ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಅಭಿನಯದ ಚೊಚ್ಚಲ ಚಿತ್ರ. ಯುವ ಪ್ರತಿಭೆ ಸಿದ್ದಾರ್ಥ್ ಮರೆದೆಪ್ಪ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಶಿವಾನಂದ ಹಾಗೂ ಕೃಷ್ಣ ಮೂರ್ತಿ ಇದರ ನಿರ್ಮಾಪಕರು. ಸದ್ಯಕ್ಕೀಗ ಈ ಚಿತ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಅಪೂರ್ವ ಹೊಸ ಅವಕಾಶಗಳತ್ತಲೂ ಮುಖ ಮಾಡಿದ್ದಾರೆ. ಅದಕ್ಕಾಗಿಯೇ ಈಗ ಚೆಂದದೊಂದು ಫೋಟೋ ಶೂಟ್ ಮಾಡಿಸಿ, ಹೊಸ ಲುಕ್‌ನಲ್ಲಿ ಮಿಚುತ್ತಿದ್ದಾರೆ.

‘ನಟ-ನಟಿಯರು ಹೊಸದಾಗಿ ಪೋಟೋಶೂಟ್ ಮಾಡಿಸಿದಾಗ ಹೊಸ ಅವಕಾಶಗಳಿಗಾಗಿಯೇ ಮಾಡಿಸಿದ್ದುಅಂತಂದುಕೊಳ್ಳುವುದು ಸರ್ವೇ ಸಾಮಾನ್ಯ. ಅದರಾಚೆ ಪ್ರೊಫೈಲ್‌ಗೂ ಇರಲಿ ಅಂತಲೂ ನಟ-ನಟಿಯರು ಫೋಟೋಶೂಟ್ ಮಾಡಿಸುತ್ತಾರೆನ್ನುವುದು ಕೂಡ ಸತ್ಯ. ನನಗೆ ಅಂತಹದೊಂದು ಪ್ರೊಫೈಲ್‌ಗೂ ಬೇಕಿತ್ತು, ಜತೆಗೆ ಹೊಸದೊಂದು ಚಿತ್ರಕ್ಕೂ ಬೇಕಿತ್ತು. ಹಾಗಾಗಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇಷ್ಟರಲ್ಲೇ ಆ ಸಿನಿಮಾ ಯಾವುದು ಎನ್ನುವುದು ಬಹಿರಂಗವಾಗಲಿದೆ. ಅದಿನ್ನು ಮಾತುಕತೆ ಹಂತದಲ್ಲಿದೆ’ಎನ್ನುತ್ತಾರೆ ನಟಿ ಅಪೂರ್ವ.

ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಹಾಗಂತ ಸಿಕ್ಕ ಅವಕಾಶಗಳನ್ನು ಒಪ್ಪಿಕೊಂಡು ಅಭಿನಯಸಬೇಕು ಎನ್ನುವ ಸಿದ್ಧಾಂತ ನಂದಲ್ಲ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಸಿಗಬೇಕು, ಆ ಪಾತ್ರಗಳು ಪ್ರೇಕ್ಷಕರಿಗೂ ಇಷ್ಟ ಆಗಬೇಕು. ಎಷ್ಟು ಸಿನಿಮಾಗಳು ಎನ್ನುವ ಲೆಕ್ಕಕ್ಕಿಂತ ಎಂತಹ ಸಿನಿಮಾ ಮಾಡಿದ್ದೇನೆ ಎನ್ನುವುದು ಮುಖ್ಯವಾಗಬೇಕು.- ಅಪೂರ್ವ