ನಟಿ ಅದಿತಿ ಪ್ರಭುದೇವಳ ಮಗಳಿಗೆ 10 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಮಗಳೊಂದಿಗೆ ಮುದ್ದಾದ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳೊಂದಿಗೆ ಅಂಬೆಗಾಲಿಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಂದನವನದ ಸುಂದರಿ, ಬ್ಯೂಟಿಫುಲ್ ಅಮ್ಮ ಆಗಿರುವ ನಟಿ ಅದಿತಿ ಪ್ರಭುದೇವ (Aditi Prabhudeva). ಸದ್ಯ ತಾಯ್ತನದ ಸುಖದ ಜೊತೆಗೆ, ತಮ್ಮ ಕರಿಯರ್ ಕಡೆಗೂ ಗಮನ ಹರಿಸುತ್ತಿದ್ದಾರೆ ನಟಿ. ಇದೀಗ ಅದಿತಿ ಪ್ರಭುದೇವ ಮಗಳಿಗೆ 10 ತಿಂಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಟಿ ಮಗಳ ಜೊತೆಗಿನ ಮುದ್ದಾದ ವಿಡಿಯೋ ಒಂದನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದು, ಈ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.
ನಟಿ ಅದಿತಿ ಪ್ರಭುದೇವ ಮಗಳ 6 ತಿಂಗಳ ಬರ್ತ್ ಡೇ ಸಂಭ್ರಮ ಹೀಗಿತ್ತು….
ನಟಿ ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ 6 ತಿಂಗಳು ತುಂಬಿದ ಬಳಿಕ ಮಗುವಿನ ಮುಖವನ್ನು ಅದ್ಧೂರಿಯಾಗಿಯೇ ರಿವೀಲ್ (baby face reveal) ಮಾಡಿದ್ದರು. ಅದರ ಜೊತೆಗೆ ಮಗಳ 6ನೇ ತಿಂಗಳ ಅಂದರೆ ಅರ್ಧ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ, ಮುದ್ದು ಮುದ್ದಾದ ಫೋಟೊಗಳನ್ನು ರಿವೀಲ್ ಮಾಡಿದ್ದರು. ಅದಿತಿ ಪ್ರಭುದೇವ ಮತ್ತು ಪತಿ ಯಶಸ್ ಪಾಟ್ಲಾ (Yashas Patla) ಮಗಳಿಗೆ ನೇಸರ ಎಂದು ಹೆಸರಿಟ್ಟಿದ್ದರು. ಇದೀಗ ಅದಿತಿಯ ಪುಟ್ಟ ದೇವತೆಗೆ 10 ತಿಂಗಳು ಪೂರ್ಣವಾಗಿದ್ದು, ಈ ಹಿನ್ನೆಲೆಯಲ್ಲಿ ನಟಿ ಮಗಳು ಅಂಬೆಗಾಲಿಟ್ಟು ಓಡಾಡುವಾಗ, ಆಕೆಯ ಜೊತೆ ತಾನು ಮಗುವಿನಂತೆ ಅಂಬಗಾಲಿಟ್ಟು ಓಡಾಡುವ ಮುದ್ದಾದ ವಿಡಿಯೋ ಶೇರ್ ಮಾಡಿದ್ದಾರೆ. ಇದರ ಜೊತೆಗೆ ಜೊತೆಯಾಗಿ ನಡೆಯುವೆ ನಾ ಮಳೆಯಲು ಬಿಡದಂತೆ ಹಿಡಿವೆ ಈ ಕೈಯನು ಎನ್ನುವ ಹಾಡನ್ನು ಕೂಡ ಹಿನ್ನೆಲೆಯಲ್ಲಿ ಹಾಕಿದ್ದಾರೆ. ಈ ವಿಡಿಯೋದಲ್ಲಿ ಅಮ್ಮ ಮಗಳ ಮುದ್ದಾದ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ಕೊನೆಗೂ ಮುದ್ದು ಮಗಳ ಫೋಟೊ ಜೊತೆ ಹೆಸರು ರಿವೀಲ್ ಮಾಡಿದ ನಟಿ ಅದಿತಿ ಪ್ರಭುದೇವ…
ಮುದ್ದಾದ ವಿಡೀಯೋ ಜೊತೆಗೆ ಅದಿತಿ ಮಗಳಿಗೆ 10 ತಿಂಗಳು (10 month old) ತುಂಬಿರುವ ಸುಂದರವಾದ ದಿನ ಇಂದು. ಐ ಲವ್ ಯೂ ನನ್ನಮ್ಮ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿ, ನಟಿ ಮಲೈಕಾ ವಸುಪಾಲ್ ಹಾಗೂ ನಟಿ ನಿರೂಪಕಿ ಅನುಪಮಾ ಗೌಡ, ಆದಷ್ಟು ಬೇಗ ಈ ಮುದ್ದು ಪುಟಾಣಿಯನ್ನು ಭೇಟಿಯಾಗಬೇಕು ಎಂದು ಬರೆದುಕೊಂಡಿದ್ದಾರೆ. ಗರ್ಭಿಣಿಯಾದ ಬಳಿಕ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದ ಅದಿತಿ ಪ್ರಭುದೇವ, ಮಗುವಿಗೆ ಮೂರು ತಿಂಗಳು ತುಂಬುವಷ್ಟರಲ್ಲಿ ರಾಜಾ ರಾಣಿ ರೀಲೋಡೆಡ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಇದೀಗ ಅದಿತಿ ನಟಿಸಿರುವ ಛೂ ಮಂಥರ್ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲಿ ಶರಣ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಹಾರರ್ ಸಿನಿಮಾ (horror film) ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
