ಸ್ಯಾಂಡಲ್‌ವುಡ್‌ ಒನ್ ಆ್ಯಂಡ್ ಓನ್ಲಿ ಗೋಲ್ಡನ್‌ ಕ್ವೀನ್‌ ಅಮೂಲ್ಯ ಹಾಗೂ ಪತಿ ಜಗದೀಶ್‌ ಸಹ ಕೊರೋನಾ ವೈರಸ್ ವಿರುದ್ಧದ ಯುದ್ಧಕ್ಕೆ ಕೈ ಜೋಡಿಸಿದ್ದಾರೆ. ರೋಗ ಹರಡುವ ಭಯದಿಂದ ಇಡೀ ಭಾರತವೇ ಲಾಕ್‌ಡೌನ್ ಆಗಿದ್ದು, ಉದ್ಯೋಗವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ನಿರ್ಗತಿಕರು, ದಿನಗೂಲಿ ನೌಕರರ ಸಹಾಯಕ್ಕೆ ಈ ತಾರಾ ಜೋಡಿ ಮುಂದಾಗಿದೆ.

ಸಿಕ್ಕಾಪಟ್ಟೆ ಸ್ಲಿಮ್ ಆಗಿರೋ ಗೋಲ್ಡನ್ ಕ್ವೀನ್ ಹೇಗ್ ಕಾಣತ್ತಾರೆ ನೋಡಿ!

ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಜಗದೀಶ್‌ ಹಾಗೂ ಪತ್ನಿ ಅಮೂಲ್ಯ ಸುಮಾರು 1 ಟನ್‌ ಅಕ್ಕಿ ನೀಡಿದ್ದಾರೆ. ಈ ವಿಚಾರವನ್ನು ಬಗ್ಗೆ ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಮೂಲಕ ಹಂಚಿಕೊಂಡಿದ್ದಾರೆ. 'RSS ಎಂದರೆ Ready for Selfless Service. ಸಮಾಜಕ್ಕೆ ಯಾವುದೇ ಸಂದರ್ಭದಲ್ಲಿ ಸಮಸ್ಯೆಗಳು ಬಂದಾಗ ನಿಸ್ವಾರ್ಥದಿಂದ ಸಮಸ್ಯೆಗಳನ್ನು ಪರಿಹರಿಸಲು ಹಗಲಿರುಳು ಶ್ರಮಿಸುತ್ತಾತರೆ. ಸಂಘದ ಸ್ವಯಂ ಸೇವಕರು ಪರಿಹರಿಸುತ್ತಿದ್ದಾರೆ. ಸಂಘದ ಮೂಲಕ ಮಾಡಿದ ಸಹಾಯ ಖಂಡಿತವಾಗಿಯೂ ಕಷ್ಟದಲ್ಲಿರುವ ವ್ಯಕ್ತಿಗೆ ತಲುಪುತ್ತದೆ. Be good,Do Good' ಎಂದು ಜಗದೀಶ್‌ ಬರೆದುಕೊಂಡಿದ್ದಾರೆ.

 

'ದೇಶದಲ್ಲಿ ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳಾದಾಗ ಮತ್ತು ಈಗಿನ ಕೋರೋನಾ ವಿಪತ್ತಿನ ಸಂದರ್ಭದಲ್ಲಿಯೂ ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೇ, ಪ್ರತಿಯೊಬ್ಬ ಭಾರತೀಯರು  ಎಂದು ಸಹಾಯ ಮಾಡುವ RSS ಸಂಘಟನೆಗೆ ನಮ್ಮ ಕಿರು ಸಹಾಯ ನೀಡಿದ ಕ್ಷಣ.  Be good, do good' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.

 

ಅಂದಹಾಗೆ ಅಮೂಲ್ಯ ದಂಪತಿ ಇದು ಮೊದಲ ಬಾರಿಗೆ ಸಹಾಯ ಮಾಡುತ್ತಿರುವುದಲ್ಲ. ಪ್ರತಿ ವರ್ಷವೂ ತಮ್ಮ ಹುಟ್ಟಿದ ಹಬ್ಬಕ್ಕೆ ಅನಾಥಾಶ್ರದಲ್ಲಿರುವ ಮಕ್ಕಳಿಗೆ ಆಹಾರ, ಬಟ್ಟೆ ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್‌ ನೀಡುತ್ತಾರೆ.