Asianet Suvarna News Asianet Suvarna News

'ನಿಮ್ಮ ಮನೆ ಹೆಂಗಸ್ರನ್ನ ರಾಹುಲ್‌ ಗಾಂಧಿ ಜತೆ ಮಲಗಿಸಿ ನಪುಂಸಕ ಹೌದೋ ಅಲ್ವೋ ಗೊತ್ತಾಗುತ್ತೆ..' ಕಾಂಗ್ರೆಸ್‌ ನಾಯಕನ ವಿವಾದಿತ ಮಾತು

ರಾಹುಲ್‌ ಗಾಂಧಿಯನ್ನು ನಪುಂಸಕ ಎಂದು ಕರೆದ ಬಿಜೆಪಿ ನಾಯಕ ಭೂಪತ್‌ ಭಯಾನಿ ಮಾತಿಗೆ ಪ್ರತಿಕ್ರಿಯೆ ನೀಡುವ ವೇಳೆ ಗುಜರಾತ್‌ ಕಾಂಗ್ರೆಸ್‌ ನಾಯಕ ಪ್ರಯಾಪ್‌ ದುದತ್‌ ಹೇಳಿರುವ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
 

Gujarat Congress leader Pratap Dudhat your women sleep with Rahul Gandhi to check if hes impotent san
Author
First Published Apr 24, 2024, 7:16 PM IST | Last Updated Apr 24, 2024, 7:16 PM IST

ನವದೆಹಲಿ (ಏ.24): ಗುಜರಾತ್ ಕಾಂಗ್ರೆಸ್ ನಾಯಕ ಪ್ರತಾಪ್ ದುದತ್ ಅವರು ಇತ್ತೀಚೆಗೆ ರಾಹುಲ್ ಗಾಂಧಿಯನ್ನು 'ನಪುಂಶಕ್' (ದೌರ್ಬಲ್ಯ) ಎಂದು ಕರೆದ ಬಿಜೆಪಿ ನಾಯಕ ಭೂಪತ್ ಭಯಾನಿ ಅವರನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುವ ವೇಳೆ ನೀಡಿದ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್‌ನಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ರಾಹುಲ್‌ ಗಾಂಧಿ ನಪುಂಸಕ ಹೌದೋ? ಅಲ್ಲವೋ ಎಂದು ತಿಳಿಯಲು ಜನರು ತಮ್ಮ ಹೆಂಡತಿ-ಮಗಳನ್ನು ಅವರೊಂದಿಗೆ ಮಲಗಲು ಕಳಿಸಿದರೆ ಸಾಕು ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಪ್ರತಾಪ್‌ ದುದತ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳು ಆಗ್ರಹಿಸಿವೆ. 'ರಾಹುಲ್‌ ಗಾಂಧಿ ಅವರ ಪುರುಷತ್ವ ಪರೀಕ್ಷೆ ಮಾಡ್ಬೇಕು ಅಂದಿದ್ದರೆ, ನಿಮ್ಮ ಸಹೋದರಿ ಅಥವಾ ಮಗಳನ್ನು ರಾಹುಲ್‌ ಗಾಂಧಿ ಜತೆ ಮಲಗಲು ಬಿಡಿ ಎಂದು ಕಾಂಗ್ರೆಸ್‌ ನಾಯಕ ಪ್ರತಾಪ್‌ ದುದತ್‌ ಹೇಳಿದ್ದಾರೆ. ಇದು ಎಷ್ಟು ನೀಚ ಹೇಳಿಕೆ. ಇದು ಪ್ರತಾಪ್‌ ದುದತ್‌ ಅವರ ಮಾತಲ್ಲ. ಕಾಂಗ್ರೆಸ್‌ ನಾಯಕರ ಡಿಎನ್‌ಎಯಲ್ಲೇ ಇಂಥ ಮಾತುಗಳು ಇವೆ' ಎಂದು ಗುಜರಾತ್‌ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಝುಬಿನ್‌ ಅಶಾರಾ ಹೇಳಿದ್ದಾರೆ.

ಇತ್ತೀಚೆಗೆ ಬಿಜೆಪಿಗೆ ಸೇರಿರುವ ಆಮ್‌ ಆದ್ಮಿ ಪಕ್ಷದ ಶಾಸಕ ಭೂಪತ್‌ ಭಯಾನಿ, ರಾಹುಲ್‌ ಗಾಂಧಿಯವರ ನಾಯಕತ್ವದ ಗುಣಗಳ ಬಗ್ಗೆ ಪ್ರಶ್ನೆ ಮಾಡುತ್ತಾ, ಅವರ ಪುರುಷತ್ವದ ಬಗ್ಗೆಯೇ ಪ್ರಶ್ನೆ ಮಾಡಿದ್ದರು. ಸೋಮವಾರ ಜುನಾಗಢದಲ್ಲಿ ಮಾತನಾಡಿದ್ದ ಅವರು, ದೇಶವನ್ನು ಯಾವುದೇ ಕಾರಣಕ್ಕೂ ನಪುಂಸಕನಾದ ರಾಹುಲ್‌ ಗಾಂಧಿ ಅವರ ಕೈಗೆ ನೀಡಬಾರದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಅವರ ಮಾತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕವೂ ಭಯಾನಿ ತಾವು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದರು. ಈ ದೇಶದಲ್ಲಿ ನನಗೆ ವಾಕ್‌ ಸ್ವಾತಂತ್ರ್ಯವಿದೆ. ಚುನಾವಣಾ ಆಯೋಗದ ಚೌಕಟ್ಟಿನ ಒಳಗೆ ಈ ಕಾಮೆಂಟ್‌ ಮಾಡಿದ್ದೇನೆ ಎಂದಿದ್ದರು.

ಜುನಾಗಢ್‌ನ ವಿಸಾವ್ದಾರ್‌ನಲ್ಲಿ ಕೇಂದ್ರ ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಯಾನಿ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪಕ್ಷದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದ ಗುಣಗಳನ್ನು ಹೋಲಿಕೆ ಮಾಡಿದ್ದರು.

'ಮಧ್ಯಮ ವರ್ಗವದರು ಸ್ವಾರ್ಥಿಗಳು..' To 'ಪಿತ್ರಾರ್ಜಿತ ತೆರಿಗೆ' ಕಾಂಗ್ರೆಸ್‌ಗೆ Sam Pitroda ಸೆಲ್ಫ್‌ ಗೋಲ್‌!

"ದೇಶದ ಚುಕ್ಕಾಣಿಯನ್ನು ನರೇಂದ್ರಭಾಯಿಯಂತಹ ಸಮರ್ಥ ನಾಯಕತ್ವದ ಕೈಯಲ್ಲಿ ಮಾತ್ರ ಒಪ್ಪಿಸಬಹುದು" ಎಂದು ಹೇಳಿದ ಅವರು, ನನ್ನ ಭಾಷಣ ಚುನಾವಣಾ ಆಯೋಗದ ಮಿತಿಯಲ್ಲಿಯೇ ಇದೆ ಎಂದಿದ್ದಾರೆ. ಹಾಗೇನಾದರೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳುವ ಮೂಲಕ ಭಯಾನಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು.

'ಜಿಂದಗಿ ಕೆ ಸಾಥ್‌ ಬೀ, ಜಿಂದಗಿ ಕೆ ಬಾದ್‌ ಬೀ..' ಎಲ್‌ಐಸಿ ಸ್ಲೋಗನ್‌ ಹೇಳಿಕೆ ಕಾಂಗ್ರೆಸ್‌ಗೆ ತಿವಿದ ಮೋದಿ!

ಭಯಾನಿಯವರ ಹೇಳಿಕೆಗಳ ಪರಿಣಾಮವು ಪಕ್ಷಭೇದವನ್ನು ಮೀರಿ ಹರಿದಾಡಿತು, ಜುನಾಗಢ್ ಸಿಟಿ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಜೋಶಿ ಕೂಡ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ಜೋಶಿ ಖಂಡಿಸಿದರು, ರಾಜಕೀಯ ವಿನಿಮಯದಲ್ಲಿ ಗೌರವಯುತವಾದ ಸಂಭಾಷಣೆಯ ಅಗತ್ಯವನ್ನು ಒತ್ತಿ ಹೇಳಿದರು. "ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ಮೇಲೆ ಮಾಜಿ ವಿಸಾವ್ದಾರ್ ಶಾಸಕ ಭೂಪತಭಾಯ್ ಭಯಾನಿ ಅವರು ನಿನ್ನೆ ಮಾಡಿದ ಕಾಮೆಂಟ್‌ಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ಜೋಶಿ ಹೇಳಿದ್ದಾರೆ.

 

 

Latest Videos
Follow Us:
Download App:
  • android
  • ios