿದ್ದಾರೆ. ‘ವಾರಸ್ದಾರ’ ಚಿತ್ರದ ಮೂಲಕ ನಾಯಕಿ ನಟಿಯಾಗಿ ಚಿತ್ರರಂಗಕ್ಕೆ ಪರಿಚಯಗೊಂಡವರು. ಆ ನಂತರ ಒಂದಿಷ್ಟುಸಿನಿಮಾಗಳಲ್ಲಿ ನಟಿಸುತ್ತಲೇ ಮದುವೆ ಮಾಡಿಕೊಂಡು ಬಣ್ಣದ ಜಗತ್ತಿನಿಂದ ಕೊಂಚ ದೂರವಾದವರು ಮತ್ತೆ ಪತ್ತೆಯಾಗಿದ್ದು ಕಿರುತೆರೆಯಲ್ಲಿ.

ಸಿನಿಮಾ ಮತ್ತು ಕಿರುತೆರೆಯಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ನಟನೆಗೆ ಮರಳಿ ಬಂದರು. ಸದ್ಯ ಪದ್ಮಾವತಿ, ಕಾವೇರಿ, ಮರಳಿ ಬಂದಳು ಸೀತೆ, ಮೇಘಾ ಮುಂತಾದ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. 40 ಸಿನಿಮಾ, 15ಕ್ಕೂ ಹೆಚ್ಚು ಧಾರಾವಾಹಿಗಳ ನಟನೆಯ ಅನುಭವದಿಂದ ಈಗ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.

ತನ್ನಂತೆಯೇ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭಾವಂತರಿಗೆ ಹಾಗೂ ಹಿರಿಯ ಕಲಾವಿದರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಡಾ ರಾಜ್‌ಕುಮಾರ್‌ ಪುಣ್ಯತಿಥಿಯಂದು ‘ಎಎಂಜಿ’ ಹೆಸರಿನ ಪ್ರೊಡಕ್ಷನ್‌ ಸಂಸ್ಥೆಯನ್ನು ಆರಂಭಿಸಿದ್ದಾರೆ.

ರಾಹುಲ್ ಐ ಲವ್ ಯು ಎಂದ ರೂಪದರ್ಶಿ..ಫುಲ್ ವೈರಲ್

‘ನಾನು ಚಿತ್ರರಂಗಕ್ಕೆ ಬಂದಾಗ ಸಾಕಷ್ಟುಕಷ್ಟಗಳನ್ನು ಅನುಭವಿಸಿದೆ. ಅವಕಾಶಕ್ಕಾಗಿ ಅಲೆಯುವ ಪ್ರತಿಭಾವಂತರನ್ನು ನೋಡಿದ್ದೇನೆ. ಅವರನ್ನು ಗುರುತಿಸಬೇಕು ಎನ್ನುವುದು ನನ್ನ ಆಸೆ. ಅದನ್ನ ನಾನೇ ಯಾಕೆ ಮಾಡಬಾರದು ಎಂದುಕೊಂಡು ನಿರ್ಮಾಣ ಸಂಸ್ಥೆ ಆರಂಭಿಸಿರುವೆ. ಕೇವಲ ಸಿನಿಮಾ ಮಾತ್ರವಲ್ಲ, ಧಾರಾವಾಹಿಗಳನ್ನು ನಿರ್ಮಿಸುವ ಯೋಜನೆ ಇದೆ. ಮನುಗೌಡ ಸಾರಥ್ಯದ ಬಾಸ್‌ ಅಸೋಸಿಯೇಟ್ಸ್‌ ಸಂಸ್ಥೆ ಕೂಡ ನನ್ನ ಜತೆ ಸಾಥ್‌ ನೀಡಿದ್ದು, ಸಿನಿಮಾ ನಿರ್ಮಾಣಕ್ಕೆ ಮತ್ತಷ್ಟುಉತ್ಸಾಹ ತುಂಬಿದೆ’ ಎನ್ನುತ್ತಾರೆ ಅಶ್ವಿನಿ ಗೌಡ.

ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಪೊಲೀಸ್!

ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು, ರಾಘವೇಂದ್ರರಾಜ್‌ಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಟಿ.ಎ.ನಾರಾಯಣಗೌಡ, ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಬಾ.ಮ.ಹರೀಶ್‌, ನಟ ಗುರುದತ್‌, ಗಣೇಶ್‌ರಾವ್‌ ಮುಂತಾದವರು ಅಶ್ವಿನಿ ಗೌಡ ನಿರ್ಮಾಣ ಸಂಸ್ಥೆಗೆ ಶುಭ ಕೋರಿದ್ದಾರೆ.