Asianet Suvarna News Asianet Suvarna News

ಗಂಡನ ಬಿಟ್ಟು ಸಿಲ್ಲಿ ಕೆಲಸ ಮಾಡಲು ಹಾಟ್ ಐಂದ್ರಿತಾ ಬಹಿರಂಗ ಆಹ್ವಾನ!

ಟಿಕ್ ಟಾಕ್ ಲೋಕಕ್ಕೆ ಐಂದ್ರಿತಾ ರೇ/ ಇನ್ನು ಮುಂದೆ ಸಿಲ್ಲಿ ಕೆಲಸ ಮಾಡೋಣ ಬನ್ನಿ ಎಂದ ನಟಿ/ ಹಾಟ್ ಟಿಕ್ ಟಾಕ್ ಮೂಲಕ ಎಂಟ್ರಿ ಕೊಟ್ಟ ತಾರೆ

Actress Aindrita Ray shared her first video of tiktok
Author
Bengaluru, First Published Mar 6, 2020, 6:13 PM IST

ಬೆಂಗಳೂರು(ಮಾ. 06)  ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದ ಐಂದ್ರಿತಾ ರೇ ಗಂಡ ದೂದ್ ಪೇಡಾ ದಿಗಂತ್ ಅವರೊಂದಿಗೆ ಫೋಟೋ ಶೇರ್ ಮಾಡಿಕೊಂಡು ಸುದ್ದಿ ಮಾಡಿದ್ದರು.

ಈಗ ಎಲ್ಲವನ್ನು ಮೀರಿಸುವಂತೆ ಟಿಕ್ ಟಾಕ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ. ಶಾರ್ಟ್ ಉಡುಗೆಯಲ್ಲಿ ಮತ್ತೇರಿಸುವ ನೃತ್ಯದೊಂದಿಗೆ ಐಂದಿತ್ರಾ ರೇ ಎಂಟ್ರಿ ಕೊಟ್ಟಿದ್ದು ಸಿಲ್ಲಿ ಕೆಲಸ ಮಾಡೋಣ ಬನ್ನಿ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.

ಗಂಡನೊಂದಿಗೆ ಹಾಟ್ ಪೋಟೋ ಶೇರ್ ಮಾಡಿಕೊಂಡ ಐಂದ್ರಿತಾ

ಟಿಕ್ ಟಾಕ್ ಗೆ ಬಂದು ನನ್ನ ಜೊತೆ ಸೇರಿಕೊಳ್ಳಿ, ಸಿಲ್ಲಿ ಕೆಲಸಗಳನ್ನು ಒಟ್ಟಿಗೆ ಮಾಡೋಣ. ಟಿಕ್ ಟಾಕ್ ನಲ್ಲಿ ನನ್ನನ್ನು ಫಾಲೋ ಮಾಡಿ ಎಂದು ಐಂದ್ರಿತಾ ರೇ ಕೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಐಂದ್ರಿತಾ  ಯಾವಾಗಲೂ ಫುಲ್ ಆಕ್ಟೀವ್. ಇಸ್ಟಾ ಗ್ರ್ಯಾಮ್ ನಲ್ಲಿ ಅವರು ಹಂಚಿಕೊಳ್ಳುವ ಪೋಟೋಗಳು ಸಖತ್ ಲೈಕ್ ಪಡೆದುಕೊಳ್ಳುತ್ತವೆ. ಇದೀಗ ಒಂದು ಹಂತ ಮುಂದೆ ಹೋಗಿದ್ದು ಟಿಕ್ ಟಾಕ್ ಮೂಲಕ ಬೆಂಕಿ ಹಚ್ಚಲು ಬಂದಿದ್ದಾರೆ.

 

 

 
 
 
 
 
 
 
 
 
 
 
 
 

Finally on TikTok come groove with me on #tiktok n let’s get silly together 🤪 #followmeontiktok

A post shared by Aindrita Ray (@aindrita_ray) on Mar 4, 2020 at 10:14am PST

Follow Us:
Download App:
  • android
  • ios