ನಟಿ ಅನುಪಮ ಪರಮೇಶ್ವರನ್  ಖಾತೆ ಹ್ಯಾಕ್‌ ಮಾಡಿದ ಪಡ್ಡೆ ಹುಡುಗರು. ಎಡಿಟ್‌ ಮಾಡಿದ ಫೋಟೋ ಶೇರ್‌ ಮಾಡುತ್ತಿರುವವರಿಗೆ ಕ್ಲಾಸ್‌ ತೆಗೆದುಕೊಂಡ ನಟಿ. 

'ನಟಸಾರ್ವಭೌಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮುದ್ದು ಮುಖದ ಚೆಲುವೆ ಅನುಪಮ ಪರಮೇಶ್ವರನ್ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅಪ್ಪುಗೆ ಜೋಡಿಯಾಗಿ ಕಾಣಿಸಿಕೊಂಡಾಗಿನಿಂದಲ್ಲೂ ಈಕೆ ಸ್ಟೇಟ್‌ ಕ್ರಶ್‌ ಆಗಿದ್ದಾರೆ. ಇತ್ತೀಚಿಗೆ ಕ್ರಿಕೆಟಿಗನ ಜೊತೆಯೂ ಗಾಸಿಪ್‌ ಕೇಳಿ ಬರುತ್ತಿತು.

ವಿಶ್ವದ ನಂ.1 ಬೌಲರ್ ಈ ನಟಿಗೆ ಕ್ಲೀನ್ ಬೋಲ್ಡ್? ಇಲ್ಲಿವೆ ಫೋಟೋಸ್!

 ಶಾಂತ ಜೀವಿ ಹುಡುಗಿಯನ್ನು ರೌದ್ರ ಅವತಾರಕ್ಕೆ ಕೆರಳಿಸಿದವರು ಯಾರು?

ಅನುಪಮ ಪರಮೇಶ್ವರನ್ ಖಾತೆಯಲ್ಲಿ ಹಳೆಯ ಫೋಟೋವನ್ನು ತೆಗೆದುಕೊಂಡು ಬೇರೊಂದು ಚಿತ್ರಕ್ಕೆ ಅಂಟಿಸಿದ್ದಾರೆ. ತಿದ್ದಿರುವ ಫೋಟೋ ಕೊಂಚ ಗ್ಲಾಮರಸ್ ಆಗಿದ್ದು ಅನು ಅವರಿಗೆ ಕೋಪ ತರಿಸಿದೆ. 

ಅನುಪಮ ಪರಮೇಶ್ವರನ್ ಚಿತ್ರರಂಗದಲ್ಲಿ ಸಿಂಪಲ್‌ ಹಾಗೂ ಡೀಸೆಂಟ್‌ ಹುಡುಗಿಯಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ಯಾವ ಚಿತ್ರದಲ್ಲೂ ಗ್ಲಾಮರಸ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಈ ಫೋಟೋ ಅನುಪಮಾ ಅವರ ಗಮನಕ್ಕೆ ಬಂದ ಕೂಡಲೇ ಇನ್‌ಸ್ಟಾಗ್ರಾಂ ಫೀಡ್‌ನಲ್ಲಿ 'Fake obviously' ಎಂದು ಬರೆದುಕೊಂಡಿದ್ದಾರೆ. 

ಅನುಪಮಾ ಸ್ಟೇಟ್‌ ಕ್ರಶ್‌ ಆಗಿರುವ ಕಾರಣ ಅಭಿಮಾನಿಗಳು ಅವರ ಹೆಸರಿನಲ್ಲಿ ಅನೇಕ ಫ್ಯಾನ್‌ ಪೇಜ್‌ ತೆರೆದಿದ್ದಾರೆ. ಫ್ಯಾನ್‌ ಪೇಜ್‌ನಲ್ಲಿ ಅಭಿಮಾನಿಗಳು ಕೂಡ ಶೇರ್ ಮಾಡಿಕೊಂಡು ಈ ರೀತಿ ಎಡಿಟ್‌ ಮಾಡಿದವರ ಮೇಲೆ ಗರಂ ಆಗಿದ್ದಾರೆ.